ಅವರಿಬ್ಬರಿಗೂ ಮದುವೆ ಆದಲ್ಲಿಂದ ಹೊಂದಾಣಿಕೆ ಇರಲೇ ಇಲ್ಲ. ಗಂಡ ಚೆನ್ನಾಗಿಲ್ಲ ಅನ್ನೋದು ಅವಳ ಕೊರಗಾಗಿತ್ತು.
ಈ ಜಗಳದ ನಡುವೆಯೇ 22 ವರ್ಷದ ಅವಳು ಗರ್ಭಿಣಿ ಆಗಿದ್ದಳು. ಈಗ ಅವಳಿಗೆ 8 ತಿಂಗಳು.
ಹೀಗೆ ಮೊನ್ನೆ ಮೊನ್ನೆ ಇಬ್ಬರಿಗೆ ಮಾಮೂಲಿಯಂತೆ ಚಿಕ್ಕ ವಿಷಯದಲ್ಲಿ ಗಲಾಟೆ ಆಗಿದೆ. ಗಲಾಟೆ ಬಳಿಕ ಸಮಾಧಾನ ಆದ್ಮೇಲೆ ಗಂಡನನ್ನು ಮುದ್ದಾಡಲು ಹೋಗಿ ಎಡವಟ್ಟು ಮಾಡಿದ್ದಾಳೆ.
ಪ್ರೀತಿ ಹೆಚ್ಚಾಗಿ, ರೊಮ್ಯಾನ್ಸ್ ಮಿತಿ ಮೀರಿ ನಾಲಿಗೆಯನ್ನು ಗಟ್ಟಿಯಾಗಿ ಕಚ್ಚಿದ್ದಾಳೆ. ಆಗ ನೋವು ತಡೆಯಲಾಗದೆ ಅವನು ಕಿರುಚಾಡಿದ್ದಾನೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಲಾಗಿದೆ.
ಆದರೆ ವೈದ್ಯರು ಅರ್ಧ ನಾಲಿಗೆಗೆ ಪೆಟ್ಟಾಗಿದ್ದು, ಆತ ಮಾತಾಡುವ ಸಾಧ್ಯತೆ ಇಲ್ಲವೇ ಇಲ್ಲ ಎಂದಿದ್ದಾರೆ.
ಈ ಘಟನೆ ನಡೆದಿರೋದು ದೆಹಲಿಯಲ್ಲಿ. ಈ ಬಗ್ಗೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.