RR ವಿರುದ್ದ ಟಾಸ್ ಗೆದ್ದ SRH ಬೌಲಿಂಗ್ ಆಯ್ಕೆ ..!

Date:

RR ವಿರುದ್ದ ಟಾಸ್ ಗೆದ್ದ SRH ಬೌಲಿಂಗ್ ಆಯ್ಕೆ ..!

ಅಬುಧಾಬಿ : 13 ನೇ ಆವೃತ್ತಿ IPL ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

RR : ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್‌), ಸ್ಟೀವ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಫ್ರ ಆರ್ಚರ್, ಶ್ರೇಯಸ್ ಗೋಪಾಲ್, ಅಂಕಿತ್ ರಜಪೂತ್, ಕಾರ್ತಿಕ್ ತ್ಯಾಗಿ.

SRH : ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್‌), ಪ್ರಿಯಮ್ ಗರ್ಗ್, ಮನೀಶ್ ಪಾಂಡೆ, ವಿಜಯ್ ಶಂಕರ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಶಹಬಾಜ್ ನದೀಮ್, ಸಂದೀಪ್ ಶರ್ಮಾ, ಟಿ ನಟರಾಜನ್.

ಹೃದಯಾಘಾತ ಕಂಪನಿ ತೆರೆಯಲು ಕಾರಣವಾಯ್ತು ಅಂದ್ರೆ ನಂಬ್ತೀರಾ?

ಕೆವಿನ್ ಸ್ಕಾಟ್ ಕೈಗರ್ ಹಾಗೂ ಗಜಾನನ ಸತೀಶ್ ನಾಗಶೇಖರ್ ಇವರಿಬ್ಬರು ವೈದ್ಯಕೀಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಗೋವಾದಲ್ಲಿ ಹೆಲ್ತ್ಕೇರ್ ವೆಂಚರ್ ಒಂದನ್ನು ನಡೆಸುತ್ತಿದ್ದಾರೆ. ಕಲ್ಲೋಸ್ ಎಂಜಿನಿಯರಿಂಗ್ ಎಂಬ ಈ ಸಂಸ್ಥೆ ಕಾರ್ಡಿಯಾಕ್ ಮೊನಿಟರ್ಗಳನ್ನು ತಯಾರಿಸುತ್ತಿದೆ. ಜೊತೆಗೆ ಅಲ್ಟ್ರಾ ಪೋರ್ಟೆಬಲ್ ಹಾಗೂ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ಗಳನ್ನು ತಯಾರಿಸುತ್ತಿದೆ.
ಗಜಾನನ ಹಾಗೂ ಕೆವಿನ್ 6 ವರ್ಷಗಳ ಹಿಂದೆ ಗೋವಾದಲ್ಲಿ ಕಲ್ಲೋಸ್ ಕಂಪನಿಯನ್ನು ಆರಂಭಿಸಿದ್ದರು. ಇವರಿಬ್ಬರೂ ಜಿಇ ಸಿಸ್ಟಮ್ಸ್ನ ಎಂಆರ್ಐ ಕೆಲಸ ಮಾಡಿದ್ರು. 2006ರಲ್ಲಿ ಪರಸ್ಪರ ಪರಿಚಿತರಾಗಿದ್ದ ಗಜಾನನ ಹಾಗೂ ಕೆವಿನ್ ಮಧ್ಯೆ ಗೆಳೆತನವೂ ಬೆಳೆದಿತ್ತು. ಭಾರತದಲ್ಲಿ ಇನ್ನಷ್ಟು ತಂತ್ರಜ್ಞಾನದ ಸಂಪನ್ಮೂಲಗಳ ಅವಶ್ಯಕತೆ ಅನ್ನೋದನ್ನು ಕೆವಿನ್ ಅರಿತಿದ್ರು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಕನಸು ಕಂಡಿದ್ರು. ಗಜಾನನ ಅವರದ್ದೂ ಇದೇ ಮನಸ್ಥಿತಿ.
ಈ ಬಗ್ಗೆ ಚರ್ಚೆ ನಡೆಸಿದ ಬೆನ್ನಲ್ಲೇ ಕೆವಿನ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ಗಜಾನನ ಕೂಡ ಕೆಲಸಕ್ಕೆ ಗುಡ್ ಬೈ ಹೇಳಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ರು. ಕೆವಿನ್ ಅವರ ಮನೆಯೇ ಪಾಠಶಾಲೆಯಾಗಿತ್ತು. ಈ ಸಂದರ್ಭದಲ್ಲೇ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಓಶನೋಗ್ರಫಿಯಿಂದ ಮೊದಲ ಗುತ್ತಿಗೆ ಕೂಡ ಸಿಕ್ಕಿತ್ತು. ಮೊಬೈಲ್ ಹಾಗೂ ಇಸಿಜಿಯಂತಹ ಉಪಕರಣ ತಯಾರಿಕೆ ಬಗ್ಗೆ ಕೆವಿನ್ ಹಾಗೂ ಗಜಾನನ ತಜ್ಞರ ಜೊತೆ ಮಾತುಕತೆ ನಡೆಸಿದ್ರು. ಆ ಸಂದರ್ಭದಲ್ಲಿ ಇಸಿಜಿ ತಯಾರಿಕಾ ಕಂಪನಿಗಳ ಮಧ್ಯೆ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಇತ್ತು. ಮೊಬೈಲ್ ತಯಾರಿಕೆಗಂತೂ ಬಂಡವಾಳದ ಅಗತ್ಯವಿತ್ತು. ಹಾಗಾಗಿ ಕೆವಿನ್ ಮೋಟೊರೋಲಾ ಜೊತೆ ಒಡಂಬಡಿಕೆ ಮಾಡಿಕೊಂಡು ಕೆಲಸ ಆರಂಭಿಸಿದ್ರು.
ಕಲ್ಲೋಸ್ ಎಂಬ ಹೆಸರು ಗಜಾನನ ಅವರ ಕಾಲ್ಪನಿಕ ಆವಿಷ್ಕಾರ. ಯಾವುದೇ ಗೊಂದಲಿವಿಲ್ಲದಂತಹ ಸರಳ ಹೆಸರನ್ನು ಶೀಘ್ರವಾಗಿ ಹುಡುಕಬೇಕೆಂಬುದು ಅವರ ಬಯಕೆಯಾಗಿತ್ತು. ಕೆವಿನ್ ಅವರ ಹೆಸರಿನ ಕೆ ಅಕ್ಷರವನ್ನು ಬಳಸಿಕೊಂಡು ಗಜಾನನ ಸಂಸ್ಥೆಗೆ ಕಲ್ಲೋಸ್ ಎಂಜಿನಿಯರಿಂಗ್ ಎಂದು ನಾಮಕರಣ ಮಾಡಿದ್ದಾರೆ. ಹೃದಯವನ್ನು ಮೊನಿಟರ್ ಮಾಡುವ ಇಸಿಜಿ, ರಕ್ತ ಮತ್ತು ಆಮ್ಲನಜಕ ಪ್ರಮಾಣವನ್ನು ಅಳೆಯುವ ಉಪಕರಣವನ್ನು ಕಲ್ಲೋಸ್ನಲ್ಲಿ ತಯಾರಿಸಲಾಗುತ್ತದೆ.
ಕಲ್ಲೋಸ್ ಆರಂಭಿಸಿದ ಬಳಿಕ ಅಮೆರಿಕಕ್ಕೆ ತೆರಳಿದ ಕೆವಿನ್ ಅರ್ಧಕ್ಕೆ ನಿಂತಿದ್ದ ಓದನ್ನು ಮುಂದುವರಿಸಿ ವೈದ್ಯಕೀಯ ಪದವಿ ಪಡೆದ್ರು. ಅದೇ ಸಮಯಕ್ಕೆ ಕ್ಯಾಲಿಫೋರ್ನಿಯಾ ಸ್ಯಾನ್ಡಿಯಾಗೋ ವಿವಿಯಿಂದ ಆಹ್ವಾನ ಬಂದಿದ್ದರಿಂದ ಗಜಾನನ ಕೂಡ ಅಮೆರಿಕ್ಕೆ ಆಗಮಿಸಿದರು. ಕೆವಿನ್ ಹಾಗೂ ಗಜಾನನ ಇಬ್ಬರೂ ಅಮೆರಿಕದಲ್ಲಿದ್ದುಕೊಂಡೇ ಗೋವಾದಲ್ಲಿರುವ ಕಲ್ಲೋಸ್ ಕಚೇರಿಯನ್ನು ನಿರ್ವಹಿಸುತ್ತಿದ್ರು. ಯುಎಸ್ಸಿಡಿಯಲ್ಲಿ ಅಸೈನ್ಮೆಂಟ್ ಮುಗಿಸಿದ ಗಜಾನನ ಬ್ಯುಸಿನೆಸ್ ಪ್ಲಾನ್ ಸ್ಪರ್ಧೆಯಲ್ಲಿ ವಿಜೇತರಾದ್ರು. ಬಳಿಕ ಅಮೆರಿಕದಿಂದ ಗೋವಾಕ್ಕೆ ಮರಳಿದ ಗಜಾನನ ಹಾಗೂ ಕೆವಿನ್ ವೈದ್ಯಕೀಯ ಉಪಕರಣ ತಯಾರಿಕಾ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.


ಕೆವಿನ್ ಅವರ ಪಾಲಿಗೆ ಗೋವಾ ಒಂದು ಕುತೂಹಲಕರ ತಾಣ. ಗಜಾನನ ಅವರಿಗೆ ತವರು ಮನೆ. ಕಡಲ ಕಿನಾರೆ ಗೋವಾಕ್ಕೆ ತಂದೆಯೊಡನೆ ಪ್ರವಾಸಕ್ಕೆ ಬಂದಿದ್ದ ಕೆವಿನ್ ಬೀಚ್ನಲ್ಲಿ ಕುಳಿತೇ ಕೆಲಸ ಮಾಡುವ ಕನಸು ಕಂಡಿದ್ರು. ಆದ್ರೆ ಆ ಕನಸು ಈಡೇರಿಲ್ಲ. 2007ರಲ್ಲಿ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಕೆವಿನ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಇಸಿಜಿ ಹಾಗೂ ತಜ್ಞ ವೈದ್ಯರು ಸಿಕ್ಕಿದ್ದರಿಂದ ತಮ್ಮ ಪ್ರಾಣ ಉಳಿಯಿತು ಅನ್ನೋದು ಕೆವಿನ್ ಅವರ ಮನದಾಳದ ಮಾತು. ಈ ಅನುಭವವೇ ಅವರಿಗೆ ಇಸಿಜಿ ತಯಾರಿಕಾ ಕಂಪನಿ ಸ್ಥಾಪನೆಗೆ ಪ್ರೇರಣೆಯಾಯ್ತು.
ವಿಭಿನ್ನ ಸಂಸ್ಕøತಿ, ಆಚಾರ-ವಿಚಾರಗಳು ಬೇರೆಬೇರೆಯಾಗಿದ್ದರೂ ಜೊತೆಯಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಕೆವಿನ್ ಹಾಗೂ ಗಜಾನನ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದಾರೆ.

 

Share post:

Subscribe

spot_imgspot_img

Popular

More like this
Related

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ ಅಬ್ಬರ

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ...

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..? ದಸರಾ,...

ನವರಾತ್ರಿ ಎಂಟನೇ ದಿನ – ಮಹಾಗೌರಿ !

ನವರಾತ್ರಿ ಎಂಟನೇ ದಿನ – ಮಹಾಗೌರಿ ! ದೇವಿಯ ಹಿನ್ನಲೆ ನವರಾತ್ರಿಯ ಎಂಟನೇ ದಿನ...