ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗಡೆ ವಿಷಯದಲ್ಲಿ ಹೊಸ ವಿವಾದ ಸೃಷ್ಠಿಯಾಗಿದೆ. ‘ಕಾಲೇಜು ಕುಮಾರ’ ನಿರ್ಮಾಪಕ ಪದ್ಮನಾಭ್ ಕಿರಿಕ್ ಮಾಡ್ತಿರೋರು.
ಕಾಲೇಜು ಕುಮಾರ ಸಿನಿಮಾ ಸಕ್ಸಸ್ ಆಗಿದೆ. ಆದರೆ. ಈಗೇಕೆ ಕ್ಯಾತೆ ತೆಗಿತಿದ್ದಾರೋ ಗೊತ್ತಾಗ್ತಿಲ್ಲ. ಸಂಯುಕ್ತಾ ಅವರು ಪ್ರಚಾರಕ್ಕೆ ಬರ್ಲಿಲ್ಲ ಅನ್ನೋದು ನಿರ್ಮಾಪಕರು ಮಾಡ್ತಿರೋ ಆರೋಪ. ಇಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿರೋ ಪದ್ಮನಾಭ್, ಸಂಯುಕ್ತಾ ಹೆಗಡೆ ಪ್ರಚಾರಕ್ಕೆ ಬರ್ಲಿಲ್ಲ. ‘ಇಂಥಾ ನಾಯಕಿಯರನ್ನು’ ಬೆಳೆಸಬೇಡಿ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ಇವರ ಬಗ್ಗೆ ವಾಣಿಜ್ಯಮಂಡಳಿ ಹಾಗೂ ಕಲಾವಿದರ ಸಂಘಕ್ಕೆ ದೂರು ನೀಡುವುದಾಗಿಯೂ ಪದ್ಮನಾಭ್ ತಿಳಿಸಿದ್ದಾರೆ.
ಅನಾರೋಗ್ಯ ಕಾರಣದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಅದನ್ನು ಅವರ ಗಮನಕ್ಕೂ ತಂದಿದ್ದೆ. ಅವತ್ತೇ ಮಾತಾಡೋ ಬದಲು ಇವತ್ತೇಕೆ ಮಾತಾಡ್ತಿದ್ದಾರೆ ಗೊತ್ತಿಲ್ಲ ಅಂತ ಪ್ರತಿಕ್ರಿಯಿಸಿದ್ದಾರೆ ಸಂಯುಕ್ತಾ. ಕಾಲೇಜು ಕುಮಾರ ಚಿತ್ರದ ಆರಂಭದಲ್ಲಿ ಸಂಯುಕ್ತಾ ಅವರು ಡೇಟ್ಸ್ ನೀಡ್ಲಿಲ್ಲ ಎಂದು ನಿರ್ಮಾಪಕರು ಆರೋಪಿಸಿದ್ದರು. ದಿನ ಹೊಂದಾಣಿಕೆ ಮಾಡಿಕೊಳ್ಳದೇ ಇದ್ದಿದ್ದರಿಂದ ಸಂಯುಕ್ತಾ ತಮಿಳು ಸಿನಿಮಾ ಬಿಟ್ಟು ‘ಕಾಲೇಜು ಕುಮಾರ’ನ ಶೂಟಿಂಗ್ ಗೆ ಬಂದಿದ್ದರು. ಈ ಸಿನಿಮಾದ ಉದ್ದೇಶಕ್ಕಾಗಿ ತಮಿಳು ಚಿತ್ರವನ್ನು ಕೈಬಿಟ್ಟಿದ್ದೀನಿ ಎಂದು ಹೇಳುತ್ತಾರೆ ಸಂಯುಕ್ತಾ.
ನನಗೆ ಆ ಬಗ್ಗೆ ಯಾವುದೇ ಬೇಜಾರಿಲ್ಲ. ಕಾಲೇಜು ಕುಮಾರ ಚಿತ್ರದಲ್ಲಿ ಚೆನ್ನಾಗಿಯೇ ನಟಿಸಿದ್ದೇನೆ. ನಿರ್ಮಾಪಕರ ಮೇಲೆ ಅಂತಹ ಬೇಸರವಿದ್ದರೆ,ನಾನು ಚೆನ್ನಾಗಿ ನಟಿಸ್ತಾ ಇರ್ಲಿಲ್ಲ ಅಲ್ವಾ..? ಆಗ ಅವರು ಏನ್ ಮಾಡಕ್ಕೆ ಆಗ್ತಿತ್ತು? ಎಂಬುದು ಸಂಯುಕ್ತಾ ಪ್ರಶ್ನೆ. ‘ಇಂಥಾ ನಾಯಕಿಯನ್ನು ಬೆಳೆಸಬೇಡಿ’ ಎಂದಿರುವ ಪದ್ಮನಾಭ್ ಅವರ ಹೇಳಿಕೆಗೆ ಸಂಯುಕ್ತಾ ಹೆಗಡೆ, ‘ಜನ ನಿರ್ಧರಿಸ್ತಾರೆ. ನನ್ನನ್ನು ಪ್ರೋತ್ಸಾಹಿಸುವವರು ಈ ಬಗ್ಗೆ ಯೋಚನೆ ಮಾಡ್ತಾರೆ. ನಾನೇನು ಹೇಳಕ್ಕಾಗಲ್ಲ’ ಎಂದು ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ್ದಾರೆ.