ಭಾನುವಾರ ನಡೆದ ಸ್ಥಳೀಯ ಆರ್‍ಎಸ್‍ಎಸ್ ಕಾರ್ಯಕರ್ತರಾದ ರುದ್ರೇಶ್ ಅವರ ಹತ್ಯೆಯನ್ನು ಖಂಡಿಸಿ ಇಂದು ಬೆಂಗಳೂರು ನಗರದಾದ್ಯಂತ ಆರ್‍ಎಸ್‍ಎಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನೆನ್ನೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಹಾಡಹಗಲೇ ನಡೆದ ಭೀಕರ ಕಗ್ಗೊಲೆಯಿಂದಾಗಿ ಇಡೀ ಬೆಂಗಳೂರೇ ಬೆಚ್ಚಿಬಿದ್ದಿದ್ದು ಆರೋಪಿಗಳನ್ನು ಕಂಡುಹಿಡಿಯುವಲ್ಲಿ ಪೊಲೀಸರು ವಿಫಲತೆ ಹೊಂದಿದ್ದಾರೆ ಎಂದು ಕಾರ್ಯಕರ್ತರತು ಆರೋಪಿಸಿದ್ದಾರೆ.
ಇನ್ನು ಈ ಪ್ರತಿಭಟನೆಯಲ್ಲಿ ಭಾಗಹಿಸಿದ್ದ ಬಿಜೆಪಿ ನಾಯಕರಾದ ಆರ್ ಅಶೋಕ್ ನೇತೃತ್ವದ ಸಂಸದರು, ಶಾಸಕರುಗಳು ಹಾಗೂ ಸಂಘಪರಿವಾರದ ಮುಖಂಡರು ಸರ್ಕಾರದ ವಿರದ್ದ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ನವರಾತ್ರಿ ಮುಕ್ತಾಯ ಅಂಗವಾಗಿ ನೆನ್ನೆ ನಡೆದ ಆರ್‍ಎಸ್‍ಎಸ್ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರುದ್ರೇಶ್ ಕಾರ್ಯಕ್ರಮ ಮುಗಿಸಿ ವಾಪಾಸ್ಸಾಗುವ ವೇಳೆಯಲ್ಲಿ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇನ್ನು ಆರೋಪಿಗಳ ಪತ್ತೆಗಾಗಿ ಒಟ್ಟು ಐದು ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಲಿದ್ದೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎನ್‍ಎಸ್ ಮೇಘರಿಕ್ ತಿಳಿಸಿದ್ದಾರೆ. ಕೊಲೆಗೆ ನಿರ್ದಿಷ್ಠ ಕಾರಣವೇನು ಎಂಬುದು ತಿಳಿಯದೇ ಹೋದರೂ ರಿಯಲ್ ಎಸ್ಟೇಟ್ ಹಾಗೂ ಹಣಕಾಸಿನ ವ್ಯವಹಾರ ಕಾರಣದಿಂದಾಗಿ ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗ್ತಾ ಇದೆ ಎಂದು ತಿಳಿದು ಬಂದಿದೆ. ಇನ್ನು ರುದ್ರೇಶ್ ಹತ್ಯೆ ಖಂಡಿಸಿ ಇಂದು ಶಿವಾಜಿನಗರ ಬಂದ್‍ಗೆ ಸಂಘಪರಿವಾರ ಕಾರ್ಯಕರ್ತರು ಕರೆ ನೀಡಿದ್ದಾರೆ.
Like us on Facebook The New India Times
POPULAR STORIES :
ಕಾವೇರಿ ವಿವಾದ: ಇಂದು ಸುಪ್ರೀಂ ಕೈಸೇರಲಿದೆ ತಜ್ಞರ ವರದಿ..! ಈಗಲಾದರೂ ಕರ್ನಾಟಕದ ಪರ ನ್ಯಾಯ ಸಿಗುತ್ತಾ..?
ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?
ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!
ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!