ಸೆಲ್ಫಿ ಹುಚ್ಚು ಹೆಚ್ಚಾಯ್ತು..! ಅತ್ಯಾಚಾರ ಸಂತ್ರಸ್ತೆ ಜೊತೆ ಸೆಲ್ಫಿ ತೆಗೆದುಕೊಂಡ್ಲು ಮಹಿಳಾ ಆಯೋಗದ ಸದಸ್ಸೆ..!

Date:

ಸೆಲ್ಫಿ ಹುಚ್ಚು ಅತಿರೇಕಕ್ಕೆ ಏರಿದ್ರೆ ಹೀಗೆ ಆಗೋದು..?! ಹೆಣದ ಮುಂದೆನೂ ಸೆಲ್ಫಿ ತೆಕ್ಕೊಳ್ತಾರೆ..! ಬಾತ್ ರೂಂನಲ್ಲಿ ಬೆತ್ತಲೆ ಸೆಲ್ಫಿನೂ ತೆಗೆದುಕೊಳ್ತಾರೆ..! ಈಗ ಇದೇ ಹುಚ್ಚು ಮಿತಿ ಮೀರಿದ ಮಹಿಳಾ ಆಯೋಗದ ಅಯೋಗ್ಯ ಸದಸ್ಯೆಯೊಬ್ಬರು  ಅತ್ಯಾಚಾರ ಸಂತ್ರಸ್ತೆ ಜೊತೆಯಲ್ಲಿ ಸೆಲ್ಫಿ ತೆಗೆದು ಕೊಂಡು ಸೆಲ್ಫಿ ಹುಚ್ಚು ನೆತ್ತಿಗೇರಿರುವುದನ್ನು ಸಾಬೀತು ಪಡಿಸಿದ್ದಾರೆ..!
ಹೀಗೆ ಸ್ವತಃ ಮಹಿಳಾ ಆಯೋಗದ ಸದಸ್ಯೆಯೇ ಸೆಲ್ಫಿ ತೆಗೆದುಕೊಂಡ ನಾಚಿಕೆಗೇಡಿನ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ ..!ಹ್ೌದು , ಆಯೋಗದ ಸದಸ್ಯೆಈ ಸೌಮ್ಯ ಗುರ್ಜರ್ ಅತ್ಯಾಚಾರಕ್ಕೀಡಾದ ಸಂತ್ರಸ್ತೆ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ನೋಟಿಸ್ ಜಾರಿ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ..!
ರಾಜಸ್ಥಾನದ ಆಳ್ವಾರ್‌ನಲ್ಲಿ ಮೊನ್ನೆ ಮೊನ್ನೆ ಮಹಿಳೆಯೊಬ್ಬಳ ಮೇಲೆ ಆಕೆಯ ಗಂಡ ಮತ್ತವನ ಇಬ್ಬರು ಸಹೋದರರು ಅತ್ಯಾಚಾರ ಮಾಡಿದ್ದರು. ಅಷ್ಟೇ ಅಲ್ಲದೇ 51,000 ರೂಪಾಯಿ ವರದಕ್ಷಿಣೆಗೆ ಕಾಡಿದ್ದರು..! ಇಷ್ಟು ಹಿಂಸೆ ಸಾಲದಂತೆ ಆಕೆಯ ಹಣೆಯ ಮೇಲೆ ಮೇರಾ ಬಾಪ್‌ ಚೋರ್‌ ಹೈ’ ಎಂದು ಒತ್ತಾಯಪೂರ್ವಕವಾಗಿ, ಬಲವಂತದಿಂದ ಹಚ್ಚೆ ಹಾಕಿಸಿ ಅವಮಾನಿಸಿದ್ದರು..!
ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸುಮನ್‌ ಶರ್ಮಾ ಮತ್ತು ಸದಸ್ಯೆ ಸೌಮ್ಯಾ ಗುರ್ಜರ್‌ ಬುಧವಾರ ಠಾಣೆಗೆ ಆಗಮಿಸಿದ್ದರು, ನೊಂದ ಮಹಿಳೆಗೆ ಸಾಂತ್ವನ ಹೇಳಿ,ಆಕೆಯೊಡನೆ ಮಾತುಕತೆ ನಡೆಸಿದ್ದರು. ಹೀಗೆ ಮಾತುಕತೆ ನಡೆಸುವಾಗಲೇ ಸೌಮ್ಯಾ ಅವರು ಸಂತ್ರಸ್ತೆಯೊಡನೆ ಸೆಲ್ಫಿ ತೆಗೆದುಕೊಂಡು, ಸೆಲ್ಫಿಪ್ರೇಮ ಮೆರೆದು ಮಾನವೀಯತೆ ಮರೆತಿದ್ದಾರೆ..!
ಈ ಸೆಲ್ಫಿಯಲ್ಲಿ ಅಧ್ಯಕ್ಷೆ ಸುಮನ್‌ ಸಹ ಇದ್ದಾರೆ. ಇದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದಾಗಿ ಸೆಲ್ಫಿ ಕುರಿತು ವಿವರಣೆ ನೀಡುವಂತೆ ಸೌಮ್ಯಾ ಗೆ ಸುಮನ್‌ ನೋಟಿಸ್‌ ಜಾರಿ ಮಾಡಿದ್ದರೆಂದು ವರದಿಯಾಗಿದ್ದು.., ಸೆಲ್ಫಿ ಹುಚ್ಚು ಹೆಚ್ಚಿದ ಪರಿಣಾಮ ಸೌಮ್ಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ..!ಅತಿಯಾದ್ರೆ ಅಮೃತವೂ ವಿಷ ಅಲ್ವೇ?

POPULAR  STORIES :

ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?

ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!

ಜೈಲ್ ನಿಂದಲೇ IIT ಪರೀಕ್ಷೆ ಬರೆದು ಪಾಸಾದ ಈ ಹುಡುಗನ ಬಗ್ಗೆ ಗೊತ್ತೇ??

ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!

ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?

ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?

11ರ ಪೋರ ಕಲ್ಲಾಗುತ್ತಿದ್ದಾನೆ..!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...