ಸಂಚಾರಿ ವಿಜಯ್ ಜೊತೆ ವಿಶೇಷ ಸಂದರ್ಶನ..

Date:

ನಾನು ಅವನಲ್ಲ ಅವಳು ಎಂದಾಕ್ಷಣ ನೆನಪಿಗೆ ಬರೋ ಹೆಸ್ರು ಸಂಚಾರಿ ಅಂದ್ರೆ ಅವರೆ ವಿಜಯ್. ಮಂಗಳಮುಖಿ ಪಾತ್ರದಲ್ಲಿ ಅದ್ಬುತವಾಗಿ ನಟಿಸಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪ್ರತಿಭೆ. ನಟಿಸಿರುವುದು ಕೆಲವೇ ಚಿತ್ರಗಳಾದ್ರು ಸಹ ಪ್ರತಿಯೊಂದು ಚಿತ್ರದಲ್ಲೂ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ತನ್ನ ಪಾತ್ರಕ್ಕೆ ಜೀವ ನೀಡುವ ನಟ ಅಂದ್ರೆ ಸಂಚಾರಿ ವಿಜಯ್ ಎಂದ್ರೆ ತಪ್ಪಾಗಲಾರದು. ನಾನು ಅವನಲ್ಲ ಅವಳು ಚಿತ್ರ ಯಶಸ್ಸು ಕಾಣ್ತು ಇದಾದ ನಂತ್ರ ಅಮೃತ್ ಕುಮಾರ್ ನಿರ್ದೇಶನದಲ್ಲಿ ರಿಲೀಸ್ ಆಗಿರುವಂತಹ ರಿಕ್ತ ಮೂವಿ ಸಕ್ಸಸ್‍ಫುಲ್ ರನ್ನಿಂಗ್ ಆಗ್ತಿದ್ದು ಈ ಚಿತ್ರದಲ್ಲಿ ವಿಜಯ್ ನಾಲ್ಕು ಡಿಫ್ರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಗುವಾಗಿ, ಲವರ್ ಬಾಯ್ ಆಗಿ, ಕುಡುಕನಾಗಿ, ದೆವ್ವವಾಗಿ ಕಾಣಿಸಿಕೊಂಡು ನಾಲ್ಕು ಪಾತ್ರಕೂ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಈ ಚಿತ್ರ ಒಂದು ಹಾರಾರ್ ಕಾಮಿಡಿಯಿಂದ ಕೂಡಿದೆ. ಸತ್ತ ಮೇಲೂ ಪ್ರೀತಿ ಬದುಕಿರುತ್ತೆ ಎನ್ನುವುದನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ, ಈ ಚಿತ್ರದಲ್ಲಿ ದೆವ್ವವಾಗಿಯೂ ತನ್ನ ಲವರ್‍ನ್ನು ಪ್ರೀತಿಸುವುದನ್ನು ತೋರಿಸಿದ್ದಾರೆ. ಒಂದೇ ಸಾಲಿನಲ್ಲಿ ಹೇಳುವುದಾದ್ರೆ ದೆವ್ವಕ್ಕೂ ಫೀಲಿಂಗ್ಸ್ ಇದೆ. ಅದೂ ಅಳುತ್ತದೆ, ನಗುತ್ತದೆ, ಅದಕ್ಕೂ ಆಸೆ, ಕನಸ್ಸುಗಳಿವೆ ಎನ್ನುವುದನ್ನು ನೋಡುಗರ ಹೃದಯಕ್ಕೆ ನೇರವಾಗಿ ತಲುಪಿಸುವ ಕೆಲಸವನ್ನು ರಿಕ್ತ ತಂಡ ಮಾಡಿದೆ. ರಿಕ್ತ ಚಿತ್ರದ ಕುರಿತು ನಾಯಕ ಸಂಚಾರಿ ವಿಜೆಯ್ ದಿ ನ್ಯೂ ಇಂಡಿಯನ್ ಟೈಮ್ಸ್ ಸಂದರ್ಶನದಲ್ಲಿ ಹಚ್ಚಿಕೊಂಡ ಮಾತುಗಳು..

ಈ ಸಿನಿಮಾದಲ್ಲಿ ಭೂತಗಳಿಗೂ ಫೀಲಿಂಗ್ಸ್ ಇದೆ ಅನ್ನೋದನ್ನ ತೋರಿಸಿದ್ದಾರೆ, ಇದ್ರ ಬಗ್ಗೆ ನಿಮಗೆ ಏನನ್ನುಸ್ತು.?

ದೆವ್ವ ಅನ್ನುವುದನ್ನು ಹೀಗೆ ತೋರಿಸಬೇಕು ಅಂತೇನೂ ಇಲ್ಲ. ಅದು ನಮ್ಮ ಕಲ್ಪನೆಗೆ ಬಿಟ್ಟಿದ್ದು. ನನ್ನ ಪ್ರಕಾರ ಇದೊಂದು ಸಂಪೂರ್ಣ ಹಾರಾರ್ ಚಿತ್ರ ಅಂಥಾನೂ ಹೇಳೋಕೆ ಆಗ್ತಿಲ್ಲ ಯಾಕೆಂದ್ರೆ ನಾರ್ಮಲ್ ಜೀವನದಲ್ಲಿ ಇದನ್ನು ಊಹಿಸಿಕೊಳ್ಳೊಕು ಸಾಧ್ಯವಿಲ್ಲ ಏಕೆಂದ್ರೆ ನಿರ್ದಿಷ್ಟ ರೂಪ ಇಲ್ಲ. ಈ ರಿಕ್ತ ಚಿತ್ರದಲ್ಲಿ ಹೊಸ ಪ್ರಯೋಗವನ್ನು ಮಾಡಿದ್ದೇವೆ. ಪ್ರಯೋಗ ಮಾಡವಾಗ ಅದ್ಭುತನೂ ಆಗಬಹುದು ಅನಾಹುತನೂ ಆಗ್ಬೋದು ಆದ್ರೆ ಪ್ರಯೋಗಗಳಿಗೆ ಸಾವಿಲ್ಲ.
ರಿಕ್ತ ಚಿತ್ರದ ಕಥೆಯ ಬಗ್ಗೆ ಹೇಳೋದಾದ್ರೆ..?

ಡೈರೆಕ್ಟರ್ ಮೊದ್ಲು ಹಾರಾರ್ ಚಿತ್ರ ಎಂದಾಕ್ಷಣ ದೆವ್ವ ಭಯಾನಕವಾಗಿರುತ್ತೆ, ರಿವೇಂಜ್ ಇರುತ್ತೆ, ಸಾಯಿಸುವುದು, ಸಸ್ಪೆನ್ಸ್ ಇರುತ್ತೆ ಈ ರೀತಿ ಕಲ್ಪನೆಗಳನ್ನ ಸೃಷ್ಠಿಸಿಕೊಂಡಿದ್ದೆ ಆದ್ರೆ ನನ್ನ ಕಲ್ಪನೆಗೆ ವಿರುದ್ದವಾಗಿ ವಿಭಿನ್ನವಾಗಿತ್ತು. ದೆವ್ವ ಕಾಮಿಕ್ ಆಗಿರ್ಬೇಕು, ಮಗುವಿನ ತರ ಇನೋಸೆನ್ಸ್ ಇರ್ಬೇಕು ಅಂಥ ಹೇಳಿದ್ರು ಆಗ ನನಗೆ ಶಾಕ್ ಆಯ್ತು ಜೊತೆಗೆ ಖುಷಿಯೂ ಆಯ್ತು. ಅಲ್ಲದೆ ಸತ್ತಮೇಲೂ ಪ್ರೀತಿಸಿದವಳನ್ನು ಇಷ್ಟಪಡುವುದು, ದೆವ್ವಕ್ಕೆ ಮನಸ್ಸಿರುತ್ತೆ, ಆಸೆ ಕನಸ್ಸುಗಳಿರುತ್ತೆ ಎನ್ನುವ ಡೈರೆಕ್ಟರ್ ಕಲ್ಪನೆ ಇಷ್ಟ ಆಯ್ತು ಆ ಕ್ಷಣನೆ ಚಿತ್ರವನ್ನು ಒಪ್ಪಿಕೊಂಡೆ.

ನಾಲ್ಕು ಪಾತ್ರದಲ್ಲಿ ನಟಿಸಿದ್ದೀರಿ..! ಹೇಗೆ ಪ್ರತಿಯೊಂದಕ್ಕು ಜೀವ ತುಂಬಿದ್ರಿ..?
ಈ ಚಿತ್ರ ನನಗೆ ಚಾಲೆಂಜಿಂಗ್ ಆಗಿತ್ತು ಏಕೆಂದ್ರೆ ಒಂದೇ ಕ್ಯಾರೆಕ್ಟರ್‍ನಲ್ಲಿ ಐದು ಪಾತ್ರವನ್ನು ಮಾಡೋದು ಸ್ವಲ್ಪ ಕಷ್ಟ ಅದ್ರಲ್ಲೂ ಮಗುವಿನ ರೀತಿ ನಟಿಸೋದು ಸ್ವಲ್ಪ ಕಷ್ಟ ಆಯ್ತು. ಡೈರೆಕ್ಟರ್, ಪ್ರಡ್ಯೂಸರ್ ತುಂಬ ಸಪೋರ್ಟ್ ಮಾಡಿದ್ರು ಅದ್ರಿಂದ ಅಷ್ಟು ಕಷ್ಟ ಅನ್ನಿಸಲಿಲ್ಲ. ಇದ್ರಲ್ಲಿ ದೆವ್ವ ವಿಕಾರವಾಗಿಲ್ಲ ಇಲ್ಲಿ ದೆವ್ವ ಕ್ಯೂಟ್ ಆಗಿ ಕಾಣಿಸಿಕೊಳ್ಳಬೇಕು ಅಂದ್ರು ಅದು ನನಗೆ ಇಷ್ಟ ಆಯ್ತು.

ನ್ಯಾಷನಲ್ ಆವಾರ್ಡ್ ಬಗ್ಗೆ ಏನ್ ಹೇಳೋಕ್ ಇಷ್ಟ ಪಡ್ತೀರಾ?


ನಾನವನಲ್ಲ ಅವಳು ಚಿತ್ರ ನನ್ನ ಜೀವನದ ದೊಡ್ಡ ತಿರುವು, ಅದರ ಕ್ರೇಡಿಟ್ ಲಿಂಗದೇವ್ರಿಗೆ ಸೇರಬೇಕು, ಅವ್ರು ನನಗೆ ಆ ಪಾತ್ರ ಕೊಟ್ಟಿದ್ದಕ್ಕೆ ನಾನ್ ಇವತ್ತು ನ್ಯಾಷನಲ್ ಆವಾರ್ಡ್ ಪಡೆದಿದ್ದು. ಆ ಚಿತ್ರದ ಅನುಭವ ಇದ್ದಿದ್ದು ನನಗೆ ರಿಕ್ತ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಯ್ತು.

ಮೂವಿಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ?
ಎಲ್ಲಾ ಕಡೆಯಿಂದಲೂ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ನಮ್ಮ ಶ್ರಮಕ್ಕೆ, ಕ್ರಿಯೇಟಿವಿಟಿಗೆ ಪ್ರತಿಫಲ ಸಿಕ್ಕೋದು ಪ್ರೇಕ್ಷಕರು ಥಿಯೇಟರ್‍ನತ್ತ ಬಂದಾಗ ಜನ್ರು ನಮ್ಮ ಕೈಹಿಡಿದು ನಮ್ಮ ಜೊತೆಗಿದ್ದಾರೆ ನನ್ನ ಹಿಂದಿನ ಸಿನಿಮಾವನ್ನು ಹೇಗೆ ಗೆಲ್ಲಿಸಿದ್ದಾರೋ ಹಾಗೆ ಈ ಚಿತ್ರವನ್ನು ಗೆಲ್ಲಿಸುತ್ತಾರೆ ಎನ್ನುವ ಭರವಸೆಯಲ್ಲಿದ್ದೇನೆ.
ಚಿತ್ರದಲ್ಲಿ ಪ್ಲಸ್ ಪಾಯಿಂಟ್ ಏನು? ಥಿಯೇಟರ್ ಗೆ ಪ್ರೇಕ್ಷಕರು ಏಕೆ ಹೋಗ್ಬೇಕು ಅಂತೀರಾ?
ಜನ್ರು ಹಣ ಕೊಟ್ಟು ಥಿಯೇಟರ್‍ಗೆ ಬರೋದು ಎಂಟರ್‍ಟೈನ್‍ಮೆಂಟ್‍ಗೊಸ್ಕರ. ನಾವು ಕೊಟ್ಟ ಹಣಕ್ಕೆ ಏನೂ ಮೋಸ ಇಲ್ಲಪ್ಪ ಅನ್ನುವಷ್ಟರ ಮಟ್ಟಿಗೆ ಮೂವಿ ಮೂಡಿಬಂದಿದೆ. ಪ್ರೇಕ್ಷಕರು ಬಯಸುವ ಕಾಮಿಡಿ, ಸಸ್ಪೆನ್ಸ್, ಹಾರಾರ್ ಫೀಲ್ ಸೇರಿದಂತೆ ಜನ್ರಿಗೆ ಬೇಕಾಗುವ ಎಲ್ಲಾ ಎಂಟರ್‍ಟೈನ್ಮೆಂಟ್ ಈ ಚಿತ್ರದಲ್ಲಿದೆ.

  • ಹಾಲೇಶ್ ಎಂ.ಎಸ್ ಹುಣಸನಹಳ್ಳಿ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕಂಬಳದ ಪರವಾಗಿ ಬೆಂಬಲಿಸ್ತೀರಾ..? ನಿಮ್ಮ ಅಭಿಪ್ರಾಯ ತಿಳಿಸಿ

ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!

ರಾತ್ರೋ ರಾತ್ರಿ ಎಲಿಮಿನೇಟ್ ಆದ್ರು ಶಾಲಿನಿ..!!

ಹಂಪಿ ಸನ್‍ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ

ಈ ಬಾರಿಯ ಬಿಗ್‍ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?

ಮಾಜಿ ಕ್ರಿಕೆಟಿಗ ವೀರು ಈಗ ಜಬರ್ದಸ್ತ್ ಸಿಂಗರ್

ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!

LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...