ಕ್ರಿಸ್ಮಸ್ ಸಂಭ್ರಮವನ್ನು ಹೆಚ್ಚಿಸುವ ಸಾಂಟಾ ಕ್ಲಾಸ್ ಪಾತ್ರಧಾರಿಯ ದಿನಚರಿಯು ಆತನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಎಂದು ಲಂಡನ್ ನ ರಾಯಲ್ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಷನರ್ಸ್‍ನ ವೈದ್ಯರು ತಿಳಿಸಿದ್ದಾರೆ.
ಸಾಂಟಾ ಕ್ಲಾಸ್ ವೇಷಧಾರಿ ತುಂಬಾ ಮದ್ಯಪಾನ ಮಾಡೋದ್ರಿಂದ, ಪ್ರತಿಮನೆಯಲ್ಲೂ ಸಿಹಿ ತಿಂಡಿ, ಮಾಂಸ ಸೇವನೆ ಮಾಡೋದ್ರಿಂದ ದೇಹದ ತೂಕ ಹೆಚ್ಚುತ್ತೆ…! ಬೊಜ್ಜು ಹೆಚ್ಚಾಗುತ್ತೆ, ಸಕ್ಕರೆ ಕಾಯಿಲೆ, ಬಿಪಿ, ಕ್ಯಾನ್ಸರ್ ನಂತರ ಕಾಯಿಲೆಗಳಿಗೆ ತುತ್ತಾಗೋ ಅಪಾಯ ಇರುತ್ತೆ…! ಕಪ್ಪು ಬೂಟು ಧರಿಸಿ ದೂರ ಪ್ರಯಾಣ ಮಾಡೋದ್ರಿಂದ ರಕ್ತನಾಳಗಳಿಗೆ ತೊಂದರೆ ಆಗೋ ಸಾಧ್ಯತೆ ಇದೆ. ಆದ್ರೆ, ತುಂಬಾ ಚಟುವಟಿಕೆಯಿಂದ ಇರೋದ್ರಿಂದ ಈ ಸಮಸ್ಯೆ ಸ್ವಲ್ಪ ಕಡಿಮೆ ಆಗ್ಬಹುದು ಅಂತ ವೈದ್ಯರು ಹೇಳಿದ್ದಾರೆ.