ಐಎಎಸ್ ಆಗಬೇಕು ಎನ್ನುವುದು ಎಷ್ಟೋ ಜನರ ಆಸೆ. ಅದಕ್ಕಾಗಿ ಹಗಲಿರುಳೆನ್ನದೇ ಅಭ್ಯಾಸ ಮಾಡುವ ಅದೆಷ್ಟೋ ಜನರು ನಮ್ಮ ದೇಶದಲ್ಲಿ ಇದ್ದಾರೆ. ಇನ್ನೊಂದೆಡೆ ಕೆಲವರಿಗೆ ಪಾಠ ಮಾಡುವುದೆಂದರೆ ಇಷ್ಟದ ಕೆಲಸ. ಹೀಗೆ ಅವರವರ ಭಾವಕ್ಕೆ ತಕ್ಕಂತೆ ತಮಗೆ ಇಷ್ಟವಾದ ಕೆಲಸವನ್ನೇ ಆಯ್ದುಕೊಳ್ಳುತ್ತಾರೆ. ಅದು ಸಾಧ್ಯವಾಗದಿದ್ದಾಗ ಆಸೆ ಕೈಗೂಡಲಿಲ್ಲ ಎಂದು ಕೊರಗುತ್ತಾರೆ. ಆದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ಮಾತ್ರ ಕೆಲಸ ಬಿಟ್ಟು ಉಪನ್ಯಾಸಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಚಿಕ್ಕ ವಯಸ್ಸಿಗೆ ಉನ್ನತ ಹುದ್ದೆಯನ್ನು ಅಲಂಕರಿಸಿದ್ದ ರೋಮನ್ ಸೈನಿ ಎಂಬುವವರು ತಮಗೆ ಇಷ್ಟವಾದ ಉಪನ್ಯಾಸಕ ವೃತ್ತಿಯನ್ನು ಮಾಡುವ ಸಲುವಾಗಿ ಸಹಾಯಕ ಜಿಲ್ಲಾಧಿಕಾರಿ ಹುದ್ದೆಗೇ ರಾಜೀನಾಮೆ ನೀಡಿದ್ದಾರೆ. ಜಬಲ್-ಪುರದ 24 ವರ್ಷದ ಯುವ ಐಎಎಸ್ ಅಧಿಕಾರಿ ರೋಮನ್ ಸೈನಿ ಅವರು ತಮ್ಮ ಸ್ನೇಹಿತನೊಂದಿಗೆ ಸೇರಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದು, ಇದಕ್ಕಾಗಿ ಸಹಾಯಕ ಜಿಲ್ಲಾಧಿಕಾರಿ ಹುದ್ದೆಯನ್ನೇ ತೊರೆದಿದ್ದಾರೆ.
ಸೈನಿ ತಮ್ಮ 16ನೇ ವಯಸ್ಸಿನಲ್ಲಿ ಮೆಡಿಕಲ್ ಎಂಟ್ರೆನ್ಸ್ ಎಕ್ಸಾಮ್ ನಲ್ಲಿ ಉತ್ತೀರ್ಣರಾಗಿದ್ದು, 22 ನೇ ವರ್ಷದಲ್ಲಿ ಐಎಎಸ್ ಪರೀಕ್ಷೆಯನ್ನು ಪಾಸು ಮಾಡಿ ತರಬೇತಿ ಪಡೆದ ಬಳಿಕ ಜಬಲ್-ಪುರದಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಉಪನ್ಯಾಸಕನಾಗಬೇಕೆಂಬ ಹಂಬಲದಿಂದ ಅವರು ರಾಜೀನಾಮೆ ನೀಡಿದ್ದಾರೆ.
ಬೇರೆಯವರು ಐಎಎಸ್ ನಂತಹ ಉನ್ನತ ಹುದ್ದೆಗೇರಲು ನೆರವಾಗಲು ರೋಮನ್ ಸೈನಿ ನಿರ್ಧರಿಸಿರುವುದು ಉತ್ತಮ ನಿರ್ಧಾರವೇ ಸರಿ. ಮುಂದಿನ ದಿನಗಳಲ್ಲಿ ಅವರ ಬಳಿ ಕಲಿಯುವ ವಿದ್ಯಾರ್ಥಿಗಳು ಉನ್ನತ ಸ್ಥಾನ ಮಾನ ಗಳಿಸಿ ರೋಮನ್ ಗೆ ದೊಡ್ಡ ಹೆಸರು ತಂದು ಕೊಡಲಿ ಎಂಬುದೇ ನಮ್ಮ ಆಸೆ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?
ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!
ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!