ಸ್ಯಾಮ್ಸಂಗ್ ಹೆಸ್ರು ಕೇಳಿದ ತಕ್ಷಣ ನಮ್ಮ ಮನಸ್ಸಿಗೆ ಮೂಡುವ ಚಿತ್ರಣ ಒಂದು ದೊಡ್ದ ಕಂಪನಿ ಹಾಗೂ ಸಾವಿರಕ್ಕೂಅಧಿಕ ಸಂಖ್ಯೆಯಲ್ಲಿರೋ ಕೆಲಸಗಾರರು.ಅಲ್ಲವೇ?ಹೌದು ನಿಜ !ಈ ದೈತ್ಯಕಂಪನಿಯ ಯೂನಿಟ್ ನಲ್ಲಿ ಸುಮಾರು 10,000 ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ.ಆದರೆ ಇದರ ಕುರಿತಾದ ಇನ್ನೂ ಒಂದು ಸತ್ಯ ಕೇಳಿದ ಮೇಲಂತೂ ನಿಮಗಿನ್ನೂ ಆಶ್ಚರ್ಯವಾಗಬಹುದು.ಕೆಲಸಗಾರರ ಸುರಕ್ಷತಾ ಗ್ರೂಪ್ ನಿಂದ ನಮಗೊದಗಿ ಬಂದ ಮಾಹಿತಿಯನ್ವಯ,ಸ್ಯಾಮ್ಸಂಗ್ ಡಿಸ್ ಪ್ಲೇ ಹಾಗೂ ಕಂಪ್ಯೂಟರ್ ಚಿಪ್ ಫ್ಯಾಕ್ಟರಿಗಳಲ್ಲಿ,ಕೆಲಸಗಾರರು ನಿತ್ಯ ಅನೇಕ ತರಹದ ಅಪಾಯಕಾರಿ ರಾಸಾಯನಿಕಗಳು ಹಾಗೂ ವಿಷಕಾರಿ ವಸ್ತುಗಳೆದುರಿಗೆ ತಮ್ಮನ್ನು ತಾವೇ ಒಡ್ಡಿಕೊಳ್ಳಬೇಕಾದ ಪರಿಸ್ಥಿತಿ ಬರುವುದರಿಂದಾಗಿ,ಅವರಲ್ಲಿ ವೃತ್ತಿಪರ ಕಾಯಿಲೆಗಳು ತಲೆದೋರಿ ಅವರ ಜೀವನಕ್ಕೆ ಅಪಾಯ ತಂದೊಡ್ಡುತ್ತಿವೆ ಎನ್ನಲಾಗುತ್ತಿದೆ.
ಸ್ಯಾಮ್ಸಂಗ್ ಈ ಸತ್ಯವನ್ನು ರಹಸ್ಯವಾಗಿ ಕಾಯ್ದುಕೊಂಡಿದ್ದಲ್ಲದೆ,ಹಣದ ದಾಹ ತೋರಿಸಿ ಕೆಲಸಗಾರರ ಬಾಯಿ ಮುಚ್ಚಿಸಬಹುದೆಂದುಕೊಂಡಿದೆ.ನಿಜವಾಗಿ ಹೇಳುವುದಾದರೆ,ತೀವ್ರ ಸ್ವರೂಪಿ ಕಾಯಿಲೆಗೆ ಸಂಬಂಧಿಸಿದ ಇಂತಹ 200 ಪ್ರಕರಣಗಳು ಪತ್ತೆಯಾಗಿದ್ದು,ಅವುಗಳಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್,ಲಿಂಫೋಮಾ,ಲುಪಸ್,ಲುಕೇಮಿಯಾ ದಂತಹ ಹೆಚ್ಚಿನ ರೋಗಗಳು L.C.D ಯೂನಿಟ್ ಗಳಲ್ಲಿ ಕೆಲಸ ಮಾಡುವವರಲ್ಲಿ ಅಧಿಕವಾಗಿದೆ.25-30 ವರುಷವಿರುವ 76 ಕೆಲಸಗಾರರು ಅದೇ ಕಾರಣಕ್ಕಾಗಿ ಸಾವನ್ನಪ್ಪಿರುವುದು ಸಾಬೀತಾಗಿದೆ.
ಇದಲ್ಲದೆ ಸೌತ್ ಕೊರಿಯನ್ ಸರಕಾರವು ವೃತ್ತಿಯಲ್ಲುಪಯೋಗಿಸೋ ರಾಸಾಯನಿಕ ಪದಾರ್ಥಗಳಿಂದಲೇ ಬಂದಿರುವ ರೋಗಗಳ ಸಂಬಂಧ ಸರಿಯಾದ ಸಾಕ್ಷಿ ಇಲ್ಲದೆ ಏನೂ ಪರಿಹಾರ ಒದಗಿಸುವುದಿಲ್ಲವಂತೆ.ಹಾಗೂ ಸ್ಯಾಮ್ಸಂಗ್ ಕಂಪನಿಯು ಕೆಲಸಗಾರರಿಗೆ ಈ ವಿಷ್ಯದ ಬಗ್ಗೆ ಗಪ್ ಚುಪ್ ಇರಲು ಭಾರೀ ಮೊತ್ತ ನೀಡುತ್ತಿದೆಯಂತೆ.ಈ ಮಾಹಿತಿಯನ್ನು ಕೆಲಸಗಾರರಿಂದಲೇ ಕೇಳೋಣ ಬನ್ನಿ.
ಹ್ವಾಂಗ್ ಹ್ಯೂ-ಮಿ ಎಂಬ 22 ವರುಷದ ಮಹಿಳೆ ಲುಕೇಮಿಯಾ ಕಾಯಿಲೆಯಿಂದ ಸತ್ತುಹೋದಳಂತೆ.ಆಕೆಯ ತಂದೆಯಾದ ಹ್ವಾಂಗ್ ಸಾಂಗ್-ಗೀ ಫ್ಯಾಕ್ಟರೀಯಲ್ಲಿ ತನಿಖೆ ನಡೆಸಿದಾಗ ಈ ಮಾಹಿತಿ ಆತನಿಗೆ ದೊರಕಿತಂತೆ.
“ಸ್ಯಾಮ್ಸಂಗ್ ಒಂದು ಬಾರಿ ನನಗೆ 1 ಬಿಲಿಯನ್ ಡಾಲರ್ ಗೆ ಬೇಡಿಕೆ ನೀಡಿತ್ತು.ಇದರ ಹಿಂದಿರೋ ತಂತ್ರ ವೇನೆಂದರೆ ನಾನು ನನ್ನ ಮಗಳ ಕೇಸ್ ನ್ನು ಹಿಂದೆ ತೆಗೆಯಬೇಕೆಂದೂ ಹಾಗೂ ಅವಳ ಕಾಯಿಲೆಯು ವೃತ್ತಿಗೆ ಸಂಬಂಧಿಸಿದ್ದಲ್ಲವೆಂಬ ಹೇಳಿಕೆ ನೀಡಬೇಕೆಂದು ಆಗಿತ್ತು.”
ಕಂಪನಿಯ ಚಿಪ್ ಫ್ಯಾಕ್ಟರಿಯಲ್ಲಿ ಮಾಜಿ ಕೆಲಸಗಾರಳಾಗಿರುವ ಪಾರ್ಕ್ ವನ್ ಹೀ ಎಂಬ 42 ವರುಷದ ಹೆಂಗಸೊಬ್ಬಳು ಲುಪಸ್ ಕಾಯಿಲೆಯಿಂದ ಬಳಲುವ ಕಾರಣ ತನ್ನ ಉದ್ಯೋಗ ಬಿಟ್ಟಳಂತೆ.ಆಕೆಗೊಬ್ಬ ಮಗಳಿದ್ದು ಆಕೆ ಈ ರೀತಿಯಾಗಿ ಹೇಳುತ್ತಾಳೆ.
“ನನಗೆ ಮನೆ ಸರಕಾರದಿಂದ ಸರಕಾರದಿಂದ ಸಿಕ್ಕಿದ ಸ್ವತ್ತು.ನಮ್ಮ ಸಂಬಂಧಿಗಳ್ಯಾರೂ ನಮಗೆ ಸಹಾಯ ಮಾಡಲಿಲ್ಲ,ಸ್ಯಾಮ್ಸಂಗ್ ಯಾವ ಪರಿಹಾರವನ್ನೂ ನೀಡಲಿಲ್ಲ ಎನ್ನುತ್ತಾರೆ.”
43 ವಯಸ್ಸಿನ ಪಾರ್ಕ್ಮಿನ್ ಸೂಕ್ ಎಂಬ ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರೋ,ಮಹಿಳೆ ಏನನ್ನುತ್ತಾಳೆ ನೋಡಿ
“ಇದೊಂದು ಜೀವನದ ದುರಂತ ಸನ್ನಿವೇಶ,ಎಲ್ಲೆಲ್ಲಿಂದಲೋ ಮಕ್ಕಳನ್ನು ಕರೆತಂದು ಅವರನ್ನು ಯೂಸ್ ಆಂಡ್ ತ್ರೋ ಕಪ್ಸ್ ತರಹ ಈ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ,ಎಲ್ಲಾದಕ್ಕಿಂತಲೂ ದುಡ್ಡೇ ದೊಡ್ಡದು ಇವರಿಗೆ”
ಇನ್ನು ಕೊನೆಯದಾಗಿ ಸ್ಯಾಮ್ಸಂಗ್ ಡಿಸ್ಪ್ಲೇ ಫ್ಯಾಕ್ಟರಿಯಲ್ಲಿ ಕೆಲಸಗಾರಳಾಗಿರೋ ಕಿಮ್ ಮೀ ಸಿಯಾನ್ ಎಂಬ 36 ವರುಷದ ಮಹಿಳೆಯು ಮಲ್ಟಿಪಲ್ ಸ್ಕ್ಲಿರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದು,ಸ್ಯಾಮ್ಸಂಗ್ ತಮ್ಮಲ್ಲಿ ಬಳಕೆಯಾಗೋ ರಾಸಾಯನಿಕ ಪದಾರ್ಥಗಳು ತೀವ್ರ ಅಪಾಯಕಾರಿಯದವು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲೇ ಇಲ್ಲ ಎನ್ನುತ್ತಾಳೆ.
ಫ್ರೆಂಡ್ಸ್! ಸಂಪತ್ತು,ಅಧಿಕಾರ,ದುಡ್ಡಿದ್ರೆ ಸಾಕೆ! ಇನ್ನೊಬ್ಬರ ಜೀವನಕ್ಕೆ ಯಾವ ಬೆಲೆಯೂ ಇಲ್ಲವೇ??? ಏನಂತೀರಾ??
- ಸ್ವರ್ಣಲತ ಭಟ್
POPULAR STORIES :
ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!