ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಲು ಯುವತಿಯೊಬ್ಬಳು ಮನೆಬಿಟ್ಟು ಬಂದಿದ್ದಾಳೆ…
24ವರ್ಷದ ಮಾನಸಿಕ ಅಸ್ವಸ್ಥ ಯುವತಿ ಆಗಸ್ಟ್ 11ರಂದು ಮನೆ ಬಿಟ್ಟು ಮುಂಬೈಗೆ ಬಂದು, ಸಲ್ಮಾನ್ ಖಾನ್ ಉಳಿದುಕೊಂಡಿದ್ದ ಬಾಂದ್ರದ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಬಳಿ ಬಂದಿದ್ದಾಳೆ. ಸೆಕ್ಯುರಿಟಿ ಒಳಗಡೆ ಬಿಡದೇ ಇದ್ದಾಗ ಆತನೊಂದಿಗೆ ಆಕೆ ಗಲಾಟೆ ಮಾಡಿದ್ದಾಳೆ.
ನಂತರ ಆಕೆಯನ್ನು ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆ ಯುವತಿಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ತಾನು ಸಲ್ಮಾನ್ ಖಾನ್ ಅವರನ್ನು ಮದ್ವೆ ಆಗಲು ಬಂದಿರುವುದಾಗಿ ಆಕೆ ತಿಳಿಸಿದ್ದಾಳೆ.