ಇಲ್ಲೊಂದು ಶಾಲೆಯಲ್ಲಿ ಸರಸ್ವತಿ ಪೂಜೆ, ಒಂದೇ ಮಾತರಂ ಹಾಡುವಂತಿಲ್ಲ. ಅಷ್ಟೇ ಅಲ್ಲಾ ರೀ.. ಈ ಶಾಲೆಯಲ್ಲಿ ರಾಷ್ಟ್ರ ಗೀತೆಯನ್ನೇ ನಿಷೇಧ ಮಾಡ್ಬಿಟ್ಟಿದ್ದಾರೆ.. ಕಾರಣ ರಾಷ್ಟ್ರಗೀತೆಯಲ್ಲಿ ಬರುವ ‘ಭಾರತ ಭಾಗ್ಯವಿದಾತ’ ಎಂಬ ಸಾಲು ಬರೋದ್ರಿಂದ.
ಇದೀಗ ಆಗಸ್ಟ್ 15ರಂದು ರಾಷ್ಟ್ರಗೀತೆ ಹಾಡಲು ಅನುಮತಿ ನಿರಾಕರಿದ್ದರಿಂದ ಅಲ್ಲಿನ 8 ಶಿಕ್ಷಕರು ಕಳೆದ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ್ದು, ಉತ್ತರ ಪ್ರದೇಶದ ಅಲಹಾಬಾದ್‍ನಲ್ಲಿರುವ ಶಾಲೆಯನ್ನು ಬಂದ್ ಮಾಡಿ ಶಾಲೆಯ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ. ರಾಷ್ಟ್ರೀಯ ಘನತೆಗೆ ಚ್ಯುತಿ ಕಾನೂನಿನಡಿ ಎಂಎ ಕಾನ್ವೆಂಟ್‍ನ ವ್ಯವಸ್ಥಾಪಕ ಜಿಯಾ ಉಲ್ ಹಕ್‍ನನ್ನು ಬಂಧಿಸಲಾಗಿದೆ.
ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಅಚ್ಚರಿಯ ವಿಷಯ ಅಂದ್ರೆ ಕಳೆದ 12 ವರ್ಷಗಳಿಂದಲೂ ರಾಷ್ಟ್ರಗೀತೆಯನ್ನು ನಿಷೇಧಿಸಿದ್ದಾರೆ. ವಿದ್ಯಾರ್ಥಿಗಳಾಗಲೀ ಅಥವಾ ಶಿಕ್ಷಕರಾಗಲೀ ಶಾಲೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವಂತಿಲ್ಲ. ಇದು ಇತ್ತಿಚೆಗೆ ಕೆಲಸಕ್ಕೆ ಸೇರಿದ್ದ ಶಿಕ್ಷಕರಿಗೆ ಈ ವಿಷಯ ಗೊತ್ತಿರಲಿಲ್ಲ. ಈ ಶಾಲೆಯಲ್ಲಿ ಎಲ್ಲರೂ ಹೊಸಬರೇ ಆದ್ದರಿಂದ ಅವರಿಗೆ ರಾಷ್ಟ್ರಗೀತೆಯನ್ನು ನಮ್ಮ ಶಾಲೆಯಲ್ಲಿ ಹಾಡದಂತೆ ಹೇಳಿದ್ದಾರೆ ಇದರಿಂದ ಶಿಕ್ಷಕರೆಲ್ಲರೂ ಅಘಾತಗೊಂಡಿದ್ದಾರೆ. ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ ರಾಷ್ಟ್ರಗೀತೆ ಹಾಡುವ ಹಾಗಿಲ್ಲ ಇಲ್ಲದಿದ್ದರೆ ರಾಜಿನಾಮೆ ನೀಡಿ ಎಂದು ವ್ಯವಸ್ಥಾಪಕರು ಕಟುವಾಗಿಯೇ ಉತ್ತರಿಸಿದ್ದಾರೆ. ಇದರಿಂದ ಎಲ್ಲಾ ಶಿಕ್ಷಕರೂ ಸಾಮೂಹಿಕವಾಗಿ ರಾಜಿನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ.
ಶಿಕ್ಷಕರ ರಾಜಿನಾಮೆ ಕುರಿತು ಕ್ಯಾರೆ ಎನ್ನದ ಆಡಳಿತ ಮಂಡಳಿ ತನ್ನ ಹಠ ಮುಂದುವರೆಸಿದೆ. ಮುಸ್ಲೀಮರ ನಂಬಿಕೆಯಂತೆ ನಮ್ಮ ವಿಧಿಯನ್ನು ನಿರ್ಧರಿಸುವುದು ಅಲ್ಲಾಹ್, ಹೀಗಾಗಿ ರಾಷ್ಟ್ರಗೀತೆ ಹಾಡಿಸಲು ನಮ್ಮಲ್ಲಿ ಅನುಮತಿ ಇಲ್ಲ ಎಂಬುದು ಅವರ ವಾದ.
ಭಾರತ ಭಾಗ್ಯವಿದಾತ ಎಂದರೆ ವಿಧಿಯನ್ನು ನಿರ್ಧರಿಸುವುದು ಭಾರತ ಎಂದಾಗುತ್ತದೆ ಆದರೆ ಮುಸ್ಲೀಮರ ನಂಬಿಕೆ ವಿಧಿಯನ್ನು ನಿರ್ಧರಿಸಿವುದು ಅಲ್ಲಾಹ್. ಎಂದು ಹೇಳುತ್ತಾರೆ.
ಈ ಶಾಲೆಗೆ ಸರ್ಕಾರದ ಆದೇಶವು ಇಲ್ಲ ಎಂಬ ಪ್ರಾಥಮಿಕ ವರಧಿಯೂ ಬಂದಿದೆ. ಅಲ್ಲದೆ ರಾಷ್ಟ್ರಗೀತೆಗೆ ಅಪಮಾನ ಕಾನೂನು ರೀತಿಯಲ್ಲಿ ಅಪರಾಧವಾಗಿರುವುದರಿಂದ ಪ್ರಕರಣದ ತನಿಖೆಗೂ ಆದೇಶಿಸಿದೆ.
POPULAR STORIES :
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!