ಅತಿಯಾದ್ರೆ ಅಮೃತವೂ ವಿಷ ಅನ್ನೋ ಮಾತಿದೆ. ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ವೃದ್ದರಾದಿಯಾಗಿ ಎಲ್ಲರನ್ನೂ ತನ್ನ ಮೋಹದ ಬಲೆಗೆ ಸೆಲೆದಿರೋ ಸೆಲ್ಫೀ ವಿಚಾರದಲ್ಲೂ ಈ ಮಾತು ಅಕ್ಷರಶಃ ಸತ್ಯ. ಹೌದು ಈಗ ದ ಟೆಲಿಗ್ರಾಫ್ ನ ವರದಿಯನ್ನ ಕೇಳಿದ್ರೆ ಸೆಲ್ಫೀ ಪ್ರಿಯರು ಅದ್ರಲ್ಲೂ ಪ್ರಮುಖವಾಗಿ ಹೆಣ್ಣು ಮಕ್ಕಳು ಹೌಹಾರೋದಂತೂ ಸತ್ಯ.
ಸೆಲ್ಫೀ ಮೋಹಿಗಳಿಗೆ, ಅದ್ರಲ್ಲು ಕೂತ್ರೆ ನಿಂತ್ರೆ ಒಂದೊಂದು ಸೆಲ್ಫೀ ತೆಗೆದುಕೊಳ್ಳೋ ಇಂದಿನ ಯುವಜನಾಂಗಕ್ಕೆ ಆಘಾತಕಾರಿ ಸುದ್ದಿಯಿದು. ಹೌದು ದ ಟೆಲಿಗ್ರಾಫ್ ನ ವರದಿಯ ಪ್ರಕಾರ ಪದೇ ಪದೇ ಸೆಲ್ಫೀ ತೆಗೆದುಕೊಳ್ಳುವವರ ಚರ್ಮ ಬಹಳ ಬೇಗ ಸುಕ್ಕು ಕಟ್ಟುತ್ತೆ. ಮತ್ತು ಮುಖದಲ್ಲಿ ನೆರಿಗೆ ಕಾಣಿಸಿಕೊಳ್ಳುವುದಕ್ಕೂ ಈ ಸೆಳ್ಫೀ ಕಾರಣವಾಗುತ್ತೆ ಎಂದು ಲಂಡನ್ನಿನ ಚರ್ಮರೋಗ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸೆಲ್ಫೀ ಪ್ರಿಯರು ಗಮನಿಸಬೇಕಾದ ಅಂಶವೇನಂದೆರೆ ಮೊಬೈಲ್ ಸ್ಕ್ರೀನ್ ನಿಂದ ಹೊರಹೊಮ್ಮೋ ನೀಲಿ ಬೆಳಕು ಮತ್ತು ಎಲೆಕ್ಟ್ರೋ ಮಾಗ್ನೆಟಿಕ್ ವಿಕಿರಣಗಳು ಚರ್ಮಕ್ಕೆ ಹಾನಿಯುಂಟು ಮಾಡಿ ಚರ್ಮ ಸುಕ್ಕು ಕಟ್ಟಿ ವಯಸ್ಸಾದಂತೆ ಕಾಣಿಸುತ್ತದೆ ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ. ಒಟ್ಟಾರೆ ಏನೇ ಆದ್ರೂ ಇತಿಮಿತಿಯಲ್ಲಿರಬೇಕು. ಅತಿಯಾದ್ರೆ ಅಮೃತವೂ ವಿಷ ಅನ್ನೋದು ಇದಕ್ಕೆ ಇನ್ನಾದ್ರು ನಮ್ಮ ಜನ ಸೆಲ್ಫೀ ಕ್ರೇಝ್ ನಿಂದ ಹೊರಬರಬೇಕಿದೆ.
- ಶ್ರೀ
POPULAR STORIES :
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!
ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!
68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!
ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!