1893 ರಿಂದ ರಾಯಲ್ ಎನ್‍ಫೀಲ್ಡ್ ನ ಲಾಂಗ್ ಜರ್ನಿ ಹೇಗಿತ್ತು ನಿಮಗೆ ಗೊತ್ತಾ..?

Date:

ಇಂದಿನ ಕಾಲದ ತರುಣರ ಹುಚ್ಚೆಬ್ಬಿಸೋ ಏಕೈಕ ಮೋಟಾರ್ ಸೈಕಲ್ ಅಂದ್ರೆ ಅದು ರಾಯಲ್ ಎನ್‍ಫೀಲ್ಡ್..!

ಪ್ರಾರಂಭವಾದಾಗಿನಿಂದ ಈ ಮೋಟಾರ್ ಬೈಕ್‍ಗೆ ಎಷ್ಟು ಬೇಡಿಕೆ ಇದೆಯೋ ಇಂದಿಗೂ ಆ ಬೇಡಿಕೆ ಕಡಿಮೆ ಆಗ್ಲಿಲ್ಲ ಅನ್ನೊದೇ ಒಂದು ಖುಷಿಯ ಸಂಗತಿ.. ಗುಡು-ಗುಡು ಸದ್ದಿನಿಂದಲೇ ಎಲ್ಲರ ಮನಗೆದ್ದ ಈ ಎನ್‍ಫೀಲ್ಡ್ ಆರಂಭವಾದದ್ದು 1893ರಲ್ಲಿ. ಈ ಎನ್‍ಫೀಲ್ಡ್ ಸಂಸ್ಥೆ ಮೋಟಾರ್ ಬೈಕ್ ಸೇರಿದಂತೆ ಬೈಸಿಕಲ್, ಲಾವ್ನ್ ಮೂವರ್ಸ್ ಇನ್ನಿತ್ಯಾದಿ ವಾಹನಗಳನ್ನು ಪ್ರಾರಂಭದಲ್ಲಿ ಮಾರುಟ್ಟೆಗೆ ತಂದಿತ್ತು. ಮೊಟ್ಟ ಮೊದಲ ರಾಯಲ್ ಎನ್‍ಫೀಲ್ಡ್ ರೋಡಿಗಿಳಿದಿದ್ದು 1901 ರಲ್ಲಿ. ಇದು ಎನ್‍ಫೀಲ್ಡ್ ಕಂಪನಿ ತಯಾರಿಸಿದ ಮೊಟ್ಟ ಮೊದಲ ಬೈಕ್..! ಅದಾದ ಹಲವಾರು ವರ್ಷಗಳ ನಂತರ ಅಂದರೆ 1955 ರಲ್ಲಿ ರಾಯಲ್ ಎನ್‍ಫೀಲ್ಡ್ ಹಲವು ವಿನ್ಯಾಸಗಳಲ್ಲಿ ಮೂಡಿಬಂತು.. ವಿಧ ವಿಧದ ಡಿಸೈನ್‍ಗಳಲ್ಲಿ ತಯಾರಿಸಲ್ಪಟ್ಟ ಎನ್ಫೀಲ್ಡ್ ಗಾಡಿಗಳನ್ನು ಕೊಳ್ಳಲು ಜನರು ಜಾತ್ರೆಯಂತೆ ಮುಗಿ ಬಿದ್ದರು. ನಂತರ 1962ರಲ್ಲಿ ಇದರ ಮುಖ್ಯ ಕಛೇರಿಯನ್ನು ಮದ್ರಾಸ್(ಈಗಿನ ಚೆನ್ನೈ) ನಲ್ಲಿ ಸ್ಥಾಪಿಸಿದರು. ಅಷ್ಟೇ ಅಲ್ಲದೇ ಎನ್ಫೀಲ್ಡ್ ಬಿಡಿ ಭಾಗಗಳ ತಯಾರಿಕೆಯನ್ನೂ ಸಹ ಭಾರತದಲ್ಲೇ ಆರಂಭಿಸಿದರು. ಆಗಿನ ಕಾಲಾವಧಿಯಲ್ಲಿ ರಾಯಲ್ ಎನ್‍ಫೀಲ್ಡ್ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ ಇಡೀ ವಿಶ್ವದಾದ್ಯಂತ ಹೆಚ್ಚು ಬೇಡಿಕೆ ಮೋಟಾರ್ ಸಂಸ್ಥೆಯಾಗಿ ಹೊರ ಹೊಮ್ಮಿತ್ತು. ಇಂದಿಗೂ ಕೂಡ ರಾಯಲ್ ಎನ್‍ಫೀಲ್ಡ್ ತನ್ನ ಬೇಡಿಕೆಯನ್ನು ಕಳೆದು ಕೋಡಿಲ್ಲ ನೋಡಿ.. ಪ್ರಸ್ತುತದಲ್ಲಿ ಸುಮಾರು 50 ರಾಷ್ಟ್ರಗಳಿಗೆ ಮಾರಾಟವಾಗುತ್ತಿರೊ ಈ ಮೋಟಾರುವಾಹನದ ಇಂದಿನ ಮುಖ್ಯಸ್ಥ ಸಿದ್ಧಾರ್ಥ ಲಾಲ್.
ಬಹು ಬೇಡಿಕೆಯ ಮೋಟಾರು ಸಂಸ್ಥೆ ಹೇಗೆ ಬೆಳವಣಿಗೆ ಹೊಂದಿತು. ಪ್ರಸ್ತುತದಲ್ಲಿ ಅದರ ವಿನ್ಯಾಸದ ಶೈಲಿ ಯಾವ ಮಟ್ಟಕ್ಕೆ ಬಂದು ನಿಂತಿದೆ ಎಂಬುದನ್ನು ನಿಮಗೆ ಒಂದು ಸಣ್ಣ ಸ್ಲೈಡ್ ಮೂಲಕ ತೋರಿಸುತ್ತೇವೆ.. ನೋಡಿ
1893 ರಾಯಲ್ ಎನ್‍ಫೀಲ್ಡ್ ಕ್ವಾಡ್ರಿಸೈಕಲ್..

1-6-600x386
ಎನ್‍ಫೀಲ್ಡ್ ಮೋಟಾರ್ ಸಂಸ್ಥೆ ಪ್ರಾರಂಭವಾದಾಗ ಮೊಟ್ಟ ಮೊದಲ ಬಾರಿಗೆ ಅವರು ತಯಾರಿಸಿ ಮೋಟಾರ್ ವಾಹನ… ಬೈಸಿಕಲ್ ರೀತಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಈ ವಾಹನಕ್ಕೆ 4 ಚಕ್ರಗಳಿಂದ ವಿನ್ಯಾಸ ಮಾಡಲಾಗಿತ್ತು.

1913 ರಾಯಲ್ ಎನ್‍ಫೀಲ್ಡ್ 425ಸಿಸಿ..

2-5-600x403
ಈ ಮೋಟಾರು ಬೈಕ್‍ನ್ನು ತಯಾರಿಸಿದ ಎನ್‍ಫೀಲ್ಡ್ ಸಂಸ್ಥೆ ಬ್ರಿಟೀಷರಿಗೆ ಯುದ್ದ ಸಂದರ್ಭಗಳಲ್ಲಿ ಅನುಕೂಲಕರವಾಗುವಂತೆ ನಿರ್ಮಾಣ ಮಾಡಿ ವಿಪುಲ ಪ್ರಮಾಣದಲ್ಲಿ ಮಾರಾಟ ಮಾಡಿತ್ತು

1923 ರಾಯಲ್ ಎನ್‍ಫೀಲ್ಡ್ 225ಸಿಸಿ..

3-2-600x450
ಎನ್‍ಫೀಲ್ಡ್ ಸಂಸ್ಥೆ 1923-24ರ ಸಂದರ್ಭದಲ್ಲಿ 225 ಮತ್ತು 350 ಸಿಸಿ ಬೈಕ್‍ನ್ನು ತಯಾರಿಕೆ ಮಾಡಿತ್ತು.

1939-1945 ರಾಯಲ್ ಎನ್‍ಫೀಲ್ಡ್ 250ಸಿಸಿ(11ಎಫ್)..

4-2-600x376
ಎರಡನೇ ವಿಶ್ವ ಸಮರದ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರ ಸೈನಿಕರಿಗೆ ಉಪಯುಕ್ತವಾಗುಂತಹ ಎನ್‍ಫೀಲ್ಡ್ ಗಾಡಿಗಳನ್ನು ಅಭಿವೃದ್ದಿ ಪಡಿಸುವಂತೆ ಕೇಳಿಕೊಂಡಾಗ ನಿರ್ಮಾಣವಾದ ಎನ್‍ಫೀಲ್ಡ್ ಗಾಡಿಗಳೇ 250 ಸಿಸಿ ಬೈಕ್.

1959 ರಾಯಲ್ ಎನ್‍ಫೀಲ್ಡ್ ಕೃಸಡರ್..

5-2-600x360
ಈ ಸಮಯದಲ್ಲಿ ಹೆಚ್ಚು ಹೆಚ್ಚಾಗಿ 250 ಸಿಸಿ ಬೈಕ್‍ನ್ನು ಪ್ರಚುರ ಪಡಿಸಲಾಯಿತು. ವಿಲಿಯರ್ಸ್ ಸ್ಟಾರ್ ಮಾರ್ಕ್ ಎಂಜಿನ್ ವ್ಯವಸ್ಥೆಯನ್ನು ಈ ಬೈಕ್ ಹೊಂದಿತ್ತು.

1965 ರಾಯಲ್ ಎನ್‍ಫೀಲ್ಡ್ ಟರ್ಬೋ ಟ್ವಿನ್

6-2-600x400
ಪ್ರಸ್ತುದಲ್ಲಿ ಅತೀ ವಿರಳ ಟರ್ಬೋ ಟ್ವಿನ್ ರಾಯಲ್ ಎನ್‍ಫೀಲ್ಡ್..

1969 ರಾಯಲ್ ಎನ್‍ಫೀಲ್ಡ್ ಇಂಟರ್‍ಸೆಪ್ಟರ್..

7-2-600x402
ಇಂಟರ್‍ಸೆಪ್ಟರ್ ಬೈಕ್ ಅಮೇರಿಕಾದಲ್ಲಿ ಅತೀ ಬೇಡಿಕೆಯ ವಾಹನವಾಗಿದ್ದರೂ ಸಹ ಇದು ಇಂಗ್ಲಿಷ್ ಮೇಡ್ ಎನ್‍ಫೀಲ್ಡ್.

1980 ರಾಯಲ್ ಎನ್‍ಫೀಲ್ಡ್ ಬುಲ್ಲೆಟ್..

8-2-600x446
ಪ್ರಸ್ತುದಲ್ಲಿ ಅತೀ ಹೆಚ್ಚು ಬೇಡಿಕೆಯಲ್ಲಿರುವ ಹಾಗೂ ಹೆಚ್ಚು ಪಾಪುಲಾರ್ ಬೈಕ್ ಅಂದರೆ ಬುಲೆಟ್. ಯಾರೇ ಆದ್ರೂ ಈ ಬೈಕ್‍ನ್ನು ಬುಕ್ ಮಾಡಿ ಒಂದು ರೌಂಡ್ ಒಡೆಯದೇ ಇರೋದಿಲ್ಲ. ಅಷ್ಟು ಕ್ರೇಜ್ ಈ ಬುಲೆಟ್ ನೀಡಿದೆ.

1990 ರಾಯಲ್ ಎನ್‍ಫೀಲ್ಡ್ ಸ್ಟಾಂಡರ್ಡ್..

9-1-600x500
ರಾಯಲ್ ಎನ್‍ಫೀಲ್ಡ್ ಸ್ಟಾಂಡರ್ಡ್ 90ರ ದಶಕದಲ್ಲಿ ಬಹು ಬೇಡಿಕೆಯ ವಾಹನ. ಈಗ ಈ ಗಾಡಿಗಳು ಅತೀ ವಿರಳ.

ರಾಯಲ್ ಎನ್‍ಫೀಲ್ಢ್ ಬುಲೆಟ್..

10-1-600x369
ಪ್ರಸ್ತುದ ದಿನಗಳಲ್ಲಿ ನವ ವಿನ್ಯಾಸದಿಂದ ಕೂಡಿದ ಬಹು ಬೇಡಿಕೆಯ ಎನ್‍ಫೀಲ್ಡ್ ಗಳಲ್ಲಿ ಬುಲೆಟ್ ಬಿಟ್ರೆ ಯಾವ್ದೂ ಇಲ್ಲ.

POPULAR  STORIES :

ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..

ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!

ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?

ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...