ಮಾಹಿತಿ ಹಕ್ಕು(ಆರ್.ಟಿ.ಐ) ಕಾರ್ಯಕರ್ತನಿಗೆ 10ಲಕ್ಶ ರೂ ಮಧ್ಯಂತರ ಪರಿಹಾರ

Date:

ದೇವೇಂದ್ರ ಫಡ್ನಾವಿಸ್ ಅವರು ಮಾಹಿತಿ ಹಕ್ಕು(ಆರ್.ಟಿ.ಐ) ಕಾರ್ಯಕರ್ತ ಅರುಣ್ ಸಾವಂತ್ ಅವರಿಗೆ ಭದ್ರತೆ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರಾರ್ಥ 10ಲಕ್ಶ ರೂ ಮೊತ್ತವನ್ನು ಸರಕಾರದ ವತಿಯಿಂದ ನೀಡಿದರು.

ಮಾಹಿತಿ ಹಕ್ಕು ಕಾರ್ಯಕರ್ತ ನೆಂದರೆ ಅವರಿಗೆ ಸರಕಾರದಿಂದ ಯಾವುದೆ ವಿಷಯದಲ್ಲಿ ಮಾಹಿತಿ ಪಡೆದುಕೊಳ್ಳುವ ಅಧಿಕಾರ ಅಥವಾ ಲೆಕ್ಕ ಪತ್ರ ಗಳನ್ನು ಪರಿಶೋಧಿಸುವ ಅಧಿಕಾರ ವಿರುತ್ತದೆ ಹಾಗೂ ಈ ಹಿನ್ನೆಲೆಯಲ್ಲಿ ಯಾವುದೆ ಪ್ರಜೆಯು ತನಗೆ ಪೋಲಿಸ್ ಭದ್ರತೆ ಒದಗಿಸುವಂತೆ ಮನವಿ ಸಲ್ಲಿಸಿದಲ್ಲಿ ಅದನ್ನು ಪೂರ್ತಿಗೊಳಿಸುವುದು ಇಲಾಖೆಯ ಕರ್ತವ್ಯವಾಗಿದೆ.

ಆದರೆ ಇಲ್ಲಿ ಘಟನೆ ನಡೆದದ್ದು ಹೀಗೆ :

64 ವಯಸ್ಸಿನ ಅರುಣ್ ಸಾವಂತ್ ಅವರು ಫ಼ೆಬ್ರುವರಿ 2010 ಮುಂಬಯಿಯ ಬದ್ಲಾಪುರ್ ನಲ್ಲಿ ಕೆಲವು ಸರಕಾರಿ ಅಧಿಕಾರಿ ಹಾಗೂ ಕೆಲವು ರಾಜಕೀಯ ನೇತರ ಬಗ್ಗೆ ಮಾಹಿತಿ ಕೋರಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು ಹಾಗೂ ಈ ಕಾರಣಕ್ಕಾಗಿ ತನ್ನ ಜೀವದ ಭದ್ರತೆಯ ದೃಷ್ಟಿಯಿಂದ ಮುಂಬಯಿಯ ಥಾಣೆನಗರದ ಪೋಲಿಸ್ ಠಾಣೆಯಲ್ಲಿ ಮನವಿಯೊಂದನ್ನು ಸಲ್ಲಿಸಿದ್ದರು.ಆದರೆ ಪೋಲಿಸ್ ಅಧಿಕಾರಿಗಳ ನಿರ್ಲಕ್ಶದಿಂದ ಅರುಣ್ ಸಾವಂತ್ ಮೇಲೆ 2 ಸುತ್ತು ಗುಂಡಿನ ಆಕ್ರಮಣ ನಡೆದು ಅವರ ಬೆನ್ನೆಲುಬು ತೀವ್ರ ವಾಗಿ ಹಾನಿಗೊಳಗಾಯಿತು ಹಾಗೂ ನಡೆಯಲಾರದಷ್ಟು ಅಸಹಾಯಕ ಪರಿಸ್ಥಿತಿಗೆ ಗುರಿಯಾಗಬೇಕಾಯಿತು.ಈ ಕಾರಣಕ್ಕಾಗಿ ಸಾವಂತ್ ಅವರು ಪೋಲಿಸ್ ಅಧಿಕಾರಿಗಳ ವಿರುದ್ದ ದೂರನ್ನು ದಾಖಲಿಸಿದರು.ತನಿಖೆಯ ವಿಚಾರಣೆಗಾಗಿ ವಿಶೇಷ ತಂಡವೊಂದನ್ನು ರಚಿಸಲಾಯಿತು ಹಾಗೂ ಇದರ ಮುಖ್ಯ ತೀರ್ಪುಗಾರರಾಗಿ ಮುಖ್ಯ ಮಾಜಿ ನ್ಯಾಯಾಧೀಶ ಎಸ್.ಆರ್ ಬನ್ನೂರ್ಮತ್ ನವರನ್ನು ನೇಮಿಸಲಾಯಿತು.ಆದರೆ ವಿಚಾರಣಾ ತಂಡವನ್ನು ದಾರಿ ತಪ್ಪಿಸುವ ಸಲುವಾಗಿ ಥಾಣೆ ಪೋಲಿಸ್ ಇಲಾಖೆಯು ಸಾವಂತ್ ಅವರು ಸಮಾಜ ಸುಧಾರಕರೆಂದು ಸುಳ್ಳು ಹೇಳುತ್ತಿದ್ದಾರೆ ಹಾಗೂ ಮಾಹಿತಿ ಹಕ್ಕಿನ ಲಾಭ ಪಡೆಯಲೆತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ಮಾಡಿತು.ವಾದ ವಿವಾದಗಳ ನಡುವೆ ಸಾವಂತ್ ವಿಚಾರಣೆಯು 5 ವರ್ಷಗಳ ತನಕ ನಡೆದು ಪೋಲಿಸ್ ಇಲಾಖೆಯು ಸಾವಂತ್ ಅವರನ್ನು ಅರೋಪಿಯೆಂದು ಸಾಬೀತು ಪಡಿಸುವಲ್ಲಿ ವಿಫಲವಾಯಿತು.ಕೊನೇಗು ಸತ್ಯಕ್ಕೆ ಜಯ ಎಂಬಂತೆ ವಿಚಾರಣೆಯಲ್ಲಿ ಅರುಣ್ ಸಾವಂತ್ ಹೇಳಿಕೆಯೆ ನಿಜವೆಂದು ಸಾಬೀತಾಯಿತು.ಅವರಿಗೆ ಪರಿಹಾರಾರ್ಥ 10 ಲಕ್ಷ ರೂ ನೀಡಲಾಯಿತು ಅಷ್ಟೇಅಲ್ಲದೆ ಮುಂದೆ ಇಂತಹ ಯಾವುದೇ ಅನಾಹುತವಾಗದಂತೆ ಯಾವುದೇ ನಾಗರಿಕನ ಭದ್ರತೆ ಯ ಮನವಿಯನ್ನು ಪೂರ್ತಿಗೊಳಿಸಬೇಕೆಂದು ಪೋಲಿಸ್ ಇಲಾಖೆಗೆ ಎಚ್ಚರಿಕೆ ನೀಡಲಾಯಿತು.

ಸಾವಂತ್ ಅವರ ಪಾಲಿನ ಅಗ್ನಿ ಪರೀಕ್ಶೆಯಲ್ಲಿ ಹರಸಾಹಸ ಮಾಡಿ ಕಡೆಗೂ ವಿಚಾರಣೆಯನ್ನು ಗೆಲ್ಲುವಲ್ಲಿ ಸಫಲರಾದರು.

  • ಸ್ವರ್ಣಲತ ಭಟ್

POPULAR  STORIES :

ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?

ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...