ನನ್ನ ಬಗ್ಗೆ ಹೇಳ್ಕೊಳೋದಾದ್ರೆ ನಾನು ಸಾರ್ವಜನಿಕರಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡ್ತಾ ಇದೇನೆ ಹಾಗೇಯೇ ನಾನೊಬ್ಬ ರಿಸರ್ಚ್ ಸ್ಕಾಲರ್ ಕೂಡ ಹೌದು.. ಲೈಂಗಿಕ ಕಿರುಕುಳದ ಬಗ್ಗೆ ಜನರಿಗೆ ಅರಿವು ಮೂಡಿಸೋದನ್ನ ನಾನು ಸುಮಾರು 40 ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ..
ಒಂದು ದಿನ ಏನಾಯ್ತು ಅಂದ್ರೆ, ನಾನು ಕುರ್ತಾ ಮತ್ತು ಲೆಗ್ಗಿನ್ಸ್ ಹಾಕಿಕೊಂಡು ಕಣ್ಣಿಗೆ ಸನ್‍ಗ್ಲಾಸ್ ಹಾಕಿ ಥೇಟ್ ಓರ್ವ ಟೀನೇಜ್ ಹುಡ್ಗಿಯಂತೆ ಮುಖವನ್ನ ಫುಲ್ ಸ್ಕಾರ್ಫ್‍ನಲ್ಲಿ ಮುಚ್ಚಿಕೊಂಡು ನನ್ನ ಟೂ ವೀಲರ್‍ನಲ್ಲಿ ಪ್ರಯಾಣ ಬೆಳಸಿದ್ದಾಗ ಅಂದು ಒಂದು ಘಟನೆ ನಡೆಯಿತು.. ಒಂದು 20 ರಿಂದ 30 ವರ್ಷದೊಳಗಿನ ಸುಮಾರು ಆರು ಯುವಕರ ಗುಂಪೊಂದು ಎರಡು ಬೈಕ್‍ನಲ್ಲಿ ನನ್ನ ವಿರುದ್ಧ ದಿಕ್ಕಿನಲ್ಲಿ ಬರ್ತಾ ಇದ್ರು. ನಾನು ಅವರ ಕಡೆ ಹೆಚ್ಚೇನು ಗಮನ ಕೊಡ್ದೆ ನನ್ನ ಪಾಡಿಗೆ ನಾನು ಹೋಗ್ತಾ ಇದ್ದೆ. ಕೆಲ ಹೊತ್ತಿನ ಬಳಿಕ ಆ ಯುವಕರು ನನ್ನನ್ನೇ ಫಾಲೋ ಮಾಡ್ತಾ ಬರ್ತಾ ಇದ್ದದ್ದು ನನ್ನ ಗಮನಕ್ಕೆ ಬಂತು.. ಸ್ವಲ್ಪ ದೂರ ಪ್ರಯಾಣ ಬೆಳೆಸಿದಾಗ ಒಂದು ನಿರ್ಜನ ಪ್ರದೇಶದಲ್ಲಿ ಆ ಆರು ಯುವಕರು ನನ್ನ ನೋಡಿ ಕಮೆಂಟ್ ಮಾಡಲು ಶೂರು ಮಾಡುದ್ರು. ನಾನು ಅದಕ್ಕೇನೂ ತಲೆ ಕೆಡುಸ್ಕೊಳ್ದೇ ಹಾಗೇ ಸುಮ್ಮನೆ ನನ್ನ ಪಾಡಿಗೆ ನಾನು ಸ್ಕೂಟಿಲಿ ತೆರಳ್ತಾ ಇದ್ದೆ. ಆದ್ರೆ ಆ ಯುವಕರು ಬೈಕ್‍ನ್ನು ಜೋರಾಗಿ ಓಡಿಸಿ ಮುಂದೆ ದಾರಿಗೆ ಅಡ್ಡಲಾಗಿ ನಿಂತು ಬಿಟ್ರು. ಅದ್ರಲ್ಲಿ ಒಬ್ಬ ಹುಡುಗ ನನ್ನ ನೋಡಿ ಕಮೆಂಟ್ ಮಾಡ್ತಾ ಇದ್ದ.. ಮತ್ತೊಬ್ಬ ಯುವಕ ನನ್ನ ನೋಡಿ ಹೇ… ಬರ್ತಿಯಾ..? ಎಂದು ನನ್ನ ಬಳಿ ಕೇಳೇ ಬಿಟ್ಟ..! ನನಗೆ ಕೋಪ ನೆತ್ತಿಗೇರಿದ್ದೇ.. ಹಾ..! ನೀವ್ ಕರುದ್ರೆ ನಿಮ್ಮ ತಾಯಿನೂ ಬರ್ತಾರೆ..! ಕರೀಲಾ..? ಎಂದು ತುಂಬ ಖಾರವಾಗಿವೇ ಉತ್ತರ ಕೊಟ್ಟೆ… ಅಲ್ಲಿದ್ದ ಎಲ್ಲಾ ಯುವಕರೂ ಕೆಂಡಾಮಂಡಲರಾಗಿದ್ದಾರು. ಆದ್ರೆ ನಾವು ನಿಂತಿದ್ದ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಬರ್ತಾ ಇರೋದನ್ನ ನೋಡಿದ ಯುವಕರು, ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡುದ್ರು. ಆದ್ರೆ ಪೊಲೀಸಪ್ಪ ಅವರ ಗಾಡಿ ನಂಬರ್ ಎಂಟ್ರಿ ಮಾಡ್ಕೊಂಡು ಹೋದ್ರು. ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..
ಇದೇ ರೀತಿಯಾಗಿ ನನ್ನ ರಿಸರ್ಚ್ ವಿಷಯಕ್ಕೆ ಸಂಬಂದಿಸಿದಂತೆ ಸ್ಟಡಿ ಮಾಡ್ತಾ 2012 ರಲ್ಲಿ ದೆಹಲಿಯಲ್ಲಿ ಹೊರಬಿದ್ದ ಒಂದು ವರಧಿಯ ಪ್ರಕಾರ ಶೇ. 92ರಷ್ಟು ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಧೀರ್ಘ ಕಾಲದಿಂದಲೂ ಲೈಂಗಿಕ ದೌರ್ಜನ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಶೇ. 88ರಷ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನು ನೀಡುತ್ತಿರುವುದು ವರದಿಯಾಗಿದೆ. ಅದರಲ್ಲಿ ಮಹಿಳೆಗೆ ಲೈಂಗಿಕ ಕ್ರೀಯೆಯಲ್ಲಿ ಪಾಲ್ಗೊಳ್ಳುವಂತೆ ಕರೆಯುವುದು, ಅಶ್ಲೀಲವಾಗಿ ನಿಂದನೆ ಮಾಡುವುದು, ಮಹಿಳೆಯರ ಕಡೆ ಶಿಳ್ಳೆ ಹೊಡೆಯುವುದು ಕಮೆಂಟ್ ಮಡೋದು ಇನ್ನಿತ್ಯಾದಿಯಾಗಿ ಮಹಿಳೆಯರ ಮೇಲೆ ಬಹಳ ಕಾಲಗಳಿಂದಲೂ ಈ ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇದೆ.
ಈ ರೀತಿಯ ದುರ್ಘಟನೆಗಳು ಇಂದಿಗೂ ನಡೆಯುತ್ತಲೇ ಇವೆ ಎಂದು ನಾನು ನನ್ನ ಮಗನ ಬಳಿ ಷೇರ್ ಮಾಡ್ತಾ ಇದ್ದೆ.. ಸ್ವಲ್ಪ ದಿನಗಳ ನಂತರ ನನ್ನ ಮಗ ಮತ್ತು ಆತನ ಗೆಳಯರು ಅದರಲ್ಲಿ ಎಲ್ಲರೂ ಟೀನೇಜ್ ಯುವಕರಾಗಿದ್ದು, ಸ್ವಯಂ ಪ್ರೇರಿತವಾಗಿ ನನ್ನ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಮುಂದೆ ಬಂದರು. ನನಗಂತೂ ಆ ಯುವಕರ ಆಸಕ್ತಿ ಕಂಡು ಹೆಮ್ಮೆ ಅನಿಸಿತು ನೋಡಿ.. ಇದು ನನಗೆ ಮುಂದೆ ಇನ್ನೂ ಹೆಚ್ಚಿನದಾಗಿ ಸಶಕ್ತಳಾಗಲು ಸಹಕಾರಿಯಾಯ್ತು.. ಯಾಕೆ ಈ ಸ್ಟೋರಿಯನ್ನು ನಿಮ್ಮ ಮುಂದೆ ಬಿಚ್ಚಿಡ್ತಾ ಇದೀನಿ ಅಂದರೆ ನನ್ನಂತೆ ಅದೆಷ್ಟೋ ಮಹಿಳೆಯರು ನಮ್ಮ ರಾಷ್ಟ್ರದಲ್ಲಿ ಪುರುಷರ ದೌರ್ಜನ್ಯಕ್ಕೆ ಒಳಗಾಗ್ತಾ ಇದ್ದಾರೆ.. ಅದನ್ನು ತಡೆಯಲು ನಿಮ್ಮಂತ ಯುವ ಶಕ್ತಿ ಮುಂದೆ ಬರಬೇಕೆಂಬುದೇ ನನ್ನ ಬಹು ದೊಡ್ಡ ಆಶಯ.
POPULAR STORIES :
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!