ಪ್ರವಾಸ ಹೊರಟಾಗ ಪ್ರವಾಸದ ಬಜೆಟ್ ನದ್ದೇ ದೊಡ್ಡ ತಲೆನೋವು. ಕುಟುಂಬ ಸಮೇತ ಪ್ರವಾಸ ಹೊರಟಾಗ ಆಗುವ ಖರ್ಚು ಅಷ್ಟಿಷ್ಟಲ್ಲ.
ಪ್ರವಾಸಿಗರಿಗೆ ಕೆಲವು ಟ್ರಾವೆಲಿಂಗ್ ಸಂಸ್ಥೆಗಳು ಆಗಾಗಾ ಅನೇಕ ಬಗೆಯ ಆಫರ್ ಗಳನ್ನು ನೀಡುತ್ತವೆ.
ಅಮೆರಿಕಾದ ವಿಮಾನ ಸಂಸ್ಥೆ ಸ್ಕ್ಯಾಂಡಿನೇವಿಯನ್ ಏರ್ ಲೈನ್ಸ್ (ಎಸ್ ಎಎಸ್ ) ಪ್ರವಾಸಿ ಕುಟುಂಬಗಳಿಗೆ ಅನುಕೂಲ ಆಗುವಂತೆ ಭರ್ಜರಿ ಆಫರ್ ನೀಡಿದೆ. ಕುಟುಂಬದೊಂದಿಗೆ ಪ್ರವಾಸ ಹೋಗುವ ಮಕ್ಕಳಿಗೆ ಈ ವಿಮಾನದಲ್ಲಿ ಟಿಕೆಟ್ ವೆಚ್ಚ ಭರಿಸುವ ಅಗತ್ಯವಿಲ್ಲ.
ಸಂಸ್ಥೆಯು ಹನ್ನೊಂದು ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ್ದು , ಪ್ರಯಾಣದ ತೆರಿಗೆಯನ್ನು ಮಾತ್ರ ಪಾವತಿಸಿದರೆ ಸಾಕು ಎಂದಿದೆ. ಈ ಆಫರ್ ಅವಧಿ ಆಗಸ್ಟ್ 20 ರಿಂದ ಮಾರ್ಚ್ 2019ರವರೆಗೆ ಇರಲಿದೆ. ಅಮೆರಿಕಾದ ಕೋಪನ್ ಹೇಗನ್, ಹೆಲ್ಸಂಕಿ, ಓಸ್ಲೋ ಮತ್ತು ಸ್ಟಾಕ್ ಹೋಮ್ ನಂತಹ ಪ್ರವಾಸಿ ನಗರಗಳನ್ನು ಈ ಪ್ರಯಾಣಕ್ಕೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ.