ಈ ಕಪ್ ಏಷ್ಯಾ ಮತ್ತು ಆಫ್ರೀಕಾದಲ್ಲಿ ಅವಧಿಗೆ ಮುಂಚೆ ಹುಟ್ಟಿದ 76 ಲಕ್ಷ ಶಿಶುಗಳ ಹಸಿವು ನೀಗಿಸುತ್ತೆ!

Date:

ಅದೆಷ್ಟೋ ಮಕ್ಕಳು ಒಂಬತ್ತು ತಿಂಗಳು ತುಂಬುವ ಮೊದಲು ಹುಟ್ಟುತ್ತವೆ! ಹೀಗೆ ಅವಧಿಗೂ ಮುನ್ನ ಹುಟ್ಟಿದ ಮಕ್ಕಳು ತಾಯಿ ಎದೆಯ ಹಾಲನ್ನು ಹೀರಲಾಗದೆ ಅಳುತ್ತವೆ, ಹಸಿವಿನಿಂದ ಬಳಲುತ್ತವೆ! ಇನ್ಮುಂದೆ ಈ ಸಮಸ್ಯೆಯಿಂದ ದಿನ ತುಂಬುವ ಮೊದಲು ಹುಟ್ಟುವ ಮಕ್ಕಳು, ಹಾಗೂ ಅವುಗಳ ತಾಯಂದಿರು ಚಿಂತಿಸಬೇಕಿಲ್ಲ. ಕೇವಲ 1ಡಾಲರ್ ಕಪ್ ನವಜಾತ ಶಿಶುಗಳನ್ನು ಹಸಿವಿನಿಂದ ರಕ್ಷಿಸುತ್ತದೆ! ಏಷ್ಯಾ ಮತ್ತು ಆಫ್ರೀಕಾದಲ್ಲಿಯೇ ಬರೊಬ್ಬರಿ 76ಲಕ್ಷ ಮಕ್ಕಳಿಗೆ `ತಾಯಿ ಎದೆಹಾಲು’ ಕುಡಿಯುವ ಅವಕಾಶ ಕಲ್ಪಿಸಿದೆ ಈ ಕಪ್!
ಹೊಸ ಆರೋಗ್ಯ ತಂತ್ರಜ್ಞಾನ ಒಂದು ಮಾರುಕಟ್ಟೆಗೆ ಬರಲಿದೆ. ಇದು ಒಂದು ಕಪ್, ವಿನೂತನ ತಂತ್ರಜ್ಞಾನದಿಂದ ಆವಿಷ್ಕರಿಸಿರುವ ಫೀಡಿಂಗ್ ಕಪ್ ಈಗತಾನೆ ಹುಟ್ಟಿರುವ ಲಕ್ಷಗಟ್ಟಲೆ ನವಜಾತ ಶಿಶುಗಳ, ಅವಧಿಗೂ ಮೊದಲು ಹುಟ್ಟಿದ ಶಿಶುಗಳ ಅದರಲ್ಲೂ ಮುಖ್ಯವಾಗಿ ಸೀಳು ತುಟಿ ಶಿಶುಗಳ ಪಾಲಿಗೆ ಸಂಜೀವಿನಿ ಅಂದ್ರೆ ತಪ್ಪಾಗಲ್ಲ!
ಈ ಸಮಸ್ಯೆಗಳು ಎದೆಹಾಲನ್ನು ಸರಾಗವಾಗಿ ಹೀರಲು ಅಡ್ಡಿಪಡಿಸುತ್ತವೆ. ಅಷ್ಟೇ ಅಲ್ಲದೇ, ಎದೆಹಾಲನ್ನು ಹೀರುವಾಗ ಏನಿಲ್ಲ ಅಂದ್ರೂ ಮೂರನೇ ಎರಡಷ್ಟು ಹಾಲು ಚೆಲ್ಲಿ ಹೋಗುತ್ತೆ! ಪಾಪ, ಬೇಗ ಹುಟ್ಟಿದ, ಸೀಳು ತುಟಿ ಮಕ್ಕಳಿಗೆ ಸರಿಯಾಗಿ ತಾಯಿ ಎದೆಹಾಲನ್ನು ಕುಡಿದು ಬೆಳೆಯಲು ಸಾಧ್ಯಾ ಆಗಿಲ್ಲ! ಆಗುತ್ತಿಲ್ಲ. ಈ ಬೇಜಾರಿಗೆ, ನೋವಿಗೆ, ಆವಿಷ್ಕರಿಸಲ್ಪಟ್ಟಿರುವ ಕಪ್ ಪರಿಹಾರವಾಗಿದೆ!
ಅಂದಹಾಗೆ ಇದು ಒಂದೇ ಒಂದು ಡಾಲರ್ ಕಪ್, ಇದು ಈ ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆ ಇದ್ದು, ಇದು ಮಾರುಕಟ್ಟೆ ಪ್ರವೇಶಿಸುತ್ತಿದಂತೆ ಏಷ್ಯಾ, ಆಫ್ರಿಕಾದಲ್ಲಿ ಅವಧಿಗೂ ಮುಂಚಿತವಾಗಿ ಹುಟ್ಟಿದ 7.6 ಲಕ್ಷ ನವಜಾತ ಶಿಶುಗಳನ್ನು ಅಪೌಷ್ಟಿಕತೆಯಿಂದ ರಕ್ಷಿಸುತ್ತೆ ಎಂದು ಸಂಶೋಧಕರು ಹೇಳ್ತಾ ಇದ್ದಾರೆ!
ಹೇಗೆ ಈ ಕಪ್ ಶಿಶುಗಳನ್ನು ಹಸಿವಿನಿಂದ ಕಾಪಾಡುತ್ತೆ ಅಂತ ನಿಮ್ಮ ಪ್ರಶ್ನೆ ಅಲ್ವೇ? ಈ ಕಪ್ ಹೆಸರು, ನಿಫ್ಟಿ (ಎನ್‍ಐಎಫ್‍ಟಿವೈ) ಇದು ನವಜಾತ ಶಿಶುವಿಗೆ ಹಾಲನ್ನು ಫೀಡ್ ಮಾಡುವ ತಂತ್ರಜ್ಞಾನ! ಈ ತಂತ್ರಜ್ಞಾನದ ಜನಕ ಸೀಟಲ್‍ನ ಮಕ್ಕಳ ವೈದ್ಯ ಮೈಕಲ್ ಕನ್ನಿಂಗ್ಹ್ಯಾಮ್. ವಿವಿಧ ರೀತಿಯ ಕಾರಣಗಳಿಂದಾಗಿ ತಾಯಿ ಎದೆಹಾಲನ್ನು ಹೀರಲಾಗದೇ ಇರುವ ಹಲವಾರು ಮಕ್ಕಳನ್ನು ನೋಡಿದ ಇವರಿಗೆ ಹೊಳೆದಿದ್ದೇ 40ಎಂಎಲ್ ನಿಫ್ಟಿ ಕಪ್! ತಾಯಿ ನೇರವಾಗಿ ತನ್ನ ಎದೆಹಾಲನ್ನು ಈ ಕಪ್‍ಗೆ ಸುರಿಸ ಬಹುದು! ನಂತರ ಕಪ್‍ನಿಂದ ಮಗುವಿಗೆ ಉಣಿಸಬಹದು! ಇದರಿಂದಾಗಿ ಶಿಶು ಹಾಲು ಕುಡಿಯುವುದು ಸುಲಭವಾಗುವುದಲ್ಲದೆ, ಎದೆಹಾಲು ಚೆಲ್ಲಿ ಹೋಗುವುದನ್ನು ತಡೆಯಬಹುದು ಎಂದು ಸಂಶೋದಕರು ಹೇಳಿದ್ದಾರೆ! ಅಧ್ಯಯನವೊಂದರ ಪ್ರಕಾರ ಈ ನಿಫ್ಟಿ ಕಪ್ ವಿಶ್ವದ ಎಲ್ಲಾ ತಾಯಂದಿರಿರಗೂ ಕೈಗೆಟಕುವಂತಾದರೆ ವರ್ಷಕ್ಕಿಂತ ಚಿಕ್ಕ ವಯಸ್ಸಲ್ಲಿ ಸಾಯುವ ಕನಿಷ್ಟ 8ಲಕ್ಷ ಮಕ್ಕಳನ್ನು ಉಳಿಸಿಕೊಳ್ಳಬಹುದಂತೆ! ಇದು ಮುಂದಿನ ವರ್ಷದ ಹೊತ್ತಿಗೆ ಆಫ್ರೀಕಾದ ಆಸ್ಪತ್ರೆ ಸಿಬ್ಬಂದಿಗಳನ್ನು ತಲುಪುವ ನಿರೀಕ್ಷೆ ಇದೆ! ಈ ಅನ್ವೇಷಣೆ ಬಿಲ್, ಮೆಲಿಂಡಾ ಫೌಂಡೇಷನ್, ಯುಎಸ್‍ಎಐಡಿ ಫಂಡ್ ಫಾರ್ ರಿಸರ್ಚ್ ಸೇರಿದಂತೆ ಅನೇಕ ಸಂಸ್ಥೆಗಳಿಂದ ಒಟ್ಟಾರೆಯಾಗಿ 16679362.50 ರೂ ಮೊತ್ತದ ನಗದಿನ ಪ್ರಶಸ್ತಿಯನ್ನು ಪಡೆದಿದೆ!

  • ರಘು ಭಟ್

POPULAR  STORIES :

ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?

ಫೇಸ್‍ಬುಕ್‍ನಲ್ಲಿ ಫೋಟೋ ಹಾಕಿದ ಗೆಳಯನ ಕೊಲೆ! ಮಡಿಕೇರಿಯಿಂದ ಬಂದ ಗೆಳತಿ ಮಂಚಕ್ಕೆ ಬರಲಿಲ್ಲ, ಅದಕ್ಕೇ ಫೇಸ್‍ಬುಕ್‍ನಲ್ಲಿ ಫೋಟೋ ಹಾಕಿದ!

ರಾಜೀನಾಮೆ ನಂತರ ಮೊದಲಬಾರಿಗೆ ಮೀಡಿಯಾ ಮುಂದೆ ಅನುಪಮಾ ಏನ್ ಹೇಳಿದ್ರು ಗೊತ್ತಾ?!

ಹೇರ್ ಟ್ರಾನ್ಸ್‍ಪ್ಲಾಂಟ್ ಮಾಡಿಸ್ಕೋತೀರಾ..!? ಸಾವು ಗ್ಯಾರಂಟಿ..!! ಹುಷಾರ್..!!?

ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?

`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...