ಸೀರೆಯಲ್ಲಿ ನಾರಿಯರನ್ನು ನೋಡುವುದು ಅಪರೂಪವಾಗಿರುವ ಈ ದಿನಗಳಲ್ಲಿ ಮಂಗಳೂರಿನ ಮೆಡಿಮೈಡ್ ಸೊಲ್ಯುಷನ್ ಅಸೋಸಿಯೇಷನ್ ಕ್ಲಬ್ ‘ಸೀರೆಯಲ್ಲಿ ವಾಕಿಂಗ್’ ಎಂಬ ವಿನೂತನ ಕಾರ್ಯಕ್ರಮ ನಡೆಸಿ ಗಮನ ಸೆಳೆದಿದೆ.
ಸೀರೆ ಉಟ್ಕೊಂಡು ಆರಾಮಾಗಿ ನಡಿಯೋಕೆ ಆಗಲ್ಲ ಎನ್ನುವ ಮಹಿಳೆಯರ ನಡುವೆ ಅಪವಾದ ಎಂಬಂತೆ ಮಂಗಳೂರಿನ ಮಹಿಳೆಯರು ಸೀರೆಯಲ್ಲೇ ವಾಕಿಂಗ್ ಮಾಡಿದ್ದಾರೆ.
ಸೀರೆಯಲ್ಲಿ ವಾಕಿಂಗ್ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಬೆಳ್ಳಂಬೆಳಗ್ಗೆ ಸೀರೆಉಟ್ಟು ಹಾಜರಿದ್ದರು. ಗಾಂಧಿಪಾರ್ಕ್ ಮುಂಭಾಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಣ್ಣಗುಡ್ಡಯಿಂದ ಶುರುವಾದ ಸೀರೆಯಲ್ಲಿ ವಾಕಿಂಗ್ ನಲ್ಲಿ ಸುಮಾರು 600ಕ್ಕೂ ಹೆಚ್ಚು ಮಂದಿ ಮಹಿಳೆಯರು ಭಾಗವಹಿಸಿದ್ದರು. ಮಂಗಳ ಕ್ರೀಡಾಂಗಣದ ಮೂಲಕ ಮತ್ತೆ ಮಣ್ಣಗುಡ್ಡ ತಲುಪಿದರು. ಒಟ್ಟು 2 ಕಿಮೀ ನಡಿಗೆ ಇದಾಗಿತ್ತು. ಶೂ, ಟ್ರಾಕ್ ಸೂಟ್ ಇಲ್ಲದೇ ಸೀರೆಯಲ್ಲೂ ವಾಕಿಂಗ್ ಮಾಡಬಹುದು ಎಂಬ ಸಂದೇಶ ನೀಡಲು ಈ ಕಾರ್ಯಕ್ರಮ ನಡೆಸಲಾಯಿತು.