ನೀವು ಈ ರೆಸ್ಟೋರೆಂಟ್ ಗೆ ಹೋಗಿ , ಸಪ್ಲೈಯರ್ ಎಲ್ಲಿ ಅಂತ ಹುಡಕುತ್ತಾ ಕೂಡ ಬೇಡಿ…! ನಿಮ್ಮ ಹತ್ರ ಮನುಷ್ಯ ಸಪ್ಲೈಯರ್ ಬರೋದೇ ಇಲ್ಲ. ಇಲ್ಲಿ ಸಪ್ಲೈ ಮಾಡೋದು ರೋಬೋಟ್ ಗಳು…!
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಹೊಸದಾಗಿ ರೆಸ್ಟೋರೆಂಟೊಂದು ಆರಂಭವಾಗಿದೆ. ಇಲ್ಲಿ ರೋಬೋಟ್ ಗಳೇ ಸಪ್ಲೈ ಮಾಡೋದು. ಇಲ್ಲಿ ಫುಡ್ ಮೀಟ್ಸ್ ಟೆಕ್ನಾಲಜಿ, ಅಂದ್ರೆ ಆಹಾರದ ಜೊತೆ ತಂತ್ರಜ್ಞಾನ ಅಂತ ಬೋರ್ಡ್ ಹಾಕಿದ್ದಾರೆ.
ಈ ರೆಸ್ಟೋರೆಂಟ್ ಹೆಸರು ನವ್ಲೂ. ಇಲ್ಲಿ ,5 ರೋಬೋಟ್ ಗಳು ಸಪ್ಲೈ ಮಾಡೋದೇ ಸ್ಪೆಷಲ್.
ಎರಡು ರೋಬೋಟ್ ಗಳಿಗೆ ಗಿಂಜರ್ ಎಂದು ಮೂರು ರೋಬೋಟ್ ಗಳಿಗೆ ಫೆರ್ರಿ ಎಂದು ಹೆಸರಿಟ್ಟಿದ್ದಾರೆ.