ಎರಡೂ ಕಾಲುಗಳನ್ನು ಕಳೆದುಕೊಂಡರೂ ಛಲ ಬಿಡದ ಸಾಧಕಿ..!

0
1274

ಅವತ್ತೇಕೋ ಅವಳ ಅದೃಷ್ಟ ಕೆಟ್ಟಿತ್ತು..! ಗ್ರಹಚಾರ ಕೆಟ್ಟಾಗ ಹಗ್ಗ ಹಾವಾಗುತ್ತಂತೆ..! ಅವಳ ಹಣೆ ಬರಹ ನೆಟ್ಟಗಿರಲಿಲ್ಲ.!

ಎಕ್ಸಾಂ ಮುಗಿಸಿ ರೈಲೇರಿ ಮನೆಗೆ ಹೊರಟಳು! ರೈಲಿನಿಂದ ಅಕಸ್ಮಾತ್ ಆಗಿ ಕೆಳಕ್ಕೆ ಬಿದ್ದಳು.! ಅಷ್ಟೇ ಅವಳ ಎರಡೂ ಕಾಲುಗಳು ತುಂಡಾದವು..! ಆ ಒಂದು ಗಳಿಗೆ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಆಕೆಯ ಕಾಲುಗಳನ್ನು ಕಳೆದುಕೊಂಡುದ್ದಳು..!
ಕಾಲು ಇಲ್ಲದರೇನಂತೆ ಆಕೆಯ ಆತ್ಮವಿಶ್ವಾಸ ಹುದುಗಲಿಲ್ಲ..! ಗ್ರಹಚಾರಕ್ಕೆ ಬಡತನ ಇನ್ನೊಂದೆಡೆ..!ಕಷ್ಟ ನಿಜಕ್ಕೂ ಒಳ್ಳೇ ಜೀವನ ಪಾಠವನ್ನು ಕಳಿಸುತ್ತೇ..! ಅವಳೂ ಪಾಠ ಕಲಿತಳು..! ನೋವನ್ನೆಲ್ಲಾ ಮರೆತು ಗುರಿಯತ್ತ ಕಣ್ಣಿಟ್ಟಳು..!
ಅವಳು ಮುಂಬೈನ ಜೋಗೇಶ್ವರಿ ನಿವಾಸಿ ರೋಶನ್. ತರಕಾರಿ ಮಾರಿ ಜೀವನ ನಡೆಸುವವರ ಮಗಳು.!


ಮೊದಲೇ ಹೇಳಿರುವಂತೆ ಅಪಘಾತದಿಂದ ಎರಡೂ ಕಾಲುಗಳನ್ನು ಕಳೆದು ಕೊಂಡಳು..! ಆದರೆ, ಅವಳಲ್ಲಿ ಡಾಕ್ಟರ್ ಆಗ್ಬೇಕೆಂಬ ಆಸೆ ಇತ್ತು..! ಶೇ 88ರಷ್ಟು ಅಂಗವೈಕಲ್ಯತೆ ಇರೋರಿಗೆ ವೈದ್ಯಕೀಯ ಪ್ರವೇಶ ನೀಡಲಾಗುವುದಿಲ್ಲ ಅಂಥ ಅವಳ ವೈದ್ಯಕೀಯ ಪ್ರವೇಶಕ್ಕೆ ತಣ್ಣೀರೆರಚಲಾಯಿತು.! ಆದರೆ, ಆಕೆ ಹಠ ಬಿಡಲಿಲ್ಲ..! ಹೈಕೋರ್ಟ್ ಮೆಟ್ಟಿಲೇರಿದಳು..! ಕೋರ್ಟ್ ವೈದ್ಯಕೀಯ ಪ್ರವೇಶಕ್ಕೆ ಅನುವು ಮಾಡಿ ಕೊಟ್ಟಿತು..! ಪರೀಕ್ಷೆ ಬರೆದಳು ವೈದ್ಯೆಯೂ ಆದಳು,.23ನೇ ವಯಸ್ಸಲ್ಲಿಯೆ ವೈದ್ಯೆಳಾಗುವ ಕನಸನ್ನು ನನಸು ಮಾಡಿಕೊಂಡಳು..! ಅವಳ ಸಾಧನೆಗೊಂದು ಸಲಾಂ..!

 

LEAVE A REPLY

Please enter your comment!
Please enter your name here