ದೆಹಲಿ ತಂಡದ ನಾಯಕ ರಿಷಭ್ ಪಂತ್ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರ ದಾಖಲೆ ಮುರಿದಿದ್ದಾರೆ.
ಮುಷ್ತಾಕ್ ಅಲಿ ಟಿ-20 ಸರಣಿಯಲ್ಲಿ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಇವರ ಶತಕದ ನೆರವಿನಿಂದ ದೆಹಲಿ ತಂಡ 10 ವಿಕೆಟ್ ಗಳ ಭರ್ಜರಿ ಜಯಪಡೆಯಿತು.
ಹಿಮಾಚಲ ಪ್ರದೇಶ ನೀಡಿದ 144 ರನ್ ಗಳ ಗುರಿಯನ್ನು ಬೆನ್ನತ್ತಿದ ದೆಹಲಿ ತಂಡ ಕೇವಲ 11.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.
ಪಂತ್ 38 ಎಸೆತಗಳಲ್ಲಿ 8 ಬೌಂಡರಿ ಹಾಗೂ 12 ಸಿಕ್ಸರ್ ಮೂಲಕ 112 ರನ್ ಗಳಿಸಿ ಅಜೇಯರಾಗಿ ಉಳಿದರು. ಅದೇರೀತಿ ಗಂಭೀರ್ 33 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದರು.
32 ಎಸೆತಗಳಲ್ಲಿ ಶತಕ ಬಾರಿಸಿ ಪಂತ್ ಟಿ20ಯಲ್ಲಿ ಅತಿವೇಗದ ಶತಕ ಬಾರಿಸಿದ ಭಾರತೀಯ ಎಂಬ ಕೀರ್ತಿಗೆ ಭಾಜನರಾದದರು. ವೆಸ್ಟ್ ಇಂಡೀಸ್ ನ ಕ್ರೀಸ್ ಗೇಲ್ 2013ರ ಐಪಿಎಲ್ ನಲ್ಲಿ 30 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆ ಅಳಿಸಲು ಪಂತ್ ಗೆ ಸಾಧ್ಯವಾಗಿಲ್ಲ, ಆದರೆ, ರೋಹಿತ್ ಶರ್ಮಾ (35 ಎಸೆತದಲ್ಲಿ ಶತಕ) ಅವರ ದಾಖಲೆ ಅಳಿಸಿದರು.