ಇಪ್ಪತ್ತೆರಡರ ಈ ಹುಡುಗಿಯ ಬಗ್ಗೆ ಹೇಳಲೇ ಬೇಕು..! ಚಿಕ್ಕ ವಯಸ್ಸಲ್ಲೇ ದೊಡ್ಡ ಜವಬ್ದಾರಿಯನ್ನು ನಿರ್ವಹಿಸುತ್ತಾ ಬಂದಿರೋ ಈಕೆ ಎಲ್ಲರಿಗೂ ಮಾದರಿ ಆಗುತ್ತಾಳೆ..! ಆದ್ದರಿಂದ ಇವರ ಬಗ್ಗೆ, ಇವರು ನಡೆಸುತ್ತಿರೋ ಆದರ್ಶ ಜೀವನದ ಬಗ್ಗೆ, ಚಿಕ್ಕ ವಯಸ್ಸಲ್ಲೇ ಇವರು ಹೊತ್ತಿರೋ ದೊಡ್ಡ ಹೊಣೆಗಾರಿಕೆ ಬಗ್ಗೆ ನಾನು ನಿಮಗೆ ಹೇಳ್ತೀನಿ..!
ಆಕೆ ಹೆಸರು ಸನಾ ಖಾನ್” ಇವರ ಸಾಧನೆ, ಇವರ ಬದುಕು ನೊಂದವರಿಗೆ ಮಾದರಿಯಾಗಿ, ನೊಂದವರು ಹೊಸ ಬದುಕನ್ನು ಕಟ್ಟಿಕೊಳ್ಳಲು ಸ್ಪೂರ್ತಿಯಾದ್ರೆ ಅಷ್ಟ ಸಾಕು ಅಲ್ವೇನ್ರೀ?
ನೀವು ಈ ಮೇಲಿನ ಚಿತ್ರದಲ್ಲಿ ನೋಡ್ತಾ ಇರೋ ಹುಡುಗಿಯ ಮುಖದ ನಗುವಿನ ಹಿಂದೆ ಅವರು ಹೇಳಿಕೊಳ್ಳಲಾಗದ ನೋವೂ ಇದೆ..! ಚಿಕ್ಕಂದಿನಲ್ಲಿರುವಾಗಲೇ ಇವರ ತಂದೆ ತೀರಿಕೊಳ್ತಾರೆ..! ಆಗ, ಮನೆಯಲ್ಲಿ ಹಿರಿಯ ಮಗಳಾದ ಇವರ ಹೆಗಲಿಗೆ ಇಡೀ ಕುಟುಂಬದ ಭಾರ ಬೀಳುತ್ತೆ..!
ಆರ್ಥಿಕವಾಗಿ ದಿವಾಳಿ ಆಗಿದ್ದ ಕುಟುಂಬ ಇವರದ್ದು..! ಇವರ ಕಷ್ಟಕ್ಕೆ ಸ್ನೇಹಿತರಾಗಲೀ, ಅಥವಾ ಸಂಬಂಧಿಕರಾಗಲೀ ಬರಲೇ ಇಲ್ಲ..! ಹೀಗಿರುವಾಗ ಆ ಹುಡುಗಿ ಮನೆಬಿಟ್ಟು ಬರಲೇ ಬೇಕಾಗುತ್ತೆ..! ಮನೆಬಿಟ್ಟು ಹೊರಗಡೆ ಬಂದು ಕುಟುಂಬದ ಸದಸ್ಯರಿಗೆಲ್ಲಾ ಹೊಟ್ಟೆ ತುಂಬಿಸೋ ಜವಬ್ದಾರಿಯನ್ನು ಹೊತ್ತೇ ಬಿಡುತ್ತಾರೆ..! ದುಡಿಯುವ ನಿರ್ಧಾರ ಕೈಗೊಂಡ ಆಕೆಗೆ ಫ್ರೀಲ್ಯಾನ್ಸ್ ರೈಟರ್ ಅಥವಾ ಹವ್ಯಾಸಿ ಬರಹಗಾರ್ತಿ ಕೆಲಸ ಸಿಗುತ್ತೆ..! ನಂತರ ಇವರು ಫೋಟೋಗ್ರಾಫರ್ ಆಗುತ್ತಾರೆ..! ಅದರಲ್ಲೂ ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿನ ಫೋಟೋ ತೆಗೆಯುವ ಕೆಲಸವನ್ನು ಮಾಡುತ್ತಾ ಹಣಗಳಿಸುತ್ತಾರೆ..! ಹೀಗೆ ಬದುಕಿಗಾಗಿ ಆಯ್ಕೆ ಮಾಡಿಕೊಂಡ ಫೋಟೋಗ್ರಫಿ ಇವತ್ತು ಅವರ ಫ್ಯಾಷನ್ ಆಗಿಬಿಟ್ಟಿದೆ..!
ಕಳೆದ ಎರಡು ವರ್ಷದಿಂದ ಇವತ್ತಿನವರೆಗೂ ಮದುವೆ ಫೋಟೋಗ್ರಾಫರ್ ಆಗಿ ದುಡಿಯುತ್ತಲೇ ಬಂದಿದ್ದಾರಂತೆ..! ಇದರಿಂದಾಗಿ ತನ್ನನ್ನು ಮತ್ತು ತನ್ನ 4 ಜನರ ಕುಟಂಬವನ್ನೂ ಹೊರಲು ಸಮರ್ಥರಾಗಿಬಿಟ್ಟಿದ್ದಾರೆ..!
ಅವತ್ತು ಕಷ್ಟದಲ್ಲಿರುವಾಗ ಆರಂಭದಲ್ಲಿ, ಇವರನ್ನು ಗುರುತಿಸಿ ಹಣ ಸಹಾಯ ಮಾಡಿದ ಸಂಬಂಧಿಕರು ತುಂಬಾ ಕಡಿಮೆ..! ಆದರೆ ಸಹಾಯ ಮಾಡಿದ ಬೆರಳೆಣಿಕೆಯಷ್ಟು ಸಂಬಂಧಿಕರಿಗೆ ಸನಾ ಖಾನ್ ಋಣಿ ಆಗಿರುತ್ತೇನೆಂದು ಇವರು ಹೇಳ್ತಾರೆ..! ಇವತ್ತು ದುಡಿಯುತ್ತಿದ್ದಾರೆ, ಇವರನ್ನು ನಮ್ಮ ಸ್ನೇಹಿತೆ, ನಮ್ಮ ಸಂಬಂಧಿ ಅಂತ ಜನ ಬೇರೆಯವರಿಗೆ ಪರಿಚಯ ಮಾಡಿಕೊಡ್ತಾ ಇದ್ದಾರೆ..! ನಮ್ಮವಳೆಂದು ಹೆಮ್ಮೆಯಿಂದ ಇವರನ್ನು ಕರೆಯುತ್ತಾರೆ..!
ಫ್ರೆಂಡ್ಸ್, ನೋಡಿದ್ರಲ್ಲಾ ಜೀವನದಲ್ಲಿ ಯಾವಗ ಬೇಕಾದ್ರೂ ಸವಾಲುಗಳು, ಸಮಸ್ಯೆಗಳು ಬರಬಹುದು..! ಸವಾಲಗಳನ್ನು ಮೆಟ್ಟಿನಿಂತು ಬದುಕುವುದೇ ಜೀವನ..! ಅವತ್ತು ತಂದೆ ಅಗಲಿದಾಗ ಇಡೀ ಕುಟುಂಬದ ನಿರ್ವಹಣೆಯ ಹೊಣೆ ಹೊತ್ತು ಫೋಟೋಗ್ರಾಫರ್ ಆದ ಈ ಸನಾ ಖಾನ್ ರನ್ನುಮೆಚ್ಚಿ, ಶಹಬ್ಬಾಸ್ ಅನ್ನಲೇ ಬೇಕಲ್ಲವೇ..?! ನೀವೆನಂತೀರಾ ಈಕೆ ಬಗ್ಗೆ…?
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
1 ರೂಪಾಯಿ ನೋಟಿನ ಬೆಲೆ 99 ರೂಪಾಯಿ..! ಆನ್ ಲೈನ್ ತಾಣದಲ್ಲಿ ಮಾರಾಟಕ್ಕಿದೆ ನೋಟು
ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!
ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!
ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!
ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!
ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!
ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….