ಇದು ಭಾರತದ `ಶ್ರೀಮಂತ' ಭಿಕ್ಷುಕರ ಕಥೆ..!

Date:

ಏನಪ್ಪಾ ಈ ಟೈಟಲ್ಲು..? ಶ್ರೀಮಂತ ಭಿಕ್ಷುಕರಿದ್ದಾರಾ..? ಅಂತ ತಲೆ ಕೆರೆದುಕೊಳ್ಳಬೇಡಿ. ನಿಜಕ್ಕೂ ಮಿಲಿಯನ್ ಗಟ್ಟಲೆ ಆಸ್ತಿ ಮಾಡಿದ ಭಿಕ್ಷುಕರಿದ್ದಾರೆ. ಅವರ ತಿಂಗಳ ಆದಾಯ ಎಂಜಿನಿಯರ್ಗಳಿಗಿಂತ ತುಸು ಜಾಸ್ತಿ ಇದೆ ಅಂದರೂ ನೀವು ನಂಬದೇ ಬೇರೆ ದಾರಿಯಿಲ್ಲ. ಇಷ್ಟಕ್ಕೂ ಅಂಥ ಶ್ರೀಮಂತ ಭಿಕ್ಷಾಧಿಪತಿಗಳು ಯಾರು..? ಅವರು ಎಲ್ಲಿದ್ದಾರೆ..? ಅವರ ಜೀವನ ಹೇಗಿದೆ ಅಂತೀರಾ ನೀವೇ ನೋಡಿ..

1. ಭರತ್ ಜೈನ್

ಈತ ಮುಂಬೈನ ಫೇಮಸ್ ಬೆಗ್ಗರ್. ಯೆಸ್ ಫೇಮಸ್ ಬೆಗ್ಗರ್..! ಈತ ಅಮ್ಮಾ ತಾಯಿ ಅಂದರೆ ಭಿಕ್ಷೆ ಹಾಕದವರಿಲ್ಲ ಅನ್ನಿಸುತ್ತೆ. ಅದೇ ಕಾರಣಕ್ಕೆ ಈತ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಕಿಸೆಯನ್ನು ಭರ್ತಿ ಮಾಡಿಕೊಂಡಿರುತ್ತಾನೆ. ಇಷ್ಟಕ್ಕೂ ಈತನಿಗೊಂದು ಹೆಗ್ಗಳಿಕೆ ಇದೆ. ಅದೇನೆಂದರೆ ಈತನೇ ಭಾರತದ ಅತೀ ಶ್ರೀಮಂತ ಬೆಗ್ಗರ್..! ಹೌದೂ ರೀ ಈತನ ತಿಂಗಳ ಆದಾಯ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಈತನ ಆಸ್ತಿ ಬಗ್ಗೆ ಕೇಳಿದರಂತೂ ಪೆಚ್ಚಾಗಿ ಹೋಗ್ತೀರಿ.
ಭರತ್ ಜೈನ್ ತಿಂಗಳಿಗೆ ಏನಿಲ್ಲವೆಂದರೂ 80,000 ದಿಂದ 1 ಲಕ್ಷ ರೂಪಾಯಿ ದುಡಿಯುತ್ತಾನೆ. ಅದೇ ಆದಾಯದಲ್ಲಿ ಈಗಾಗಲೇ ಮುಂಬೈನ ಪ್ರತಿಷ್ಟಿತ ಬಡಾವಣೆಯಲ್ಲಿ ಭರ್ಜರಿಯಾದ 2 ಮನೆಗಳನ್ನು ಕಟ್ಟಿಸಿದ್ದಾನೆ. ಅವುಗಳಿಂದ ಏನಿಲ್ಲವೆಂದರೂ 20,000 ಬಾಡಿಗೆಯಂತೂ ಬಂದೇ ಬರುತ್ತದೆ. ಅಷ್ಟೇ ಅಲ್ಲ, ಈತನ ಕುಟುಂಬಸ್ಥರು ಶಾಲೆಗಳಿಗೆ ಬಟ್ಟೆ ಸಪ್ಲೈ ಮಾಡುತ್ತಾರೆ. ಅದರಿಂದಲೂ ಭರ್ಜರಿ ಕಮಾಯಿ ಮಾಡ್ತಾರೆ..!
ಇಷ್ಟಕ್ಕೂ ಭರತ್ ಜೈನ್ನ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಗೊತ್ತಾ..? 80 ಲಕ್ಷಕ್ಕೂ ಹೆಚ್ಚು..! ಬೆಚ್ಚಿ ಬೀಳಬೇಡಿ ಬರೋಬ್ಬರಿ 80 ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾನೆ ಭಿ(ಲ)ಕ್ಷಾಧಿಪತಿ.

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

2. ಸಂಭಾಜಿ ಕಾಳೆ

ನಾವು ಭಾರತೀಯರು. ಯಾರೇ ಕಷ್ಟದಲ್ಲಿ ಹಣ ಕೇಳಿದರೂ ಧಾರಾಳವಾಗಿ ನೀಡಿಬಿಡುತ್ತೇವೆ. ಅದರಲ್ಲಂತೂ ಭಿಕ್ಷುಕರಿಗೆ ಅಯ್ಯೋ ಪಾಪ ಅಂತ ಹಣ ಕೊಟ್ಟುಬಿಡುತ್ತೇವೆ. ಅದರಿಂದಲೇ ಭಿಕ್ಷುಕರು ಶ್ರೀಮಂತರಾಗಿದ್ದಾರೆ. ಹೌದು ಸಂಭಾಜಿ ಕಾಳೆ ಎಂಬ ಸೋಲಾಪುರದ ಒಬ್ಬ ಭಿಕ್ಷುಕ ಈಗ ಲಕ್ಷ ಲಕ್ಷ ದುಡಿಯುವ ಭಿಕ್ಷುಕ ಎನಿಸಿಕೊಂಡಿದ್ದಾನೆ..! ದಿನಕ್ಕೆ ಏನಿಲ್ಲವೆಂದರೂ 3000 ರೂಪಾಯಿ ದುಡಿಯುವ ಸಂಭಾಜಿ ಕಾಳೆ, ತಿಂಗಳಿಗೆ 80,000ಕ್ಕೂ ಹೆಚ್ಚಿನ ಆದಾಯ ಗಳಿಸುತ್ತಾನೆ..! ಈತನ ಆದಾಯ ಕೇಳಿಯೇ ಕೆಲ ಉದ್ಯೋಗಸ್ಥರು ಬೆಸ್ತು ಬಿದ್ದಿದ್ದಾರೆ.
ಸಂಭಾಜಿ ಕಾಳೆಯು ಸೋಲಾಪುರದಲ್ಲಿ ಜಮೀನು ಖರೀದಿ ಮಾಡಿದ್ದು, ರೀಯಲ್ ಎಸ್ಟೇಟ್ ಮಾಡುವ ಯೋಚನೆಯಲ್ಲೂ ಇದ್ದಾನಂತೆ..! ಅಲ್ಲದೇ 40 ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಕಾಳೆ, ಸ್ಟಾಕ್ ಮಾರ್ಕೆಟ್ ನಲ್ಲೂ ಇನ್ವೆಸ್ಟ್ ಮಾಡಬೇಕು ಎಂದುಕೊಂಡಿದ್ದಾನೆ ಎಂದರೆ ಅವನ ಆದಾಯ, ಭಿಕ್ಷೆ ಬೇಡಿ ಹಣ ಮಾಡುವ ಚಾಲಾಕಿತನ ಎಂಥದ್ದು ಎಂಬುದು ಅರ್ಥವಾಗುತ್ತದೆ.

3. ಕೃಷ್ಣ ಕುಮಾರ್

ಒಂದು ಹರಕು ಅಂಗಿ, ಕೈಯ್ಯಲ್ಲೊಂದು ಕೋಲು, ಸಾರ್ ಸಾರ್ ಎನ್ನುವ ಮಾತೇ ಆತನ ಬಂಡವಾಳ. ನಲ್ಲಸಪುರ್ ಏರಿಯಾ ಆತನ ವರ್ಕಿಂಗ್ ಸ್ಪಾಟ್. ತಿಂಗಳಿಗೆ 70 ಸಾವಿರದಿಂದ 80 ಸಾವಿರ ಆದಾಯ. ಆತನ ಕೆಲಸ ಟ್ರಾಫಿಕ್ ನಲ್ಲಿ ಭಿಕ್ಷೆ ಬೇಡುವುದು..! ಯೆಸ್ ಭಿಕ್ಷೆ ಬೇಡಿಕೊಂಡೇ 70, 80 ಸಾವಿರ ದುಡಿಯುವ ಈ ಭಿಕ್ಷುಕನ ಹೆಸರು ಕೃಷ್ಣ ಕುಮಾರ್ ಅಂತ.
ಭಿಕ್ಷೆ ಬೇಡುವ ಕಲೆ ಅವನಿಗೆ ಹೇಗೆ ಸಿದ್ದಿಸಿಕೊಂಡಿದೆ ಎಂದರೆ, ಆತ ಟ್ರಾಫಿಕ್ ನಲ್ಲಿ ಅಮ್ಮಾ ತಾಯಿ ಅಂದರೆ ಸಾಕು ತಟ್ಟೆ ತುಂಬಾ ಚಿಲ್ಲರೆ, ಕೆಲವೊಂದು ನೋಟುಗಳು ಬೀಳುತ್ತವೆ. ಸಂಜೆ ಹೋಗುವಾಗ ಕಿಸೆಯಲ್ಲಿ ಕನಿಷ್ಟ 2 ಸಾವಿರ ರೂಪಾಯಿ ತುಂಬಿರುತ್ತದೆ. ಭಿಕ್ಷೆ ಭೇಡಿ ಬಂದ ಹಣದಿಂದಲೇ ಕೃಷ್ಣ ಕುಮಾರ್ ನಲ್ಲಸಪುರ ಏರಿಯಾದಲ್ಲಿ 2 ಪ್ಲ್ಯಾಟ್ ಗಳನ್ನು ಖರೀದಿಸಿದ್ದಾನೆ. ಮುಂಬೈನ ವಿವಿಧೆಡೆ ವಿವಿಧ ಬಿಸಿನೆಸ್ ಮಾಡುತ್ತಿದ್ದಾನೆ..! ಅಲ್ಲದೇ ಬ್ಯಾಂಕ್ ಗಳಲ್ಲಿ ಕನಿಷ್ಟ 40 ಲಕ್ಷಕ್ಕೂ ಹೆಚ್ಚು ಬ್ಯಾಲೆನ್ಸ್ ಹೊಂದಿದ್ದಾನೆ..! ಇಷ್ಟೇ ಅಲ್ಲದೇ ತನ್ನ ಸಹೋದರನಿಗಾಗಿ 5 ಲಕ್ಷ ಬೆಲೆ ಬಾಳುವ ಮನೆ ಕಟ್ಟಿಸಿಕೊಟ್ಟಿದ್ದಾನೆ..!

ಕೈಯ್ಯಲ್ಲೊಂದು ತಟ್ಟೆ, ಡಿಫರೆಂಟ್ ಸ್ಟೈಲಲ್ಲಿ ಅಮ್ಮಾ ತಾಯಿ ಅಂದ್ರೆ ಸಾಕು.. ಬೆಕ್ಕಸ ಬೆರಗಾಗುವಂತೆ ಬೊಕ್ಕಸ ತುಂಬಿಸುತ್ತಾರೆ ನಮ್ಮ ಜನ. ಭಿಕ್ಷುಕರನ್ನೂ ಲಕ್ಷಾಧಿಪತಿಗಳನ್ನಾಗಿಸಿ ತಾವು ಜನ ಸಾಮಾನ್ಯರಾಗಿರುತ್ತಾರೆ. ಅದಕ್ಕೆ ಹೇಳೋದು ಇಂಡಿಯಾ ಈಸ್ ಗ್ರೇಟ್.

  • ರಾಜಶೇಖರ ಜೆ

POPULAR  STORIES :

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...