ಟಾಸ್ ಗೆದ್ದ ಆರ್ ಆರ್ ಬ್ಯಾಟಿಂಗ್ : ಆರ್ ಸಿಬಿಯಲ್ಲಿ 2 ಬದಲಾವಣೆ..!
ದುಬೈ : 13 ನೇ ಆವೃತ್ತಿ IPLನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿವೆ.
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಆರ್‌ಸಿಬಿ XI: ಆರೊನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ’ವಿಲಿಯರ್ಸ್ (ವಿಕೆಟ್‌ಕೀಪರ್), ಗುರುಕೀರತ್ ಸಿಂಗ್ ಮಾನ್, ವಾಷಿಂಗ್ಟನ್ ಸುಂದರ್, ಕ್ರಿಸ್ ಮಾರಿಸ್, ಶಹಬಾಝ್ ಅಹ್ಮದ್, ಇಸುರು ಉದಾನ, ನವದೀಪ್ ಸೈನಿ, ಯುಜ್ವೇಂದ್ರ ಚಹಲ್.
ಆರ್‌ಆರ್ XI: ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಫ್ರ ಆರ್ಚರ್, ಶ್ರೇಯಾಸ್ ಗೋಪಾಲ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ.
ಕಿವಿ ಕೇಳಲ್ಲ, ಮಾತು ಬರಲ್ಲ – ಸಾಧನೆ ಕೇಳಿದ್ರೆ ನಿಬ್ಬೆರಗಾಗ್ತೀರಿ..!
`ಹೆಲನ್ ಕೆಲ್ಲರ್’ ನಿಮಗೆಲ್ಲಾ ಗೊತ್ತು ಅಲ್ವಾ..?! ಇವರು ಹತ್ತೊಂಬತ್ತು ತಿಂಗಳ ಹಸುಳೆಯಾಗಿರುವಾಗಲೇ ಅಂಧರು, ಕಿವುಡರೂ ಆದವರು..! ಹೀಗೆ ಪ್ರಪಂಚ ನೋಡುವ ಮೊದಲೇ ದೃಷ್ಟಿಯನ್ನು ಕಳೆದುಕೊಂಡರೂ, ಕಿವುಡರಾದರೂ ಇವತ್ತು ಇವರನ್ನು ನಾವೆಲ್ಲಾ ನೆನಪು ಮಾಡಿಕೊಳ್ಳುತ್ತೇವೆ..! ಕಾರಣ, ಅವರು ಅಂಧರೆಂದಲ್ಲ.., ಕಿವುಡರೆಂದಲ್ಲ..! ತಮ್ಮ ದೊಡ್ಡ ಸಮಸ್ಯೆಗಳಿಗೆ ಅಂಜದೆ..,ಜೀವನದ ಅಡೆತಡೆಗಳನ್ನು ಮೆಟ್ಟಿನಿಂತು ಒಬ್ಬ ಬರಹಗಾರ್ತಿಯಾಗಿ, ರಾಜಕೀಯ ಕಾರ್ಯಕರ್ತೆ, ಉಪನ್ಯಾಸಕಿ, ಸಾಮಾಜಿ ಕಾರ್ಯಕರ್ತೆಯಾಗಿ ಶೋಷಿತರ ಅಂಗವಿಕಲರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಕ್ಕಾಗಿ ಇವತ್ತು ಇಡೀ ಪ್ರಪಂಚಕ್ಕೆ ಹೆಲನ್ ಕೆಲ್ಲರ್ ಎಂಬ ಮಹಾನ್ ಚೇತನ ಗೊತ್ತು..! ಇವತ್ತು ನಿಮಗೆ ಇವರಂಥಾ ಇನ್ನೊಬ್ಬ ಮಹಾನ್ ವ್ಯಕ್ತಿಯನ್ನು ಪರಿಚಯ ಮಾಡಿಕೊಡುತ್ತೇನೆ..! ಈ ವ್ಯಕ್ತಿ ಹೆಲನ್ ಕೆಲ್ಲರ್ ಅಂತೆ ಅಂಧರಲ್ಲ..! ಆದರೆ ಕಿವಿಕೇಳಲ್ಲ.. ಮಾತಾಡಕ್ಕೆ ಆಗಲ್ಲ…! ಇವರೊಬ್ಬ ಹುಟ್ಟು ಕಿವುಡರು, ಮೂಗರು..!
ಹೆಸರು `ಸಾಜಿ ಥಾಮಸ್’..!ಮೊದಲೇ ಹೇಳಿದಂತೆ ಇವರು ಜನ್ಮತಃ ಮೂಗರು..! ಬಾಲ್ಯದಲ್ಲೇ ಇವರಿಗೆ ಯಂತ್ರೋಪಕರಣಗಳ ಬಗ್ಗೆ ಅತೀವ ಆಸಕ್ತಿ..! ಐದನೇ ತರಗತಿಯಲ್ಲಿರುವಾಗಲೇ ಕಾರು, ವಿಮಾನ ಮೊದಲಾದವುಗಳ ಮಾದರಿಯನ್ನು ಮಾಡ್ತಾ ಇದ್ರು..! ಇವರ ಹಳ್ಳಿಯವರು ಇವರನ್ನು ನೋಡಿ ನಗ್ತಾ ಇದ್ರು..! ತಮಾಷೆ ಮಾಡ್ತಾ ಇದ್ರು..! ವಿಮಾನವನ್ನು ಮಾಡುವ ಗುರಿಯನ್ನು ಹೊಂದಿದ್ದಾನೆಂದು ಪದೇ ಪದೇ ಹೇಳಿ ಗೇಲಿ ಮಾಡ್ತಾ ಇದ್ರು,..! ಈಡಿಯಟ್ ಅಂತಾನೇ ಕರೀತಾ ಇದ್ರು..! ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅವರ ಮಾತಿಗೆ ನಕ್ಕು ಸುಮ್ಮನಾಗ್ತಾ ಇದ್ರು ಥಾಮಸ್..! ಏಳನೇ ತರಗತಿ ಓದುವಷ್ಟರಲ್ಲಿ ಶಾಲೆಗೆ ಗುಡ್ ಬೈ ಹೇಳಿದ್ರು..! ಜೀವನೋಪಯಕ್ಕೆ ಅಂತ ಟಿವಿ ರಿಪೇರಿ ಮಾಡೋಕೆ ಶುರುಮಾಡಿದ್ರು..! ಟಿವಿ ಸರಿಮಾಡ್ತಾ ಇದ್ರೂ ವಿಮಾನವನ್ನು ಮಾಡೋ ಗುರಿಯನ್ನು ಎಂದೂ ಮರೆತಿರಲಿಲ್ಲ..! ಬಾಲ್ಯದಿಂದಲೂ ಅವರಿಗೆ ವಿಮಾನ ಅಂದ್ರೆ ಅದೇನೋ ಒಂಥರಾ ಕುತೂಹಲ..! ನಾನೂ ವಿಮಾನವನ್ನು ತಯಾರು ಮಾಡ್ಬೇಕೆಂಬ ಆಸೆ..! ಆದರೆ ಯಾರ ಬೆಂಬಲವೂ ಇಲ್ಲ..! ಸಹಕಾರವೂ ಇಲ್ಲ..! ಎಲ್ಲರೂ ನೋಡಿ ನಗುವವರೇ..! ಹಂಗಂತ ಸಾಜಿ ನಿರಾಶರಾಗಿ ಸುಮ್ಮನೇ ಕೂರಲಿಲ್ಲ…! ನಿರಂತರವಾಗಿ ಪ್ರಯತ್ನವನ್ನೂ ಪಟ್ಟರು..!
ಹೀಗೆ, ಇವರು ವಿಮಾನ ತಯಾರಿಸಬೇಕೆಂಬ ಪ್ರಯತ್ನದಲ್ಲಿರುವಾಗಲೇ ಒಮ್ಮೆ ಇವರ ಊರಿಗೆ ರಬ್ಬರ್ ಪ್ಲಾಂಟೇಷನ್ ಗೆ ಔಷಧ ಸಿಂಪಡಿಸಲೆಂದು ಹೆಲಿಕ್ಯಾಪ್ಟರ್ ಬರುತ್ತೆ..! ಅದು ಇವರ ಜೀವನದ ದಿಕ್ಕನ್ನೇ ಬದಲಾಯಿಸುತ್ತೆ ಅಂತ ಸ್ವತಃ ಸಾಜಿಯವರೇ ಅಂದುಕೊಂಡಿರ್ಲಿಕ್ಕಿಲ್ಲ..! ಅದರ ಪೈಲಟ್ ಗಳ ಪರಿಚಯವಾಗುತ್ತೆ..! ಪರಿಚಯ ಸ್ನೇಹವಾಗಿ ಬಿಡುತ್ತೇ.! ಆ ಸ್ನೇಹವೇ ವಿಮಾನ ತಯಾರಿಕೆಗೆ ಪ್ರೋತ್ಸಾಹ ನೀಡೋದು..! ಸರ್ಕಾರದಿಂದಾಗಲಿ ಅಥವಾ ದಾನಿಗಳಿಂದಾಗಲಿ ಸಹಾಯವನ್ನು ಪಡೆಯದೆ ತಮ್ಮ ಆರ್ಥಿಕ ಸಮಸ್ಯೆಯ ನಡುವೆಯೂ 14 ಲಕ್ಷ ರೂಪಾಯಿಗಳನ್ನು ಖರ್ಚುಮಾಡಿ ಅಂತೂ ಇಂತು ಲಘುವಿಮಾನವನ್ನು ತಯಾರಿಸಿಯೇ ಬಿಟ್ಟಿದ್ದಾರೆ..! ತಮಿಳುನಾಡಿನ ಮಣಿಮತ್ತೂರಿನಲ್ಲಿ ಈ ವಿಮಾನ Saji X Air-S ಯಶಸ್ವಿ ಹಾರಾಟವನ್ನೂ ಮಾಡಿದೆ..! ಇವರ ಮೊದಲ ವಿಮಾನವನ್ನು ಇಂಜಿನಿಯರಿಂಗ್ ಕಾಲೇಜಿನ ಪ್ರೊಪೆಸರ್ ಒಬ್ಬರು ಕೊಂಡುಕೊಂಡಿದ್ದಾರಂತೆ..! ಅದರ ಸಹಾಯದಿಂದ ವಿದ್ಯಾರ್ಥಿಗಳಿಗೆ ವಿಮಾನ ತಯಾರಿಕೆ ಬಗ್ಗೆ ಮಾಹಿತಿ ನೀಡ್ತಾರಂತೆ..!
ಹಾಗೆಯೇ ಇನ್ನೊಂದು ವಿಷಯವನ್ನು ನಿಮಗೆ ಹೇಳ್ಲೇ ಬೇಕು. ಅದೇನಪ್ಪಾ ಅಂದ್ರೆ, ಅಂತೂ ಇಂತು ಈಗ ಬಾಲ್ಯದ ಕನಸನ್ನು ನನಸಾಗಿಸಿಕೊಂಡ 44 ವರ್ಷ ವಯಸ್ಸಿನ ಸಾಜಿ ಥಾಮಸ್ ಅವರೇ ಹೇಳುವಂತೆ ಇವರ ಸಾಧನೆಗೆ ಹೆಂಡತಿಯ ಉತ್ತೇಜನ, ಸಹಕಾರ, ಪ್ರೋತ್ಸಾಹ ತುಂಬಾನೇ ಇದೆ..! ಬಡವರಾಗಿರುವ ಥಾಮಸ್ಗೆ ವಿಮಾನ ತಯಾರಿಕೆಗೆ 14 ಲಕ್ಷ ಖರ್ಚಾಯ್ತಲ್ಲ…?! ಅದನ್ನು ಒದಗಿಸಿದವರು ಅವರ ಹೆಂಡತಿಯೇ..! ತನ್ನಹೆಸರಿನಲ್ಲಿದ್ದ ಭೂಮಿಯನ್ನು ಮಾರಿ ಥಾಮಸ್ಗೆ ವಿಮಾನ ತಯಾರಿಕೆಗೆ ಬೇಕಾದ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ನೆರವಾದರು..! ಅದೇನೇ ಇರಲಿ.. ಇವತ್ತು ಸಾಜಿ ಥಾಮಸ್ ವಿಮಾನವನ್ನು ತಯಾರಿಸಿಯೇ ಬಿಟ್ಟಿದ್ದಾರೆ..! ಅವತ್ತು ಇವರನ್ನು ನೋಡಿ ನಗುತ್ತಿದ್ದ ಜನ ಇವತ್ತು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ..!
ಕಾಡುಕೊಂಪೆಯಂತಾ ಕುಗ್ರಾಮ ಒಂದರಲ್ಲಿ ಹುಟ್ಟಿ ತನ್ನ ಅಂಗವಿಕಲತೆಯನ್ನು ಗಣನೆಗೆ ತೆಗೆದುಕೊಳ್ಳದೆ..! ಗೇಲಿ ಮಾಡುವವರಿಗೆ.., ಅವಮಾನಿಸುತ್ತಿದ್ದವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅಂದುಕೊಂಡಿದ್ದನ್ನು ಸಾಧಿಸಿದ ಸಾಜಿ ಥಾಮಸ್ ಸ್ಪೂರ್ತಿಯ ಚಿಲುಮೆ..! ಸಾಧಿಸುವ ಛಲವೊಂದಿದ್ದರೆ ಅಂಗವಿಕಲತೆ ಸಾಧನೆಗೆ ಅಡ್ಡಿಬರಲಾರದು ಎಂಬುದಕ್ಕೇ ಸಾಜಿ ಥಾಮಸ್ರವರಿಗಿಂತ ಹೆಚ್ಚಿನ ಉದಾಹರಣೆ ಬೇಕೇನ್ರೀ..?