ಮಾಜಿ ಗೃಹಸಚಿವರು, ಹಾಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೆ.ಜೆ ಜಾರ್ಜ್ ಅವರ ಕ್ಷೇತ್ರ ಸರ್ವಜ್ಞ ನಗರ. ರಾಜಧಾನಿಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಇಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ. ಪಕ್ಕದ ರಾಜ್ಯಗಳಿಂದ ಬಂದ ವಲಸಿಗರೇ ಇಲ್ಲಿ ಬಹುಸಂಖ್ಯಾತರು. ತಮಿಳು, ಉರ್ದು ಭಾಷೆ ಮಾತಾಡುವವರ ಸಂಖ್ಯೆಯೇ ಹೆಚ್ಚು.

ನಾಗವಾರ, ಎಚ್ ಬಿಆರ್ ಲೇಔಟ್, ಬಾಣಸವಾಡಿ, ಕಮ್ಮನಹಳ್ಳಿ ,ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ಲಿಂಗರಾಜಪುರ ಮತ್ತು ಮಾರುತಿ ಸೇವಾನಗರ ಈ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಗಳು.
ಈ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು ಈಗಿನ ಗೃಹಸಚಿವ ಕೆ.ಜೆ ಜಾರ್ಜ್.
ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ವಿವಾದ ಮೊದಲಾದ ವಿವಾದಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದವರು. ಒಮ್ಮೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮರಳಿ ಸಚಿವ ಸ್ಥಾನ ಅಲಂಕರಿಸಿದ ಕಾಂಗ್ರೆಸ್ ನ ಪ್ರಭಾವಿ ನಾಯಕರಲ್ಲೊಬ್ಬರು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಅಸ್ಥಿತ್ವಕ್ಕೆ ಬಂದ ಕ್ಷೇತ್ರ. ಆದರೆ ಸರ್ವಜ್ಞನಗರ ವಾರ್ಡ್ ಮಾತ್ರ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತೆ. ಈ ಕ್ಷೇತ್ರದ ಸಂಖ್ಯೆ 160.
ಇನ್ನು ಜಾರ್ಜ್ ಅವರು ತಮ್ಮ ಅಧಿಕಾರದ 10ವರ್ಷಗಳಲ್ಲಿ ಮಾಡಿದ್ದೇನೆಂದು ನೋಡುವುದಾದರೆ , ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಣ್ಣೂರು ಜಂಕ್ಷನ್ ಮೇಲ್ ಸೇತುವೆ ಕಾಮಗಾರಿ ಪೂರ್ಣ ಮಾಡಿರೋದು, ನಾಗವಾರ ಹೊರವರ್ತುಲ ರಸ್ತೆ ಮೊದಲಾದ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡಿಸಿರೋದು, ಬಾಣಸವಾಡಿ ಬುಲೆವಾರ್ಡ್ ಪಾರ್ಕ್, ಎಚ್ ಆರ್ ಬಿಆರ್ ಲೇಔಟ್ ನ ಬಂಡೆ ಪಾರ್ಕ್ ಅಭಿವೃದ್ಧಿ ಗಮನಿಸಬಹುದು.

ಆದರೆ ಈ ಕ್ಷೇತ್ರ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಟ್ರಾಫಿಕ್ ಕಿರಿಕಿರಿ , ಕುಡಿಯುವ ನೀರಿನ ಸಮಸ್ಸೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನ ಬೇಸತ್ತಿದ್ದಾರೆ.
ಲಿಂಗರಾಜಪುರ, ಕಾಡುಗೊಂಡನಹಳ್ಳಿ, ನಾಗವಾರ, ವೆಂಕಟೇಶ ನಗರಗಳಲ್ಲಂತೂ ಸಮಸ್ಯೆಗಳ ಆಗರವೇ ಇದೆ.
ಕ್ಷೇತ್ರದಲ್ಲಿ 1,69,651 ಪುರುಷ, 1,64,730ಮಹಿಳೆ, 39 ಇತರೆ ಮತಗಳು ಸೇರಿದಂತೆ ಒಟ್ಟು 3,34, 420 ಮತದಾರರಿದ್ದಾರೆ.
ಕಳೆದ ವರ್ಷ (2013) ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಕೆ.ಜೆ ಜಾರ್ಜ್ 45, 488 ಮತ ಪಡೆದಿದ್ದರು. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಆರ್ ಶಂಕರ್ 22,880ಮತ ಪಡೆದಿದ್ದರು.
ಈ ಬಾರಿ ಬಿಜೆಪಿಯಿಂದ ಎಂ ಎನ್ ರೆಡ್ಡಿಯವರು ಸರ್ವಜ್ಞ ನಗರದಲ್ಲಿ ಜಾರ್ಜ್ ಎದುರಾಳಿಯಾಗಿ ಕಣಕ್ಕಿಳಿಯಲಿದ್ದಾರೆ.







