ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‍ಸಿಎ) ಆಯೋಜಿಸಿದ್ದ ಕ್ಲಬ್ ಕ್ರಿಕೆಟ್ ಟಿ20 ಪಂದ್ಯದಲ್ಲಿ ಸೋಮವಾರ ನಡೆದ ಪಂದ್ಯವೊಂದು ಅಚ್ಚರಿಗೆ ಗೆಲುವಿಗೆ ಕಾರಣವಾಯ್ತು. ಈ ಪಂದ್ಯದಲ್ಲಿ ಸ್ಪಿನ್ನರ್ ಓರ್ವ ಒಂದು ರನ್ನೂ ಕೂಡ ನೀಡದೆ ಆರು ವಿಕೆಟ್ ಪಡೆದು ಹೊಸ ದಾಖಲೆ ನಿರ್ಮಿಸಿದ್ದಾನೆ. ನಗರದ ಯಂಗ್ ಪಯೋನೀರ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದಿದ್ದ ಸ್ಪಿನ್ನರ್ ಸರ್ಫರಾಜ್ ಅಶ್ರಫ್, ತಾನು ಮಾಡಿದ ಮೂರು ಓವರ್‍ಗಳಲ್ಲಿ ಒಂದೇ ಒಂದು ರನ್ ನೀಡದೆ ಆರು ವಿಕೆಟ್ ಪಡೆದು ಹೊಸ ದಾಖಲೆ ನಿರ್ಮಿಸಿದ್ದಾನೆ. ಅಶ್ರಫ್ ತಾನು ಮಾಡಿದ ಮೂರು ಓವರ್‍ನಲ್ಲಿ ಮೂರು ಮೆಡಿನ್ ಅಲ್ಲದೆ ಆರು ವಿಕೆಟ್ ಪಡೆದು ತಂಡ ಜಯಭೇರಿಯಾಗಲು ಕಾರಣನಾಗಿದ್ದಾನೆ. ಅಶ್ರಫ್‍ನ ಮಾಂತ್ರಿಕ ಸ್ಪಿನ್‍ಗೆ ನಲುಗಿದ ಎದುರಾಳಿ ಮರ್ಕೆರಾ ಯೂತ್ ಸಿಸಿ ತಂಡ ಕೇವಲ 57 ರನ್‍ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನೊಪ್ಪಿಕೊಂಡಿತು. ಯಂಗ್ ಪೈನೀರ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 264 ರನ್ನುಗಳ ಬೃಹತ್ ಮೊತ್ತ ನೀಡಿದ್ರೆ , ಎದುರಾಳಿ ಮರ್ಕೆರಾ ಯೂತ್ಸ್ ತಂಡ 14.3 ಓವರ್‍ಗಳಲ್ಲಿ 57 ರನ್‍ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು ಆ ಮೂಲಕ ಯಂಗ್ ಪಯೋನೀರ್ ತಂಡ 207 ರನ್ನುಗಳ ಭರ್ಜರಿ ಜಯ ದಾಖಲಿಸಿಕೊಂಡಿತು. ಬ್ಯಾಟಿಂಗ್‍ನಲ್ಲಿ ಮಿಂಚಿದ ಸಫ್ರ್ರಾಜ್ ತಂಡಕ್ಕೆ 40 ರನ್‍ಗಳ ಕಾಣಿಕೆ ನೀಡಿದ್ರು.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?
ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!
ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!
ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!
ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್