ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 17 ನೇ ಏಕದಿನ ಶತಕ ಬಾರಿಸಿದ್ದಾರೆ. ಪೋರ್ಟ್ ಎಲಿಜಬತ್ ನ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶತಕಗಳಿಸಿ ಆಡುತ್ತಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ನಡೆಸುತ್ತಿರುವ ಭಾರತ ರೋಹಿತ್ ಅವರ ಶತಕದ ಬಲದಿಂದ 36ಓವರ್ ಗಳಲ್ಲಿ 203ರನ್ ಗಳಿಸಿ ಆಟ ಮುಂದುವರೆಸಿದೆ.
ಶಿಖರ್ ಧವನ್ 34, ವಿರಾಟ್ ಕೊಹ್ಲಿ 36, ಅಜಿಂಕ್ಯಾ ರಹಾನೆ 8 ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ. ಶ್ರೇಯಸ್ ಅಯ್ಯರ್ 12 ಮತ್ತು ರೋಹಿತ್ ಶರ್ಮಾ 101 ರನ್ ಗಳಿಸಿ ಆಡುತ್ತಿದ್ದಾರೆ.