20ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ಜೋಧಪುರ್ ಸಿಜೆಎಂ ಕೋರ್ಟ್ ತೀರ್ಪು ನೀಡಿದೆ.

ಸರ್ಕಾರಿ ವಕೀಲರು ಕನಿಷ್ಠ 6ವರ್ಷ ಶಿಕ್ಷೆ ನೀಡಬೇಕೆಂದು ವಾದ ಮಾಡಿದ್ದರು. ಸಲ್ಮಾನ್ ಖಾನ್ ಪರ ವಕೀಲರು ಶಿಕ್ಷೆ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಮನವಿ ಮಾಡಿಕೊಂಡಿದ್ರು.
ಇತರೆ ಆರೋಪಿಗಳಾದ ಸೈಫ್ ಅಲಿ ಖಾನ್, ಟಬು , ಸೋನಾಲಿ ಬೇಂದ್ರೆ ಮತ್ತು ನೀಲಂ ಕೋಠಾರಿ ಅವರನ್ನು ಖುಲಾಸೆಗೊಳಿಸಲಾಗಿದೆ.
ಕಂಕಣಿ ಗ್ರಾಮದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ 13 ರಂದು ಜೋದ್ ಪುರ್ ಕೋರ್ಟ್ ನಲ್ಲಿ ಅಂತಿಮ ವಿಚಾರಣೆ ಆರಂಭವಾಗಿತ್ತು.
ಪ್ರಕರಣದ ಹಾದಿ
* ಸೆಪ್ಟೆಂಬರ್ 26, 1998 – ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್
* ಅಕ್ಟೋಬರ್ 2, 1998 – ಕೇಸ್ ದಾಖಲಿಸಿದ್ದ ಅರಣ್ಯಾಧಿಕಾರಿಗಳು
* 7 ಜನ ಆರೋಪಿಗಳು – ಸಲ್ಮಾನ್ ಖಾನ್, ಸೈಫ್ ಅಲಿಖಾನ್, ಸೋನಾಲಿ ಬೇಂದ್ರೆ, ಟಬು, ನೀಲಂ ಕೋಠಾರಿ, ದುಶ್ಯಂತ್ ಸಿಂಗ್, ದಿನೇಶ್ ಗಾವ್ರೆ
* 4 ಜನ ಪ್ರತ್ಯಕ್ಷದರ್ಶಿಗಳು – ಛೋಗರಾಮ್, ಮೂನಂ ಚಂದ್, ಶಿರಾರಾಮ್, ಮಂಗಿಲಾಲ್
* ನವೆಂಬರ್ 9,2000 – ಸಿಜೆಎಂ ಕೋರ್ಟ್‍ನಿಂದ ಕೇಸ್
* ಫೆಬ್ರವರಿ 19, 2016 – ಆರೋಪಿಗಳ ಮೇಲೆ ಚಾರ್ಜ್‍ಶೀಟ್
* 7 ವರ್ಷಗಳ ಕಾಲ ಸುದೀರ್ಘವಾಗಿ ನಡೆದ ವಿಚಾರಣೆ
* ಮಾರ್ಚ್ 23, 2013 – ಎಲ್ಲಾ ಆರೋಪಿಗಳ ಮೇಲೆ ಮತ್ತೆ ಹೊಸದಾಗಿ ಚಾರ್ಚ್‍ಶೀಟ್
* ಮೇ, 23, 2013 – ವಿಚಾರಣೆ ಆರಂಭಿಸಿದ ಸಿಜೆಎಂ ಕೋರ್ಟ್, 28 ಸಾಕ್ಷಿಗಳ ಹೇಳಿಕೆ ದಾಖಲು
* ಜನವರಿ 13, 2017 – ಪ್ರಕರಣದ ಮಾಹಿತಿ ಪೂರ್ಣ
* ಜನವರಿ 17,2017 – ಕೋರ್ಟ್ ಮುಂದೆ ಎಲ್ಲಾ ಆರೋಪಿಗಳು ಹಾಜರು
* ಸೆಪ್ಟೆಂಬರ್ 13, 2017 – ಪ್ರಾಸಿಕ್ಯೂಷನ್‍ನಿಂದ ಅಂತಿಮ ವಾದ
* ಅಕ್ಟೋಬರ್ 28, 2017 – ಡಿಫೆನ್ಸ್ ಲಾಯರ್ ಅಂತಿಮ ವಾದ
* ಮಾರ್ಚ್, 24, 2018 – ವಾದ-ಪ್ರತಿವಾದ ಪೂರ್ಣ
* ಮಾರ್ಚ್ 28, 2018 – ಅಂತಿಮ ತೀರ್ಪು ಕಾಯ್ದಿಟ್ಟ ಸಿಜೆಎಂ ಕೋರ್ಟ್
* ಏಪ್ರಿಲ್ 5, 2018 – ತೀರ್ಪು ಪ್ರಕಟಿಸಿದ ಕೋರ್ಟ್, ಸಲ್ಮಾನ್ ದೋಷಿ, ಇತರರ ಖುಲಾಸೆ




