ಖಂಡಿಂತಾ ಈ ಸುದ್ದಿ ಕೇಳಿದ್ರೆ ಶಾಕ್ ಆಗುತ್ತೆ..! ಕನಸು ಬಿದ್ದಿದ್ದಕ್ಕೇ ಸೂಸೈಡ್ ಮಾಡ್ಕೊಂಡ ಅಂತಾದ್ರೆ…ಅವನಿಗೆ ಅದೆಂಥಾ ಕನಸು ಬಿದ್ದಿರಬಹುದು..! ಕನಸೇ ಅವನ ಬಲಿ ತೆಗೆದುಕೊಂಡು ಬಿಡ್ತೇ..?
ಯಸ್, ಇದು ಹೈದರಾಬಾದ್‍ನಲ್ಲಿ ನಡೆದಿರೋ ನೈಜ ಘಟನೆ..! ಸೈಯದ್ ರೆಹಮತ್ ಎಂಬ ವಿದ್ಯಾರ್ಥಿ ಭಯಾನಕ ಸರಣಿ ಕನಸುಗಳಿಗೆ ಹೆದರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ..! ಶ್ರೀ ಚೈತನ್ಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಈತನಿಗೆ ಕಳೆದ ಕೆಲವು ದಿನಗಳಿಂದ ನಿತ್ಯ ಒಂದು ಭಯಾನಕ ಕನಸು ಬೀಳ್ತಾ ಇತ್ತಂತೆ..! ಇದರಿಂದ ವಿಚಲಿತನಾದ ಈತ ಖಿನ್ನತೆಗೆ ಜಾರಿ, ಕೊನೆಗೆ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ ಎಂಬುದು ಬೆಳಕಿಗೆ ಬಂದಿದೆ..!
‘ಕೆಲವು ದಿನಗಳಿಂದ ನನಗೆ ಕೆಟ್ಟ, ಭಯಾನಕ ಕನಸುಗಳು ಬೀಳ್ತಾ ಇವೆ..! ನಾನು ಸಂಬಂಧಿಕರೊಬ್ಬರನ್ನು ಕೊಲ್ಲುವಂತಹ ಕನಸದು..! ಪದೇ ಪದೇ ಬೀಳ್ತಾ ಇರೋ ಈ ಕನಸಿಂದ ನನಗೆ ಆಘಾತವಾಗಿದೆ’ಅಂತ ರೆಹಮತ್ ಡೆತ್‍ನೋಟ್ ಬರೆದಿದ್ದಾನಂತೆ’..! ಅಷ್ಟೇಅಲ್ಲದೆ ಸಾಯುವ ಮುನ್ನ ತಂದೆಗೆ ಫೋನ್ ಮಾಡಿ ನನಗೆ ಇಂತಹ ಕೆಟ್ಟ ಕನಸುಗಳು ಬೀಳ್ತಾ ಇದೆ..! ನಾನು ವಿಚಲಿತನಾಗಿದ್ದೇನೆ ಅಂತ ಹೇಳಿ ಫೋನ್ ಕಟ್ ಮಾಡಿದ್ದನಂತೆ..! ಬಳಿಕ ತಂದೆ ವಾಪಸ್ಸು ಕರೆಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತಂತೆ..! ಬಳಿಕ ರೆಹಮತ್ ಸಿಕ್ಕಿದ್ದು ಶವವಾಗಿ.