ವಿಶ್ವೇಶ್ವರ ಭಟ್ ಈಗ ವಿಶ್ವಾಕ್ಷರ ಭಟ್…! ಕನ್ನಡಕ್ಕೆ ಮತ್ತೊಂದು ದಿನಪತ್ರಿಕೆ ಹಾಗೂ ನ್ಯೂಸ್ ಚ್ಯಾನಲ್..!

0
105

ಕನ್ನಡ ಪತ್ರಿಕೋದ್ಯಮ ಅಂದ ತಕ್ಷಣ ಕಣ್ಣೆದುರು ಕೆಲವರು ಹಂಗೇ ಪಾಸ್ ಆಗ್ತಾರೆ. ಅದರಲ್ಲಿ ಪ್ರಮುಖರು ವಿಶ್ವೇಶ್ವರ ಭಟ್..! ಕರ್ನಾಟಕದಲ್ಲಿ ದಿನಪತ್ರಿಕೆ ಓದೋದನ್ನು ಚಟವಾಗಿಸಿದ್ದು ಇವರೇ ಅಂದ್ರೆ ಅತಿಶಯೋಕ್ತಿಯಲ್ಲ..! ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ ಅವರು ಮಾಡಿದ ಮ್ಯಾಜಿಕ್ ಅದ್ಭುತ. ವಿಜಯ ಕರ್ನಾಟಕವನ್ನು ಭಾರತದ ನಂಬರ್ ವನ್ ಕನ್ನಡ ದಿನಪತ್ರಿಕೆಯಾಗಿಸಿ ಪತ್ರಿಕೆ ಅಂದ್ರೆ ಹೀಗಿರಬೇಕು, ಪತ್ರಕರ್ತರು ಅಂದ್ರೆ ಹೀಗಿರಬೇಕು ಅಂತ ತೋರಿಸಿಕೊಟ್ಟವರು ಇದೇ ವಿಶ್ವೇಶ್ವರ ಭಟ್ಟರು..! ವಿಜಯ ಕರ್ನಾಟಕ ಬಿಟ್ಟು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಸಂಪಾದಕರಾಗಿಯೂ ಸೈ ಎನಿಸಿಕೊಂಡ ವಿಶ್ವೇಶ್ವರ ಭಟ್ಟರು ಕಾರಣಾಂತರಗಳಿಂದ ಅಲ್ಲಿಂದ ಹೊರ ಬಂದ್ರು..! ಆದ್ರೆ ಭಟ್ರು ಸುಮ್ಮನೆ ಕೂರೋರಲ್ವಲ್ಲಾ ಅಂತ ಯೋಚಿಸ್ತಾ ಇದ್ದವರಿಗೆ ಈಗ ಉತ್ತರ ರೆಡಿಯಾಗಿದೆ… ವಿಶ್ವೇಶ್ವರ ಭಟ್ಟರು ಈಗ ವಿಶ್ವಾಕ್ಷರ ಭಟ್ಟರಾಗಿದ್ದಾರೆ…!
ಅರೆರೆ..! ಏನಿದು ವಿಶ್ವಾಕ್ಷರ ಭಟ್ರು ಅಂತ ಹೆಸರು ಬದಲಾಯಿಸಿಕೊಂಡು ಬಿಟ್ರಾ ಅಂತೆಲ್ಲಾ ಯೋಚ್ನೆ ಮಾಡ್ಬೇಡಿ. ಅವರೀಗ `ವಿಶ್ವಾಕ್ಷರ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ಅಡಿಯಲ್ಲಿ ಕನ್ನಡಕ್ಕೆ ಹೊಸ ದಿನಪತ್ರಿಕೆ ಹಾಗೂ ನ್ಯೂಸ್ ಚಾನಲ್ ಕೊಡಲು ಸಿದ್ಧರಾಗಿದ್ದಾರೆ..! ಪತ್ರಿಕೆಗೆ ಈಗಾಗಲೇ `ವಿಶ್ವವಾಣಿ’ ಅಂತ ಹೆಸರನ್ನೂ ಫಿಕ್ಸ್ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ `ವಿಭಿನ್ನ’ ಪತ್ರಿಕೆ ಕನ್ನಡಿಗರ ಕೈ ಸೇರಲಿದೆ. ಅದಾದ ಮೇಲೆ ಕನ್ನಡ ನ್ಯೂಸ್ ವಾಹಿನಿಯ ಕೆಲಸವೂ ಆರಂಭವಾಗಲಿದೆ. ಒಟ್ಟಾರೆ ವಿಶ್ವೇಶ್ವರ ಭಟ್ಟರ ಸ್ಟೈಲಿನ ಪತ್ರಿಕೆ ಹಾಗೂ ನ್ಯೂಸ್ ಚ್ಯಾನಲ್ ಕನ್ನಡಿಗರಿಗೆ ಸುದ್ದಿಯ ಗುದ್ದು ನೀಡೋಕೆ ರೆಡಿಯಾಗಿದೆ.
ಪ್ರತಿ ಹಂತದಲ್ಲೂ ವಿಭಿನ್ನ ಸ್ಟೈಲ್ ಹಾಗೂ ಸುದ್ದಿ ನಿರೂಪಣೆಯಿಂದ ಸದ್ದು ಮಾಡಿದ ಸಂಪಾದಕ ವಿಶ್ವೇಶ್ವರ ಭಟ್ಟರು ವಿಶ್ವಾಕ್ಷರದ ವಿಚಾರದಲ್ಲೂ ತಮ್ಮ `ವಿಭಿನ್ನತೆ’ ಮುಂದುವರೆಸಿದ್ದಾರೆ..! ವಿಶ್ವವಾಣಿಗೆ ಈಗಾಗಲೇ ಪತ್ರಕರ್ತರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಆದ್ರೆ ಪತ್ರಕರ್ತರು, ಫೋಟೋಗ್ರಾಫರ್ಸ್, ಕಾರ್ಟೂನಿಸ್ಟ್ ಗಳನ್ನು ಕೆಲಸಕ್ಕೆ ಆಹ್ವಾನಿಸುವ ಪೋಸ್ಟರ್ ಗಳಲ್ಲಿದ್ದ ಕ್ರಿಯೇಟಿವಿಟಿಯೇ `ವಿಶ್ವವಾಣಿ’ ಅದೆಷ್ಟು ಕ್ರಿಯಾಶಿಲತೆಯಿಂದ ಕೂಡಿರುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿತ್ತು..! ಈಗಾಗಲೇ ವಿಶ್ವಾಕ್ಷರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬಸವರಾಜ್ ಡಿ.ಬಿ ತಂಡ ಸೇರಿಕೊಂಡಿದ್ದಾರೆ.
ಈಗ ಸದ್ಯಕ್ಕೆ ಬಿಸಿಬಿಸಿ ವಿಷಯ ಅಂದ್ರೆ ವಿಶ್ವಾಕ್ಷರದ ಲಾಂಛನ ಲಾಂಚ್ ಆಗಿರೋದು..! ಕಲರ್ ಫುಲ್ ಲೋಗೋದ ಬಗ್ಗೆ ವಿಶ್ವೇಶ್ವರ ಭಟ್ಟರು ವಿವರಣೆ ನೀಡೋದು ಹೀಗೆ..

ಲಾಂಛನ- ಇದೂ ವಿಭಿನ್ನ

* ಇದು ವಿಶ್ವವಾಣಿ ಪತ್ರಿಕೆಯ ಮಾತೃ ಸಂಸ್ಥೆ ‘ವಿಶ್ವಾಕ್ಷರ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ನ ಲಾಂಛನ.

*ಸಂಸ್ಥೆ ನಿಂತ ನೀರಲ್ಲ, ಲಾಂಛನವೂ ಸಹ: ಚಲನಶೀಲತೆಯನ್ನು ಸಂಕೇತಿಸುತ್ತದೆ ಇದು.

* ಮೆಲ್ನೋಟಕ್ಕೆ ‘ಉ’ ಅಕ್ಷರದ ಅಪೂರ್ಣ ರೂಪದಂತೆ ಕಾಣುವ ಲಾಂಛನದಲ್ಲಿ ಪೂರ್ಣತೆಯತ್ತ ಸಾಗುವ ಪ್ರಯತ್ನದ ಬಿಂಬ ಗೋಚರ.

* ‘ವಿಶ್ವಾಕ್ಷರ’ ಎಂಬ ಹೆಸರಲ್ಲಿನ ‘V’ ಮತ್ತು ‘A’ -ಈ ಎರಡೂ ಅಕ್ಷರಗಳನ್ನು ಲಾಂಛನದಲ್ಲಿ ಒಳಗೊಳಿಸಿಕೊಳ್ಳಲಾಗಿದೆ.

* ಓಂಕಾರದಲ್ಲಿ ಅ, ಒ, ಮ್ ಇದೆ. ಇದು ನಮ್ಮ ವೈಜ್ಞಾನಿಕವಾಗಿ ಹಾಗೂ ಭಾರತೀಯ ನಂಬಿಕೆಯ ಪ್ರಕಾರ ಜೀವಂತಿಕೆಗೆ ಸಾಕ್ಷಿ. ಈ ಮೂರೂ ಅಕ್ಷರಗಳ ಸಂಯುಕ್ತ ಸ್ವರೂಪವನ್ನು ಒಳಗೊಂಡಿದೆ ನಮ್ಮ ಲಾಂಛನ.

* ಬಣ್ಣಗಳು ರಂಗಿಗಷ್ಟೇ ಅಲ್ಲ, ಒಂದೊಂದಕ್ಕೂ ಒಂದೊಂದು ಅರ್ಥವನ್ನು ಕಲ್ಪಿಸಲಾಗಿದೆ. ಎಲ್ಲ ಬಣ್ಣಗಳನ್ನ ಒಂದೇ ಚಿತ್ರ ಹಿಡಿದಿಟ್ಟಿರುವುದು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ.

* ಆರಂಭದ ಕೇಸರಿ ತ್ಯಾಗದ ಪ್ರತೀಕ, ಹಳದಿ ಐಶ್ವರ್ಯವನ್ನೂ ಹಸಿರು ಸಮೃದ್ಧತೆಯನ್ನೂ ಸೂಚಿಸುತ್ತದೆ. ನಂತರದ ನೀಲಿ ವೈಶಾಲ್ಯವನ್ನು ಪ್ರತಿಫಲಿಸುತ್ತದೆ.

*ಲಾಂಛನದಲ್ಲಿನ ದಳ ಅಥವಾ ಹೂವಿನ ಪಕಳೆಗಳ ಮಾದರಿ, ವಿನ್ಯಾಸದ ದೃಷ್ಟಿಯಿಂದ ಮಾತ್ರ ರೂಪುಗೊಂಡದ್ದಲ್ಲ. ಅದು ಶ್ರದ್ಧೆ ಮತ್ತು ಸಮರ್ಪಣೆಯ ದ್ಯೋತಕ.
ಒಟ್ಟಾರೆ ಸಂಸ್ಥೆಯ ಆದರ್ಶ ಮತ್ತು ಧ್ಯೇಯೋದ್ದೇಶಗಳನ್ನು ನಮ್ಮ ಲಾಂಛನ ಸಾರುತ್ತಿದೆ…

ಇದು ವಿಶ್ವಾಕ್ಷರದ ಲೋಗೋ ಹಿಂದಿನ ಸ್ಟೋರಿ..! ವಿಶ್ವೇಶ್ವರ ಭಟ್ಟರನ್ನು ಕರ್ನಾಟಕದ ಜನ ತುಂಬಾ ದಿನದಿಂದ ಮಿಸ್ ಮಾಡಿಕೊಳ್ತಿದ್ದಾರೆ. ಆದಷ್ಟು ಬೇಗನೆ ಅವರ ಪತ್ರಿಕೆ ಹಾಗೂ ನ್ಯೂಸ್ ಚ್ಯಾನಲ್ ಮಿಕ್ಕೆಲ್ಲಾ ಮೀಡಿಯಾಗಳಿಗಿಂತ `ವಿಭಿನ್ನ’ ವಾಗಿ ಬರಲಿ..! ವಿಶ್ವಾಕ್ಷರಕ್ಕೆ ಆಲ್ ದಿ ಬೆಸ್ಟ್..!
ನಿಮಗೆ ವಿಶ್ವವಾಣಿಯ ಬಗ್ಗೆ ಅಪ್ ಡೇಟ್ ಬೇಕು ಅಂದ್ರೆ ಈ ಫೇಸ್ ಬುಕ್ ಪೇಜ್ ಲೈಕ್ ಮಾಡಿ.. Vishwavani

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

1 ರೂಪಾಯಿ ನೋಟಿನ ಬೆಲೆ 99 ರೂಪಾಯಿ..! ಆನ್ ಲೈನ್ ತಾಣದಲ್ಲಿ ಮಾರಾಟಕ್ಕಿದೆ ನೋಟು

ಬೆಂಗಳೂರಿನ ಜನ ಮಲ್ಟಿಪ್ಲೆಕ್ಸ್ ಗಳಲ್ಲಿ ಬಕ್ರಾ ಆಗ್ತಿದೀರಿ..! ಯಾಕ್ರೀ ಮಾಮೂಲಿಗಿಂತ ಜಾಸ್ತಿ ದುಡ್ಡು ಕೊಡಬೇಕು…? – ಕಿರಿಕ್ ಕೀರ್ತಿ ಪ್ರಶ್ನೆ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

 

LEAVE A REPLY

Please enter your comment!
Please enter your name here