ದಿನದಿಂದ ದಿನಕ್ಕೆ ರಷ್ಯಾ ತನ್ನ ಮಿಲಿಟರಿ ವ್ಯವಸ್ಥೆಯನ್ನು ಇನ್ನಷ್ಟು ಬಲ ಪಡಿಸಿಕೊಳ್ಳುತ್ತಾ ಹೋಗ್ತಾ ಇದೆ.. ಅಮೇರಿಕಾದ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ವಿರೋಧದ ನಡುವೆಯೂ ರಷ್ಯಾ ತನ್ನ ಸೇನಾ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನ ತಯಾರು ಮಾಡುತ್ತಿದೆ.. ಈ ನಡೆಯಿಂದ ಎಲ್ಲಾ ರಾಷ್ಟ್ರಗಳು ರಷ್ಯಾ ಮೂರನೇ ಮಹಾಯುದ್ದಕ್ಕೆ ಪೂರ್ವ ತಯಾರಿ ಮಾಡಿಕೊಳ್ತಾ ಇದೆ ಎಂಬ ವಾದ ಮಂಡಿಸಿದ್ದರೆ ಅತ್ತ ಅಮೇರಿಕಾದ ನಿದ್ದೆಗೆಡಿಸಿದೆ. ಅಮೇರಿಕಾದೆದುರಿಗೆ ತನ್ನ ರಕ್ಷಣಾ ಸಾಮರ್ಥ್ಯ ಎಷ್ಟರ ಮಟ್ಟಿಗೆ ಶಕ್ತಿಶಾಲಿಯಾಗಿದೆ ಎಂದು ತೋರ್ಪಡಿಸುವ ನಿಟ್ಟಿನಲ್ಲಿ ಇದೀಗ ರಷ್ಯಾ ಅತ್ಯಾಧುನಿಕ ಕ್ಷಿಪಣಿಯೊಂದರ ಪರೀಕ್ಷೆ ನಡಿಸಿದೆ. ಈ ಒಂದು ಶಕ್ತಿಶಾಲಿ ಕ್ಷಿಪಣಿ ಮೂಲಕ ಇಡೀ ಫ್ರಾನ್ಸ್ ದೇಶವನ್ನೇ ಸರ್ವನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗ್ತಾ ಇದೆ. ಥರ್ಮೋನ್ಯೂಕ್ಲಿಯಾರ್ ಖಂಡಾಂತರ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿರುವ ರಷ್ಯಾ ಆ ಮೂಲಕ ಅಮೇರಿಕಾಗೆ ಪರೋಕ್ಷ ಸವಾಲು ಹಾಕಿದೆ. ಈ ನೂತನ ಖಂಡಾತರ ಕ್ಷಿಪಣಿಯನ್ನು ರಷ್ಯಾ ಸೇನೆ ಆರ್‍ಎಸ್-28 ಅಥವಾ ಸನಾತ್-2 ಎಂದು ನಾಮಕರಣ ಮಾಡಿದ್ದು, ವಿಶ್ವದ ದೊಡ್ಡಣ್ಣ ಅಮೇರಿಕಾ ಸೇರಿದಂತೆ ವಿಶ್ವದ ಯಾವೊಂದು ರಾಷ್ಟ್ರದಲ್ಲೂ ಇಂತಹ ಶಕ್ತಿಶಾಲಿ ಕ್ಷಿಪಣಿ ಇಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಕ್ಷಿಪಣಿ ಹೆಚ್ಚು ಪ್ರಭಾವಶಾಲಿಯಾಗಿದ್ದು, ಈ ಒಂದು ಕ್ಷಿಪಣಿ ಮುಖಾಂತರ ಇಡೀ ಫ್ರಾನ್ಸ್ ದೇಶವನ್ನೆ ಇಲ್ಲವಾಗಿಸುವ ಮಟ್ಟಿಗೆ ಪ್ರಭಾವಶಾಲಿಯಾಗಿದೆ.
ಈ ಬೃಹತ್ ಕ್ಷಿಪಣಿಯ ಮೂಲಕ ಒಂದೇ ಬಾರಿಗೆ ಒಟ್ಟು 10 ಪರಮಾಣು ಬಾಂಬ್ ಹೊತ್ತೊಯ್ಯುವ ಸಾಮಥ್ರ್ಯವನ್ನು ಹೊಂದಿದೆ.! ಪ್ರತೀ ಸೆಕೆಂಡ್‍ಗೆ 7 ಕಿ.ಮೀ ವೇಗ ಕ್ರಮಿಸುವ ಈ ಸ್ಯಾಟನ್-2, ಬರೋಬ್ಬರಿ 10 ಸಾವಿರ ಕಿ.ಮೀ ದೂರದ ಶತ್ರು ಪಾಳಯವನ್ನು ಧ್ವಂಸ ಮಾಡಲಿದೆ. ತಾಂತ್ರಿಕವಾಗಿ ಹೆಚ್ಚು ಪ್ರಬಲವಾಗಿರೋ ಈ ಕ್ಷಿಪಣಿ ಶತ್ರು ಪಾಳಯದ ಯಾವುದೇ ರಾಡಾರ್‍ಗಳ ಕೈಗೆ ಸಿಗದೇ ತನ್ನ ಗುರಿಯನ್ನು ಕ್ಷಣ ಮಾತ್ರದಲ್ಲಿ ಕ್ರಮಿಸಿ ಧ್ವಂಸಗೊಳಿಸುವ ಸಾಮಥ್ರ್ಯವನ್ನು ಹೊಂದಿದೆ. ಇದು ಸ್ಟೀಲ್ ಟೆಕ್ನಾಲಜಿ(ರಹಸ್ಯ ಕಾರ್ಯಾಚರಣೆ) ಮೂಲಕ ಕಾರ್ಯಾಚರಣೆ ನಡೆಸಲಿದೆ.
ನಿಮಗೆಲ್ಲಾ ಗೊತ್ತಿರೋ ಹಾಗೆ ದ್ವಿತೀಯ ಮಹಾಯುದ್ದದಲ್ಲಿ ಜಪಾನ್‍ನ ಹಿರೋಷಿಮಾ ಮತ್ತು ನಾಗಾಸಾಕಿ ಅವಳಿ ನಗರದ ಮೇಲೆ ಅಮೇರಿಕಾ ಲಿಟಲ್‍ಬಾಯ್ ಎಂಬ ಪರಮಾಣು ಬಾಂಬ್ ಪ್ರಯೋಗ ಮಾಡಿತ್ತು. ಈ ಪ್ರಬಲ ದಾಳಿಯಿಂದ ಈ ಎರಡೂ ನಗರಗಳು ಛಿದ್ರವಾಗಿ ಹೋದ್ವು..! ಇದೀಗ ರಷ್ಯಾ ತಯಾರಿಸಲ್ಪಟ್ಟ ಈ ಒಂದು ಕ್ಷಿಪಣಿ ಲಿಟಲ್‍ಬಾಯ್‍ಗಿಂದ 200 ಪಟ್ಟು ಶಕ್ತಿಶಾಲಿ ಅಂದ್ರೆ ನೀವು ನಂಬ್ತೀರಾ..? ಈ ಒಂದು ಕ್ಷಿಪಣಿ ಸ್ಪೋಟಗೊಂಡಿದ್ದೇ ಆದ್ರೆ ಊಹೆಗೂ ನಿಲುಕದ ಪ್ರಮಾಣದಲ್ಲಿ ಅನಾಹುತ ಸಂಭವಿಸುತ್ತೆ ಅಂದ್ರೆ ಅದರಲ್ಲಿ ಎರಡು ಮಾತಿಲ್ಲ. ಅಕಸ್ಮಾತ್ ರಷ್ಯ ಈ ಕ್ಷಿಪಣಿಯನ್ನ ಅಮೇರಿಕಾದ ಮೇಲೆ ಪ್ರಯೋಗ ಮಾಡಿದ್ದೇ ಆದಲ್ಲಿ ಅಮೇರಿಕಾದ ಎರಡನೇ ಅತಿ ದೊಡ್ಡ ರಾಜ್ಯ ಎಂದೆನಿಸಿಕೊಂಡಿರುವ ಟೆಕ್ಸಾಸ್ ರಾಜ್ಯ ಅಥವಾ ಫ್ರಾನ್ಸ್ ಧೂಳಿಪಟವಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ತಜ್ಞರು..!
ಇನ್ನು ಪರಮಾಣು ಬಾಂಬ್ ನಮ್ಮ ಕೈಯಲ್ಲೂ ಇದೆ… ಇದೆ ಅಂತ ಕೊಚ್ಚಿಕೊಳ್ತಿರೋ ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಸೇರಿದಂತೆ ನಾನಾ ದೇಶಗಳು ನ್ಯೂಕ್ಲಿಯರ್ ಬಾಂಬ್ ತಯಾರಿಸಿಟ್ಟುಕೊಂಡಿದೆ.. ಆದ್ರೆ ಯಾವೆಲ್ಲಾ ದೇಶದಲ್ಲಿ ಪರಮಾಣು ಬಾಂಬ್‍ಗಳಿವೆಯೋ..? ಅವೆಲ್ಲವನ್ನು ಒಟ್ಟುಗೂಡಿಸಿದರೆ.. ರಷ್ಯಾದ ಸತಾರ್-2 ಅತ್ಯಾಧುನಿಕ ಕ್ಷಿಪಣಿಗೆ ಸಮ ಅಂದ್ರೆ.. ನೀವೇ ಊಹೆ ಮಾಡಿಕೊಳ್ಳಿ..! ಕೇವಲ ಒಂದೇ ಒಂದು ಕ್ಷಿಪಣಿ ಇಡೀ ದೇಶವನ್ನೇ ಸರ್ವನಾಶ ಮಾಡುತ್ತೆ ಅಂದ್ರೆ ಅದರ ಶಕ್ತಿ ಹೇಗಿರಬೇಡ ಅಲ್ವಾ..? ಅಮೇರಿಕಾ, ಯೂರೋಪ್ ಖಂಡದ ಶತ್ರು ದೇಶಗಳನ್ನು ಗುರಿಯಾಗಿಸಿಕೊಂಡು ನಿರ್ಮಾಣ ಮಾಡಿರೋ ಈ ಕ್ಷಿಪಣಿ ಕೇವಲ ಆ ದೇಶಗಳಿಗೆ ಮಾತ್ರವಲ್ಲ.. ಇಡೀ ವಿಶ್ವಕ್ಕೆ ವಿನಾಶಕಾರಿ ಅಸ್ತ್ರ ಅಂದ್ರೆ ತಪ್ಪೇ ಇಲ್ಲ ಬಿಡಿ..
Like us on Facebook The New India Times
POPULAR STORIES :
ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್
ನಾಳೆ ಮುಕುಂದ ಮುರಾರಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಾಲೆಂಜ್..!
ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!
ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!
ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?