ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?

Date:

ಬಿಗ್‍ಬಾಸ್ ಮನೇಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರೋ ಒಳ್ಳೆ ಹುಡುಗ ಪ್ರಥಮ್‍ನ ಹೊಸ ಆಟ ಈಗ ಶುರುವಾಗಿದೆ..! ಬಿಗ್‍ಬಾಸ್ ಮನೇಲಿ ಭುವನ್ ಹಾಗೂ ಸಂಜನಾ ನಡುವಿನ ಪ್ರೇಮ ಪ್ರಣಯದ ವಿಷಯ ಅಲ್ಲಿನ ಸ್ಪರ್ಧಾಳಿಗೆ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ಗೊತ್ತು. ಹೀಗಿರುವಾಗ ಪ್ರಥಮ್ ಅವರಿಬ್ಬರ ನಡುವೆ ಎಂಟ್ರಿ ಕೊಟ್ಟಿದ್ದಾರೆ..! ಸಂಜನಾ ಹಿಂದೆ ಬಿದ್ದಿರುವ ಪ್ರಥಮ್ ಸಂಜನಾಳಿಗೆ ನೇರವಾಗಿ ಐ ಲವ್ ಯು ಅಂತ ಪ್ರಪೋಸ್ ಮಾಡಿದ್ದಾನೆ. ಇದಕ್ಕೆ ಸಂಜನಾ ನಾಚುತ್ತಲೇ ತಮಾಷೆಯಾಗಿ ತೆಗೆದುಕೊಂಡಿದ್ದಾಳೆ. ಕಳೆದ ವಾರ ದಂಡನಾಯಕ ಟಾಸ್ಕ್ ನಲ್ಲಿ ಪ್ರಥಮ್ ಭುವನ್ ಬಳಿ ಸಂಜನಾಳಿಗೆ ತಂಗಿ ಎಂದೆ ನೀನು ಕರೆಯಬೇಕು ಎಂದು ಆದೇಶ ನೀಡಿದ್ದರು. ಅಷ್ಟೇ ಅಲ್ಲ ತಾನು ಈ ಮನೇಲಿ ಇರೋವರೆಗೂ ಭುವನ್ ಹಾಗೂ ಸಂಜನಾ ಒಟ್ಟಿಗೆ ಇರೋಕೆ ಬಿಡೋದಿಲ್ಲ ಅಂತಾನೂ ಹೇಳಿದ್ರು. ಅದರಂತೆ ಈಗ ಪ್ರಥಮ್ ಅವ್ರು ಸಂಜನಾಗೆ ನಾನು ಸೀರಿಯಸ್ಸಾಗೆ ಪ್ರಪೋಸ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಬಿಗ್‍ಬಾಸ್ ಮನೆಯ ಈ ವಾರದ ಕ್ಯಾಪ್ಟನ್ ಆಯ್ಕೆಗಾಗಿ ನೀಡಿದ್ದ ಟಾಸ್ಕ್ ನಲ್ಲಿ ಸೋತಿದ್ದ ಸಂಜನಾ ಬಳಿ ನಾನು ನಿನ್ನನ್ನು ಲವ್ ಮಾಡ್ತಾ ಇದೀನಿ. ನಿನಗಾಗಿ ಏನು ಬೇಕಾದ್ರೂ ಮಾಡೋಕೆ ಸಿದ್ದ ಎಂದು ತನ್ನ ಪ್ರೇಮ ನಿವೇದನೆಯನ್ನ ತೋಡಿಕೊಂಡಿದ್ದಾನೆ. ಇದಕ್ಕೆ ಮರು ಉತ್ತರ ನೀಡಿದ ಸಂಜನಾ ಬಿಗ್‍ಬಾಸ್ ಮನೆಯ ಬಾಗಿಲು ತೆಗೆದು ಹೊರಗೋಗ್ತಿಯಾ..? ಅಂತ ನಗುತ್ತಲೆ ಟಾಂಗ್ ಕೊಟ್ಟಿದ್ದಾಳೆ..! ಅಷ್ಟೇ ಅಲ್ಲ ಪ್ರಥಮ್‍ನ ಪ್ರಪೋಸ್‍ಗೆ ಸೊಪ್ಪೂ ಹಾಕ್ಲಿಲ್ಲ ಸಂಜನಾ.

ಅಷ್ಟಕ್ಕೆ ಪ್ರಥಮ್‍ನ ಆಟ ನಿಂತಿಲ್ಲ ಸ್ವಾಮಿ ಒಂದೆ ಮನೇಲಿ ಎರಡು ಹಕ್ಕಿಗಳಿಗೆ ಕಲ್ಲು ಹೊಡಿಯೋ ಪ್ರಯತ್ನ ಮಾಡ್ತಾ ಇದಾರೆ ನೋಡಿ..! ಬಿಗ್‍ಬಾಸ್ ಮನೆಯ ಹೊಸ ಅಥಿತಿಯಾಗಿರುವ ಸುಕೃತಾ ಹಾಗೂ ಸಂಜನಾಳಿಗೆ ಲೈನ್ ಹಾಕೋದ್ರಲ್ಲಿ ಬ್ಯುಸಿಯಾಗಿರೋ ಪ್ರಥಮ್ ಇಬ್ರಿಗೂ ಚಿನ್ನ ಡಿಯರ್ ಅಂತ ನೈಸ್ ಮಾಡೋಕೆ ಹೊರ್ಟಿದ್ದಾನೆ. ಒಂದ್ಕಡೆ ಸಂಜನಾಳಿಗೆ ಬಿಡದೇ ಪ್ರಪೋಸ್ ಮಾಡ್ತಾ ಇದ್ರೆ ಇನೊಂದ್ಕಡೆ ಸುಕೃತಾಗೆ ಕೈ ಹೊತ್ತಿ ಡ್ಯಾನ್ಸ್ ಮಾಡಿ ಅಂತ ಗೋಗರೆಯುತ್ತಿದ್ದಾನೆ..! ಆದ್ರೆ ಇಬ್ಬರೂ ಈತನ ಅಪ್ಲಿಕೇಷನ್ ಅಕ್ಸೆಪ್ಟ್ ಮಾಡೋಕೆ ತಯಾರಿಲ್ಲ ಅನ್ನೋದೆ ದುರಂತ..!

https://www.youtube.com/watch?v=Bm_Gf09eiMY

Like us on Facebook  The New India Times

POPULAR  STORIES :

ಸಿಎಂ ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು..?

ಎಚ್ಚರ ಗ್ರಾಹಕರೇ..! ಜಸ್ಟ್ 6 ಸೆಂಕೆಂಡ್‍ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗುತ್ತೆ..!!

ಬಿಗ್‍ಬಾಸ್‍ನ ಹೊಸ ಕಂಟೆಸ್ಟೆಂಟ್ ಮಸ್ತಾನ್ ಭಾಯ್ ಯಾರು ಗೊತ್ತಾ..?

ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?

ರಸ್ತೆ ಮೇಲೆ 2 ಸಾವಿರದ ಹೊಸ ನೋಟು ಬಿದ್ದಿದ್ರೆ ನೀವೇನ್ ಮಾಡ್ತಿರಾ..?

Share post:

Subscribe

spot_imgspot_img

Popular

More like this
Related

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...