ಅಧಿಕಾರಿಗಳ ಮೇಲೆ ಅಟ್ಯಾಕ್ ಮಾಡಿದ ಶ್ರೀಗಂಧ ಕಳ್ಳರು

admin
1 Min Read

ನಾಗಮಂಗಲದ H.N.ಕಾವಲ್ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕಳ್ಳರ ಮೇಲೆ ಅರಣ್ಯಾಧಿಕಾರಿಗಳು ಶೂಟೌಟ್ ನಡೆಸಿದ್ದಾರೆ. ಹೆಚ್.ಎನ್.ಕಾವಲ್ ಅರಣ್ಯ ಪ್ರದೇಶದಲ್ಲಿ ಖದೀಮರು ಶ್ರೀಗಂಧದ ಮರ ಕಡಿಯುವಾಗ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದು, ಮಾತು ಕೇಳದ ಶ್ರೀಗಂಧ ಕಳ್ಳರು ಅರಣ್ಯಾಧಿಕಾರಿಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ.

ಈ ವೇಳೆ ಅರಣ್ಯಾಧಿಕಾರಿಗಳು ಶೂಟೌಟ್ ನಡೆಸಿದ್ದು, ಗುಂಡೇಟು ತಗುಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಹಾಸನ ಜಿಲ್ಲೆಯ ಗೆಂಡೆಹಳ್ಳಿಯ ಗೋವಿಂದಪ್ಪ ಸ್ಥಿತಿ ಗಂಭೀರವಾಗಿದ್ದು, ಫಾರೆಸ್ಟ್ ಗಾರ್ಡ್ ಸಾಕಯ್ಯ ಮೇಲೆ ಶ್ರೀಗಂಧ ಕಳ್ಳರು ಹಲ್ಲೆ ನಡೆಸಿದ್ದಾರೆ. ಇನ್ನ ಶಂಕರ, ಕುಮಾರ್ ಎಂಬುವರನ್ನ ಬಂಧಿಸಲಾಗಿದ್ದು, ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಾಳುಗಳಿಗೆ ನಾಗಮಂಗಲದ ಎ.ಸಿ.ಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

Share This Article
Leave a Comment