ಅಬ್ಬಾ ಏನು ಕಾಲ ಬಂತಪ್ಪಾ ಎಂದು ಗೊಣಗಿಕೊಳ್ಳುವವರಿಗೆ ಇನ್ನೊಂದು ಆಘಾತಕಾರಿ ಸುದ್ದಿ ಬಂದಿದೆ. ಅದೇನೆಂದರೆ ಮುಂದಿನ ಹತ್ತು ವರ್ಷಗಳ ನಂತರ ಅಂದರೆ 2025ರ ವೇಳೆಗೆ ಮಾನವರು ಅದರಲ್ಲೂ ಹೆಚ್ಚಾಗಿ ಮಹಿಳೆಯರು ಲೈಂಗಿಕ ಕ್ರಿಯೆಗಳಿಗೆ ಯಂತ್ರ ಮಾನವರ (ರೋಬೋಟ್) ಮೊರೆ ಹೋಗಲಿದ್ದಾರೆ ಎನ್ನಲಾಗಿದೆ.
ಪ್ರಸ್ತುತವಾಗಿ ನೀಲಿ ಚಿತ್ರಗಳನ್ನು ಸುಲಲಿತವಾಗಿ ವೀಕ್ಷಿಸುವಂತೆಯೇ ಮುಂಬರುವ ದಶಕದಲ್ಲಿ ರೊಬೋಟ್‍ಗಳ ಜತೆ ಹಾಸಿಗೆ ಹಂಚಿಕೊಳ್ಳುವುದು ಸಾಮಾನ್ಯದ ಸಂಗತಿಯಾಗಲಿದೆ ಎಂದು ದುಬೈ ಮೂಲದ ಡಾ. ಇಯಾನ್ ಪಿಯರ್ಸನ್ ತಮ್ಮ`ಫ್ಯೂಚರ್ ಆಫ್ ಸೆಕ್ಸ್’ ವರದಿಯಲ್ಲಿ ತಿಳಿಸಿದ್ದಾರೆ. ಈ ಹವ್ಯಾಸ ಅದೆಷ್ಟು ಪರಿಣಾಮಕಾರಿಯಾಗಿರಲಿದೆ ಎಂದರೆ ಸ್ವತಃ ಮಾನವನನ್ನು ಈ ರೋಬೋಟ್‍ಗಳು ಮೀರಿಸಲಿದೆ ಎನ್ನಲಾಗಿದೆ. ಇವು ಕೇವಲ ಲೈಂಗಿಕ ಕ್ರೀಡೆಗಳಷ್ಟೇ ಅಲ್ಲದೇ ಪ್ರೀತಿಯ ಬಲೆಯಲ್ಲೂ ಸಿಕ್ಕಿಸಲಿದೆ ಎಂದು ಪಿಯರ್ಸನ್ ತಿಳಿಸಿದ್ದಾರೆ.
ಈ ವಿಚಿತ್ರ ಹವ್ಯಾಸಕ್ಕೆ `ರೋಬೋಫೀಲಿಯಾ’ ಎಂದು ಹೆಸರಿಸಲಾಗಿದ್ದು, ಇವುಗಳು ಬಹಿಷ್ಕಾರದ ವಸ್ತುಗಳನ್ನಾಗಿರದೇ ಹುಡುಗಿಯುರ ಕೋಣೆ ಆಕ್ರಮಿಸಿಕೊಳ್ಳಲಿವೆ. ಮುಂದಿನ ಪೀಳಿಗೆಗೆ ಮಹಿಳೆಯರಿಗೆ ಪುರುಷರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಬೋಟ್‍ಗಳು ಹಾಸಿಗೆ ಹಂಚಿಕೊಳ್ಳಲಿವೆ ಎಂದು ಅಚ್ಚರಿಯ ಮಾಹಿತಿ ಹೊರಹಾಕಲಾಗಿದೆ. ಲೈಂಗಿಕ ಕ್ರೀಯೆಯ ಅವಕಾಶ ವಂಚಿತರು ಅದರಲ್ಲೂ ಹೆಚ್ಚಾಗಿ ವಯಸ್ಕರಿಗೆ ಪುನಃ ಲೈಂಗಿಕ ಆಸಕ್ತಿ ಮೂಡಿಸಲು ಈ ರೋಬೋಗಳು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
- ವಿಶ್ವನಾಥ. ಶೇರಿಕಾರ್
POPULAR STORIES :
ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!
ಸಿಂಹದೊಂದಿಗೆ ಪೋಸ್ ಕೊಟ್ಟ ಜಡೇಜಾ ದಂಪತಿಗೆ ಸಂಕಷ್ಟ..!
7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!
ರಾಹುಲ್ ದ್ರಾವಿಡ್ ಕೊನೆ ಏಕದಿನ ಆಟವನ್ನು ನೋಡಿಲ್ವಾ? ಇಲ್ಲಿದೆ ದ್ರಾವಿಡ್ ಕೊನೆ ಪಂದ್ಯದ ಅದ್ಭುತ ಆಟ
ಮೂಢನಂಬಿಕೆ ಆಚರಣೆ ಕಾಯಿದೆ ಜಾರಿಗೆ ಬರುವುದೇ..?
ಸ್ನೇಹ ಸಂಪತ್ತು… ಫ್ರೆಂಡ್ಶಿಪ್ ಅಂದ್ರೆ ಅದೆಂಥಾ ತ್ಯಾಗ..!
ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?
ಚೀನಾದಲ್ಲಿ ಬೆತ್ತಲೆ ಚಿತ್ರ ಕೊಟ್ರೆ ಲೋನ್ ಕೊಡ್ತಾರೆ..! ಮಹಿಳೆಯರ ನಗ್ನ ಚಿತ್ರವೇ ಲೋನ್‍ಗೆ ಶೂರಿಟಿ…!
ಬೊಕ್ಕುತಲೆ ಕಸಿ, ವಿಗ್ ಜೋಡಣೆ ಚಟುವಟಿಕಿಗೆ ಬ್ರೇಕ್ : ಯು.ಟಿ ಖಾದರ್
ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ | ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ