No menu items!
13.9 C
Munich
Wednesday, April 29, 2026

ಅಲ್ಲಿ ಹೆಣ್ಣುಮಕ್ಕಳು ಗಂಡಾಗಿ ಬದಲಾಗುತ್ತಾರೆ..! ದಕ್ಷಿಣ ಯೂರೋಪ್ ನಲ್ಲೊಂದು ಅಚ್ಚರಿಯ ಗ್ರಾಮ..!

Must read

ಇಲ್ಲಿಯವರೆಗೂ ಎಂತೆಂಥದ್ದೋ ಅಚ್ಚರಿಗಳ ಬಗ್ಗೆ ಕೇಳಿದ್ವಿ.. ಕೆಲವೊಮ್ಮೆ ನೋಡಿದ್ವಿ ಕೂಡಾ. ಆದರೆ ಇಲ್ಲೊಂದು ಅಚ್ಚರಿಯ ಗ್ರಾಮವಿದೆ. ಅಲ್ಲಿ ಮಹಿಳೆಯರು ಪುರುಷರಾಗಿ ಬದಲಾಗುತ್ತಾರೆ. ಆ ಗ್ರಾಮದಲ್ಲಿ ಮಹಿಳೆಯರು ಒತ್ತಡಕ್ಕೆ ಸಿಲುಕಿ ಪುರುಷರಾಗಿ ಪರಿವರ್ತನೆ ಹೊಂದುತ್ತಾರೆ. ಇದೇ ಕಾರಣಕ್ಕಾಗಿ ಈ ಗ್ರಾಮ ಇಡೀ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ.
ಹೆಣ್ಣುಮಕ್ಕಳು ಗಂಡಸರಾಗಿ ಬದಲಾವಣೆ ಹೊಂದುವ ವಿಚಿತ್ರ ಹಳ್ಳಿ ದಕ್ಷಿಣ ಯುರೋಪ್ ನಲ್ಲಿದ್ದು, ಅದಕ್ಕೆ ಅಲ್ಬೇನಿಯನ್ ಎಂಬ ಹೆಸರಿದೆ. ಈ ಹಳ್ಳಿಯು ತನ್ನ ವಿಶಿಷ್ಟ ರೀತಿಯ ನಿಯಮ ಮತ್ತು ಸಂಪ್ರದಾಯಗಳಿಂದ ಚರ್ಚೆಗೆ ಕಾರಣವಾಗಿದೆ. ಈ ಹಳ್ಳಿಯಲ್ಲಿ ಇದೀಗ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆಯಾಗುತ್ತಿದೆ. ಅಲ್ಲಿನ ಮಹಿಳೆಯರೆಲ್ಲಾ ಪುರುಷರಾಗಿ ಬದಲಾಗುತ್ತಿರುವುದು ಇದಕ್ಕೆ ಕಾರಣ..!
ಯುರೋಪ್ ನ ಅಲ್ಬೇನಿಯಾದಲ್ಲಿ ಇಂದಿಗೂ ಸಹ ಪುರುಷ ಪ್ರಧಾನ ಸಂಪ್ರದಾಯ ಚಾಲ್ತಿಯಲ್ಲಿದೆ. ಇಲ್ಲಿನ ಜನರು ಪುರುಷರ ಅಧಿಕಾರವನ್ನೇ ಹೆಚ್ಚೆಂದು ಭಾವಿಸುತ್ತಾರೆ. ಅಲ್ಲಿ ಮಹಿಳೆಯರು ಕೇವಲ ಮನೆಗೆಲಸಕ್ಕಾಗಿ ಮಾತ್ರ ಸೀಮಿತ. ವಿಶೇಷವೆಂದರೆ ಈ ಗ್ರಾಮದ ಜನತೆ ಒಂದು ನಿಯಮವನ್ನು ಮಾಡಿಕೊಂಡು ಬಂದಿದ್ದಾರೆ, ಅದನ್ನೆ ಈ ಜನ ಇಂದು ಕಾನೂನಾಗಿ ಬದಲಾಯಿಸಿದ್ದಾರೆ. ಈ ಕಾನೂನಿನ ಪ್ರಕಾರ ಮಹಿಳೆಯರನ್ನು ಕುಟುಂಬದ ಆಸ್ತಿ ಎಂದು ಬಿಂಬಿಸಲಾಗಿದೆ. ಅವರನ್ನು ಎಲ್ಲಾ ಸುಖ ಸಂತೋಷದಿಂದ ದೂರ ಇಡಲಾಗಿದ್ದು, ಇಷ್ಟದ ಕೆಲಸ, ಕೃಷಿ ಮಾಡುವ ಹಕ್ಕು ಸಹ ಈ ಮಹಿಳೆಯರಿಗೆ ಇಲ್ಲ. ಎಲ್ಲಾ ಕಷ್ಟಗಳ ಮಧ್ಯೆ ಮಹಿಳೆಯರು ಸಹ ಪುರುಷರಂತೆ ಅಧಿಕಾರ ಪ್ರಾಪ್ತಿ ಮಾಡಬಹುದು. ಆದರೆ ಅದಕ್ಕಾಗಿ ಅವರು ಚಿತ್ರವಿಚಿತ್ರವಾದ ಷರತ್ತನ್ನು ಒಪ್ಪಿಕೊಳ್ಳಲೇಬೇಕು. ಇವರು ಜೀವನ ಪೂರ್ತಿ ಬ್ರಹ್ಮಚಾರಿಗಳಾಗಿ ಜೀವನ ನಡೆಸಬೇಕು. ಆಗ ಮಾತ್ರ ಮಹಿಳೆಯರಿಗೆ ಕೆಲವೊಂದು ಅಧಿಕಾರಗಳು ದೊರೆಯುತ್ತವೆ.
ಈ ರೀತಿಯ ಶಪಥ ತೆಗೆದುಕೊಂಡ ನಂತರ ಇಲ್ಲಿನ ಮಹಿಳೆಯರ ಜೀವನಶೈಲಿ ಪುರುಷರಂತೆ ಬದಲಾಗುತ್ತದೆ. ಇವರ ಜೀವನ, ಬಟ್ಟೆ, ಹಾವಭಾವ ಎಲ್ಲವೂ ಸಹ ಪುರುಷರಂತೆ ಬದಲಾಗುತ್ತದೆ. ಇವರಿಗೆ ಪುರುಷರ ಹೆಸರನ್ನೂ ಸಹ ಇಡಲಾಗುತ್ತದೆ. ಅಷ್ಟೇ ಅಲ್ಲ ನಂತರ ಸಿಗರೇಟ್ ಸೇದುವ, ಡ್ರಿಂಕ್ಸ್ ಮಾಡುವ ಅವಕಾಶವನ್ನೂ ಪಡೆಯುತ್ತಾರೆ. ಇದಲ್ಲದೆ ಮನೆಯ ಮಾಲಿಕರ ರೂಪದಲ್ಲಿ ಇವರು ಜೀವನ ಸಾಗಿಸಬಹುದು. ಆದರೂ ಕೂಡಾ ಇವರು ಇದ್ದೂ ಸತ್ತಂತೆ ಜೀವನ ಸವೆಸಬೇಕು. ಏಕೆಂದರೆ ಷರತ್ತನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಐಎಎಸ್ ಅಧಿಕಾರಿ ಏಕೆ ಕೆಲಸ ಬಿಟ್ಟರು ಗೊತ್ತಾ..? ಐಎಎಸ್ ಕೆಲಸ ಬಿಡುವಂತೆ ಮಾಡಿದ ಕೆಲಸ ಯಾವುದು..?

ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?

ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!

ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article