ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 5ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಜೈಲು ವಾಸದ ಮೊದಲ ರಾತ್ರೀಲಿ ಯಾವುದೇ ಆಹಾರ ಸೇವಿಸಿಲ್ಲ ಎಂಬ ಮಾಹಿತಿ ದೊರೆತಿದೆ.
ಜೈಲಿನ ಊಟವೂ ಬೇಡ , ಹೊರಗಡೆ ಊಟವೂ ಬೇಡ ಎಂದು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಜೈಲಿಗೆ ಬಂದಾಗ ಸಲ್ಮಾನ್ ಅವರ ರಕ್ತದೊತ್ತಡ ಹೆಚ್ಚಾಗಿತ್ತು. ಸ್ವಲ್ಪ ಸಮಯದ ಬಳಿಕ ಸಹಜ ಸ್ಥಿತಿಗೆ ಮರಳಿದೆ ಎಂದು ವೈದ್ಯರು ಹೇಳಿರುವುದಾಗಿ ಜೈಲಿನ ಅಧೀಕ್ಷಕ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
ಸಲ್ಮಾನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಸಿಗುವುದಿಲ್ಲ. ಅವರ ಕೋಣೇಲಿ ಒಂದು ಮರದ ಮಂಚ, ಒಂದು ಕಂಬಳಿ, ಒಂದು ಕೂಲರ್ ಇರಲಿದೆ. ಜೈಲಿನ ಆಹಾರ ಪದ್ಧತಿಯಂತೆ ದಾಲ್ , ಚಪಾತಿ ಇರಲಿದ್ದು, ಬೆಳಗಿನ ಊಟದಲ್ಲಿ ಕಿಚಡಿ ಇರಲಿದೆ ಎಂದು ವಿಕ್ರಮ್ ಸಿಂಗ್ ತಿಳಿಸಿದ್ದಾರೆ.




