ಸೆಕ್ಸ್ ಜೀವನದ ಅವಿಭಾಜ್ಯ . ಆದ್ರೆ, ಅತಿಯಾದ್ರೆ ಅಮೃತವೂ ವಿಷ ಎಂಬಂತೆ ಸೆಕ್ಸ್ ನಿಂದ ಈ ಅಪಾಯಗಳಾಗೋ ಸಾಧ್ಯತೆ ಇದೆ.
ಬಳಲಿಕೆ ಮತ್ತು ಸುಸ್ತು: ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ದೇಹವು ನೊರ್ಪಿನ್ಫ್ರಿನ್, ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ನ್ನು ಬಿಡುಗಡೆ ಮಾಡುವುದು. ಇದರಿಂದ ಹೃದಯಬಡಿತ ಹೆಚ್ಚಾಗುವುದು, ಗ್ಲೂಕೋಸ್ ಚಯಾಪಚಯ ಮತ್ತು ರಕ್ತದೊತ್ತಡವು ಹೆಚ್ಚಾಗುವುದು. ನಿಯಮಿತವಾಗಿ ಇದನ್ನು ಮಾಡಿದರೆ ಆಗ ಇದು ದೇಹಕ್ಕೆ ವ್ಯಾಯಾಮ ಹೆಚ್ಚಾದರೆ ಆಯಾಸ ಖಂಡಿತ.
2. ಗೀಳಾಗಬಹುದು: ಅತಿ ಹೆಚ್ಚಿನ ಲೈಂಗಿಕತೆ ಗೀಳಾಗಿ ಪರಿವರ್ತನೆಯಾಗಬಹುದು. ಒಬ್ಬರಿಗೆ ಬೇಕಿದ್ದು ಇನ್ನೊಬ್ಬರಿಗೆ ಬೇಡವಾದ ಸಂದರ್ಭ ಎದುರಾದರೆ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಬಹುದು.
3. ಊದಿಕೊಳ್ಳುವ ಶಿಶ್ನ: ಲೈಂಗಿಕ ಕ್ರಿಯೆ ಬಳಿಕ ಕೆಲವು ಪುರುಷರ ಶಿಶ್ನದಲ್ಲಿ ಕೆಲವು ಸೆಕೆಂಡುಗಳ ಕಾಲ ಕಾಣಿಸಿಕೊಳ್ಳುವಂತಹ ನೋವು ಸಾಮಾನ್ಯವಾಗಿರುವುದು. ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದರೆ ಆಗ ಸ್ವ ಉತ್ತೇಜನ ಮತ್ತು ಒತ್ತಾಯ ಪೂರ್ವಕವಾಗಿ ಸ್ಖಲನ ಮಾಡುವುದರಿಂದ ಶಿಶ್ನದಲ್ಲಿ ಊತ ಕಾಣಿಸಿಕೊಳ್ಳುವುದು..
4. ಮಹಿಳೆಯರಲ್ಲಿ ಉರಿಯೂತ ಮತ್ತು ಊರಿ ಮೂತ್ರ: ಅತಿಯಾದ ಸೆಕ್ಸ್ ನಿಂದಾಗಿ ಯೋನಿಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಪುರುಷ ಮತ್ತು ಮಹಿಳೆ ಇಬ್ಬರ ಆರೋಗ್ಯದ ಮೇಲೂ ಇದು ಪರಿಣಾಮ ಉಂಟುಮಾಡಬಲ್ಲದು. ಯೋನಿಯ ಗೋಡೆಗಳಿಗೆ ಹಾನಿಯಾದರೆ ಮಹಿಳೆಯರು ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ.
5.ಬೆನ್ನು ನೋವು: ವಿಪರೀತ ಬೆನ್ನು ನೋವಿಗೂ ಅತಿಯಾದ ಸೆಕ್ಸ್ ಕಾರಣವಾಗುತ್ತದೆ. ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.
6. ರೋಗಗಳ ಅಪಾಯ: ಲೈಂಗಿಕವಾಗಿ ಹೆಚ್ಚು ಕ್ರಿಯಾತ್ಮಕವಾಗಿರುವಂತಹ ಮಹಿಳೆಯರು ಬಲು ಬೇಗ ರೋಗಕ್ಕೆ ತುತ್ತಾಗುವ ಅಪಾಯ ಇರುತ್ತದೆ. ಅಲ್ಲದೇ ಬ್ಯಾಕ್ಟೀರಿಯಾ ಸಮಸ್ಯೆಗೂ ಗುರಿಯಾಗಬಹುದು.
7. ಆಸಕ್ತಿ ಕುಂಠಿತ: ನಿರಂತರ ಲೈಂಗಿಕ ಕ್ರಿಯೆ ಸ್ವಾದ ಕಡಿಮೆ ಮಾಡಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿಬಿಡಬಹುದು. ನೂರಾರು ಕನಸುಗಳನ್ನು ಇಟ್ಟುಕೊಂಡವರಿಗೆ ಅಂತ್ಯದಲ್ಲಿ ಭ್ರಮನಿರಸನ ಉಂಟಾಗಬಹುದು.