ಟೀಂ ಇಂಡಿಯಾದ ಕ್ಯಾಪ್ಟನ್ , ರನ್ ಮಿಶನ್ ವಿರಾಟ್ ಕೊಹ್ಲಿ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ತನ್ನ ಹೆಸರನ್ನು ದಾಖಲೆ ಪುಸ್ತಕದಲ್ಲಿ ಬರೆಸಿಕೊಳ್ಳುತ್ತಾ ಮುನ್ನುಗ್ಗಿದ್ದಾರೆ. ಇದೀಗ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿಯಲು ಹೊರಟಿದ್ದಾರೆ…!


ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗ್ತಿದೆ. ನಾಳೆಯಿಂದ ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಮೊದಲ ಟೆಸ್ಟ್ ಆರಂಭವಾಗ್ತಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ವಿರಾಟ್ ಪಡೆ ಕ್ಲೀನ್ ಸ್ವೀಪ್ ಮಾಡಿದರೆ ಅತಿ ಹೆಚ್ಚು ಟೆಸ್ಟ್ ಗೆಲುವು ತಂದುಕೊಟ್ಟ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಲಿದ್ದಾರೆ.

29 ಟೆಸ್ಟ್ ಗಳಲ್ಲಿ ಟೀಂ ಇಂಡಿಯಾವನ್ನು ಮುನ್ನೆಡಸಿರುವ ಕೊಹ್ಲಿ 19 ಗೆಲುವು ತಂದುಕೊಟ್ಟಿದ್ದಾರೆ. 7 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡರೆ 3 ರಲ್ಲಿ ಸೋಲಾಗಿದೆ.

ಸೌರವ್ ಗಂಗೂಲಿ 49 ಟೆಸ್ಟ್ ಪಂದ್ಯಗಳನ್ನು ಮುನ್ನೆಡೆಸಿದ್ದು , 21 ಗೆಲುವು, 13 ಸೋಲು ಕಂಡಿದ್ದಾರೆ. 15 ಪಂದ್ಯಗಳು ಡ್ರಾ ಆಗಿವೆ. ಕೊಹ್ಲಿ ಮೂರು ಪಂದ್ಯಗಳನ್ನು ಗೆದ್ದರೆ ಹೆಚ್ಚು ಗೆಲುವು ತಂದುಕೊಟ್ಟ 2 ನೇ ನಾಯಕ ಎಂಬ ಕೀರ್ತಿ ಗೆ ಭಾಜನರಾಗುತ್ತಾರೆ. 60 ಟೆಸ್ಟ್ ಪಂದ್ಯ ಗಳ ನೇತೃತ್ವ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ 27 ಪಂದ್ಯಗಳಲ್ಲಿ ಗೆಲುವು, 18 ರಲ್ಲಿ ಸೋಲು 15 ರಲ್ಲಿ ಡ್ರಾ ಫಲಿತಾಂಶ ಕಂಡಿದ್ದಾರೆ. ಟೀಂಇಂಡಿಯಾಕ್ಕೆಅತಿ ಹೆಚ್ವು ಗೆಲುವು ತಂದ ನಾಯಕ ಧೋನಿ. ಇವರ ಈ ದಾಖಲೆ ಅಳಿಸಲು ಕೊಹ್ಲಿಗೆ ಬೇಕಾಗಿರೋದು ಇನ್ನು 9 ಗೆಲುವು.









