ಕಾಮನ್ ಮ್ಯಾನ್ ಅಮಾಂಗ್ ದ ಅನ್ ಕಾಮನೆಸ್ಟ್..!

Date:

ಕಳೆದ ತಿಂಗಳು ಖ್ಯಾತ ಇಂಗ್ಲಿಷ್ ಬರಹಗಾರ ವಿಲಿಯಂ ಶೇಕ್ಸ್ ಪಿಯರ್ ಅವರ ಹುಟ್ಟು ಹಬ್ಬವನ್ನು ವಿಶ್ವದಾದ್ಯಂತ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಪ್ರಸಿದ್ದ ಗೂಗಲ್ ತಾಣವೂ ಇವರಿಗೆ ಡೂಡಲ್ ರಚಿಸಿ `ಸೆಲೆಬ್ರೇಟಿಂಗ್ ಶೇಕ್ಸ್ ಪಿಯರ್’ ಎಂದು ಕ್ರೆಡಿಟ್ಸ್ ನೀಡಿಯೂ ಗೌರವಿಸಿತು. ಎಲ್ಲರಿಗೂ ಸಾಮಾನ್ಯಾಗಿ ತಿಳಿದಂತೆ ಶೇಕ್ಸ್ ಪಿಯರ್ ಕೇವಲ ಬರಹಗಾರನಾಗಿರದೇ ಪ್ರಸಿದ್ದ ನಾಟಕಕಾರನೂ ಹೌದು. ಇವರ ನಾಟಕಗಳನ್ನು ವೀಕ್ಷಿಸಿದ, ಇವರ ಬರಹಗಳನ್ನು ಓದಿದ ಓದುಗರಿಗೆ ಅಬ್ಬಾ ಇವರು ನಿಜವಾಗಿಯೂ ಹೀಗೆಲ್ಲಾ ಬರೆಯಬಹುದೇ ಎಂದು ಪ್ರಶ್ನೆ ಮೂಡುವುದು ಸಹಜ.

ಇಂಗ್ಲೀಷ್ ನಲ್ಲಿ ಒಂದು ಹೇಳಿಕೆಯಿದೆ `ಶೇಕ್ಸ್ಪಿಯರ್ ಇಸ್ ದಿ ಗ್ರೇಟೆಸ್ಟ್ ರೈಟರ್ ಆಫ್ ಆಲ್ ದಿ ಟೈಮ್ಸ್’ ಅಂದರೆ ಎಲ್ಲ ಕಾಲಕ್ಕೂ ಶೇಕ್ಸ್ಪಿಯರ್ ನ ಬಹುದೊಡ್ಡ ಬರಹಗಾರ ಎಂದು. ಹಾಗೆ ಸುಮ್ಮನೇ ಹೇಳುವುದಕ್ಕಿಂತ ನೀವು ಅವರ ಒಂದಾದರೂ ಬರಹ ಓದಲೇ ಬೇಕು. ಅವರು ಮೂಲತಃ ಬರಹಗಾರರು ಎಂದು ಹೇಳುವುದಕ್ಕಿಂತ ಒಳ್ಳೆಯ ನಾಟಕಕಾರರು ಎಂದು ಹೇಳಿದರೆ ತಪ್ಪಾಗಲಾರದು. ಅವರು ಮರೆಯಾಗಿ ಸುಮಾರು 400 ವರ್ಷಗಳಾದರೂ ಇಂದಿಗೂ ವಿಶ್ವದಾತ್ಯಂತ ಅವರ ನಾಟಕಗಳು ಅಲ್ಲಲ್ಲಿ ಹೌಸ್ ಫುಲ್ ಶೋಗಳು ಕಾಣುತ್ತವೆ ಎಂದರೆ ನೀವೇ ಅವರ ವ್ಯಕ್ತಿತ್ವದ ಬಗ್ಗೆ ಊಹಿಸಿಕೊಳ್ಳಿ.
ಪ್ರೇಮದ ಪಾಶದಲ್ಲಿ ಸಿಲುಕಿದವರಿಗೆ, ಪ್ರೀತಿಯಲ್ಲಿ ತೇಲಾಡಿಸುವುದಲ್ಲದೇ, ಪ್ರೇಮ ವೈಫಲ್ಯದಿಂದ ತುತ್ತಾಗಿ ಜಗತ್ತೇ ಮುಳುಗಿ ಹೋಗಿದೆ, ಎಲ್ಲವನ್ನು ಕಳೆದುಕೊಂಡಿದ್ದೇನೆ ಎಂಬುವವರಿಗೆ ಇವರ ಬರಹಗಳು ಉತ್ತಮವಾದ ಟಾನಿಕ್ ಎಂದರೆ ತಪ್ಪಾಗುವುದಿಲ್ಲ. ಎರಡರಲ್ಲೂ ಮುದ ನೀಡುವ, ನೋವನ್ನು ಮರೆಸುವ ತಂತ್ರಗಾರಿಕೆ ಇವರ ಬರಹದಲ್ಲಿ ಅಡಗಿವೆ.
ಯಾವ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು, ಯಾರ ಮನವನ್ನೂ ನೋಯಿಸದೇ ಹೇಗೆ ಹೀಯಾಳಿಸಬೇಕು, ಕಷ್ಟದ ಸಂದರ್ಭದಲ್ಲೂ ಹೇಗೆ ನಗುತ್ತಿರಬೇಕು ಎಂಬ ಕಲೆಯನ್ನು ಕಲಿತುಕೊಳ್ಳಲು ನೀವೊಮ್ಮೆ ಶೇಕ್ಸ್ ಪಿಯರ್ ನ ಬರಹಗಳು ಓದಲೇ ಬೇಕು.
ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕಂದರೆ ಕೇವಲ ಓದು- ಬರಹದಿಂದ ಮಾತ್ರವಲ್ಲ ಉತ್ತಮ ಕಲೆಯಿದ್ದರೆ ಸಾಕು ಎಂಬುದಕ್ಕೆ ಶೇಕ್ಸ್ ಪಿಯರ್ ಸಾಕ್ಷಿ. ಇಷ್ಟೊಂದು ಬರಹಗಳನ್ನು ಬರೆದಿರುವುದಕ್ಕೆ ಇವರು ದೊಡ್ಡ ಮೇಧಾವಿ, ಅಥವಾ ಪಂಡಿತರಾಗಿರಲಿಲ್ಲ. ಈಗಿನಂತೆ ಎಲ್ಲ ಸೌಲಭ್ಯಗಳನ್ನು ದೊರಕುವ ಮಾದರಿ ಶಾಲೆ- ಕಾಲೇಜುಗಳಿಗೆ ಅವರು ಹೋದವರಲ್ಲ. ಹಾಗೆಯೇ ಅವರು ಬರೆದಿದ್ದೆಲ್ಲಾ ಪಬ್ಲಿಷ್ ಮಾಡಿಸುವುದಕ್ಕೆ ದೊಡ್ಡ ಶ್ರೀಮಂತರೂ ಆಗಿರಲಿಲ್ಲ. ಬದಲಾಗಿ ಇವರೊಬ್ಬ `ಜಸ್ಟ್ ಕಾಮನ್ ಮ್ಯಾನ್’ ಆಗಿದ್ದರು.
`ಶೇಕ್ಸ್ ಪಿಯರ್ ಇಸ್ ಎ ಕಾಮನ್ ಅಮೊಂಗ್ ಅನ್ ಕಾಮನ್ ಮೆನ್’ ( ಅಸಾಮಾನ್ಯ ಜನರಲ್ಲಿ ಶೇಕ್ಸ್ ಪಿಯರ್ ಒಬ್ಬ ಸಾಮಾನ್ಯ ಮನುಷ್ಯ) ಎಂದು ಯಾರೋ ಇವರನ್ನು ಸಂಬೋಧಿಸಿದ್ದರು. ಅದು ನಿಜವೂ ಹೌದು. ಬಡತನದ ಬೇಗೆ, ಸಂಸಾರದ ನೊಗ, ಒಪ್ಪತ್ತಿನ ಊಟಕ್ಕೂ ಪರದಾಟ, ದೊಡ್ಡ ಸಂಸಾರ, ಕೈಕೊಟ್ಟ ಪ್ರಿಯತಮೆ.. ಒಂದೇ ಎರಡೇ?? ಸಮಸ್ಯೆಗಳ ಸಾಲು ಸಾಲು.. ಈ ಸಮಸ್ಯೆಗಳು ಬೇರ್ಯಾವ ವ್ಯಕ್ತಿಗಳಿದ್ದರೆ, ಬಹುಶಃ ತಡೆದುಕೊಳ್ಳುತ್ತಿರಲಿಲ್ಲವೇನೋ.
ಸ್ವಂತ ಗೆಳೆಯನೇ ಇವರ ಪ್ರಿಯತಮೆಯನ್ನು ಓಡಿಸಿಕೊಂಡು ಹೋದಾಗ ಇವರು ಅವರಿಬ್ಬರನ್ನೂ ಒಂಚೂರು ದೂಷಿಸದೇ ಬದಲಾಗಿ ಇವರ ಕೈಚೆಳಕದಲ್ಲಿ ಬರೆದಿರುವ ಸಾನೆಟ್ ಇದೆಯಲ್ಲಾ ವಾವ್! ಇಂದಿಗೂ ಹಚ್ಚ ಹಸಿರಾಗಿಯೇ ಇದೆ. ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವೂ ಕಾಲಿಕ ಆದರೆ, ಶೇಕ್ಸ್ ಪಿಯರ್ ಬರೆದಿದ್ದು ಮಾತ್ರ ಅಕಾಲಿಕ’ ಎಂಬ ಹೇಳಿಕೆ ಮಾತ್ರ ಅಕ್ಷರಕ್ಷಃ ಸತ್ಯ. ಒಂದೊತ್ತಿನ ಊಟಕ್ಕಾಗಿ ನಾಟಕ ಕಂಪನಿಯನ್ನು ಸೇರಿದ ಇವರಿಗೆ ಅದೇ ಕ್ಷೇತ್ರ ಇಷ್ಟೊಂದು ಮುಂದುವರೆಸುತ್ತದೆ ಎಂದು ಅವರು ಜೀವಮಾನದಲ್ಲೂ ಅಂದುಕೊಂಡಿರಲಿಲ್ಲ. ಅಂತಹ ಅಪೇಕ್ಷೆಯನ್ನಿಟ್ಟುಕೊಂಡಿದ್ದರೆ ಇಂತಹ ದೊಡ್ಡ ವ್ಯಕ್ತಿಯಾಗುವುದ್ಕೆ ಸಾಧ್ಯವೇ ಇರುತ್ತಿರಲಿಲ್ಲವೇನೋ. ವಿಶೇಷವೇನಂದರೆ ಇವರು ಒಟ್ಟು 37 ನಾಟಕಗಳು, 154 ಸಾನೆಟ್ ಗಳು ಹಾಗೂ 5 ಪದ್ಯಗಳನ್ನು ಬರೆದರೂ, ವಿಶ್ವದಲ್ಲಿ ಕೆಲ ಗುಂಪಿನವರು ಶೇಕ್ಸ್ ಪಿಯರ್ ಎಂಬ ಅಶಿಕ್ಷಿತ ವ್ಯಕ್ತಿ ಇಷ್ಟೊಂದು ಗಮನಾರ್ಹ ಮಟ್ಟದಲ್ಲಿ ಸಾಧನೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅದೆಷ್ಟೋ ಜನ ಪಿ.ಎಚ್.ಡಿ ಪದವಿಯನ್ನೂ ಪಡೆದವರಿದ್ದಾರೆ. ಇವರನ್ನು ವಿರೋಧಿಸಿರುವ ಗುಂಪಿಗೆ `ಆ್ಯಂಟಿ ಸ್ಟಾಫೋರ್ಡಿಯನ್ಸ್’ ಎಂದು ಹೆಸರಿಸಲಾಗಿದೆ.
ಶೇಕ್ಸ್ ಪಿಯರ್ ವಾಸ್ ಬಾರ್ನ್ `ಅಪಾನ್ ಸ್ಟಾಫೋರ್ಡ್ ಅಪಾನ್ ಎವನ್’ ಎಂಬ ವಾಕ್ಯ ಇಂದಿಗೂ ಪ್ರಾಥಮಿಕ ಇಂಗ್ಲೀಷ್ ಕಾನ್ವೆಂಟ್ ನ ವಿದ್ಯಾರ್ಥಿಗಳಲ್ಲಿ ಗುನುಗುತ್ತಿರುತ್ತದೆ. ಈಗಿನ ಇಂಟರ್ ನ್ಯಾಷನಲ್ ಮಕ್ಕಳಿಗೆ ಶೇಕ್ಸ್ ಪಿಯರ್ ಎಲ್ಲಿ ಹುಟ್ಟಿದ ಎಂದು ಕೇಳಿ ನೋಡಿ ತಟ್ಟಂತ ಹೀ ವಾಸ್ ಬಾರ್ನ್ ಆನ್ ಸ್ಟಾಫೋರ್ಡ್ ಅಪಾನ್ ಎವನ್ ಎಂದು ತಟ್ಟಂಥ ಹೇಳುತ್ತಾರೆ. ಪಾಪ ಅವರಿಗೆ ಈ ಅರ್ಥ ತಿಳಿದಿದೆಯೂ ಇಲ್ಲವೋ ಗೊತ್ತಿಲ್ಲ ಆದರೆ, ಪರೀಕ್ಷೆಯಲ್ಲಿ ಪಾಸಾಗಲು ಈ ವಾಕ್ಯವನ್ನು ಅವರು ಕರಗತ ಮಾಡಿಕೊಂಡಿರಲೇ ಬೇಕು.
ಇತಿಹಾಸವನ್ನು ತಿರುಚಿ ನೋಡಿದಾಗ ಅಥವಾ ವಿಲಿಯಂ ಶೇಕ್ಸ್ ಪಿಯರ್ ಎಂದು ಗೂಗಲ್ ಮಾಡಿ ನೋಡಿದಾಗ ಅವರ ಕುರಿತಾದ ನೂರಾರು ಪುಟಗಳು ಕಂಪ್ಯೂಟರ್ ಪರದೆ ಮೇಲಿರುತ್ತವೆ. ಶೇಕ್ಸ್ ಪಿಯರ್ ಸ್ ಬಾರ್ನ್ ಆನ್ ಏಪ್ರಿಲ್ 1564 ಎಂದು ಮಾಹಿತಿ ನಮಗೆ ದೊರಕುತ್ತದೆ. ಇಷ್ಟಾದರೂ ಕೆಲವರಿಗೆ ಇವರ ಅಸ್ಥಿತ್ವ, ಇವರ ಬರಹದ ಮೇಲೆ ಅಸಮಾಧಾನ. ಇವರು ನೀಡಿದಂತಹ ಜಸ್ಟಿಫಿಕೇಶನ್ ಗಳನ್ನು ನಾವು ಓದಿ ಬಿಟ್ಟರಂತೂ ಅಬ್ಬಬ್ಬಾ ನಮಗೆ ಒಂದೊಂದು ಬಾರಿ ತಲೆ ಕೆಟ್ಟು ಹೋಗಿ ಬಿಡುತ್ತದೆ. ಶೇಕ್ಸ್ ಪಿಯರ್ ನ ಬರಹಗಳು ನಿಜವಾಗಿಯೂ ವಿಲಿಯಂ ಶೇಕ್ಸಪಿಯರ್ ಮಾತ್ರ ಬರೆಯುವುದಕ್ಕೆ ಸಾಧ್ಯ ಎಂದು ವಿಶ್ವದ ಪ್ರಸಿದ್ದ ವಿಶ್ವವಿದ್ಯಾಲಯ ಆಕ್ಸ್ ಫಾರ್ಡ್ ಯೂನಿವರ್ಸಿಟಿ ಹೇಳಿಕೆಯನ್ನು ನೀಡಿದರೂ ಅದನ್ನು ನಂಬದ ವಿಶ್ವದಲ್ಲಿ ಅದೆಷ್ಟೋ ಸಂಖ್ಯೆಯ ಜನರಿದ್ದಾರೆ ಎಂದರೆ ನೀವು ನಂಬಲೇ ಬೇಕು. ಶೇಕ್ಸ್ ಪಿಯರ್ ಅನ್ನು ವಿರೋಧಿಸುವುದಕ್ಕೆ ಕೆಲವು ನಿರ್ದಿಷ್ಟವಾದ ಕಾರಣಗಳೂ ಇವೆ. ಅವುಗಳಲ್ಲಿ ನಾಲ್ಕು ಪ್ರಮುಖವಾದದ್ದು. ಅವುಗಳು ಇಂತಿವೆ.
1. ಒಬ್ಬ ವ್ಯಕ್ತಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಯಾವ ಶಿಕ್ಷಣವನ್ನೂ ಪಡೆಯದೇ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಪರಿಣಿತಿ ಪಡೆಯಲು, ಭಾಷೆಯಲ್ಲಿ ಅಷ್ಟೊಂದು ಹಿಡಿತ ಸಾಧಿಸಲು ಸಾಧ್ಯವಿಲ್ಲ.
2. ಅಷ್ಟೊಂದು ಸಂಖ್ಯೆಯ ನಾಟಕ, ಕವಿತೆ ಹಾಗೂ ಸಾನೆಟ್ ಗಳನ್ನು ಬರೆಯುವುದಕ್ಕೆ ಒಬ್ಬ ವ್ಯಕ್ತಿಯಿಂದ ಬರೆಯಲು ಅಸಾಧ್ಯ.
3. ಭಾಷಾವಾರು ಹಾಗೂ ರಚನಾತ್ಮಕವಾಗಿ ಗಮನಿಸಿದಾಗ ಅವನು ಬರೆದಂತಹ ಭಾಷೆಗೂ (ಶಬ್ಧ ಭಂಡಾರ ಅಥವಾ ಲೆಕ್ಸಿಕಾನ್) ಮತ್ತು ಬೆರವಣಿಗೆ ಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿಯವರೆಗೂ ಶೇಕ್ಸ್ ಪಿಯರ್ ಹೊರತಾಗಿ ಇವರೆಡರಲ್ಲೂ ವಿಭಿನ್ನ ಶೈಲಿಯಲ್ಲಿ ಬರೆದಂತಹ ಯಾವ ವ್ಯಕ್ತಿಯೂ ಇಲ್ಲಿಯವರೆಗೆ ಅದನ್ನು ಪ್ರಯೋಗಿಸಲು ಸಾಧ್ಯವಾಗಿಲ್ಲ.
4. ಇವರ ಕಾಲದಲ್ಲಿದ್ದ ಯಾವ ಗಾಯಕ ಅಥವಾ ಕವಿಯೂ ಇವರ ಹೆಸರನ್ನು ಸಂಬೋಧಿಸಿಲ್ಲ. ಹೀಗಾಗಿ ಇವರು ನಿಜವಾಗಿಯೂ ಇದ್ದರೆಂದು ಯಾವ ಪುರಾವೆಯೂ ಇಲ್ಲ ಎಂದು ವಾದಿಸುತ್ತಾರೆ.
ಇವೆಲ್ಲವೂ ಪ್ರಮುಖ ಕಾರಣವಾದರೆ, ಇನ್ನೊಂದು ಗಮನಿಸುವ ಅಂಶವೂ ವಿಕಿಪಿಡಿಯಾದಲ್ಲಿ ದೊರಕುತ್ತದೆ. ಶೇಕ್ಸ್ ಪಿಯರ್ ಬರೆದಂತಹ ಪ್ರತಿಯೊಂದು ಬರಹದಲ್ಲೂ ಅವನ ಹೆಸರು ಪೂರ್ಣವಾಗಿ ಬರೆದೇ ಇಲ್ಲ. ಇವನ ಪೂರ್ಣ ಹೆಸರು ವಿಲಿಯಂ ಶೇಕ್ಸ್ ಪಿಯರ್ ಎಂಬಂತಾಗಿದ್ದಲ್ಲಿ, ಒಮ್ಮೆಯಾದರೂ ವಿಲಿಯಂ ಶೇಕ್ಸ್ ಪಿಯರ್ ಎಂದು ಸಂಬೋಧಿಸಬಹುದಾಗಿತ್ತು. ಆದರೆ, ಅದು ಎಲ್ಲಿಯೂ ಕಾಣಸಿಗುವುದಿಲ್ಲ. ಇನ್ನೊಂದು ಅಂಶವೂ ಕೆಲವರು ಗುರುತಿಸಿದ್ದಾರೆ. ಇವನ ಹೆಸರು ವಿಲಿಯಂ ಆಗಿದ್ದಲ್ಲಿ ಹಾಗೂ ಅಡ್ಡ ಹೆಸರು ಅಥವಾ ಕುಟುಂಬದ ಹೆಸರು ಶೇಕ್ಸ್ ಪಿಯರ್ ಆಗಿದ್ದೇ ನಿಜವಾಗಿದಲ್ಲಿ ಇವನು ಸಹಿ ಮಾಡುವ ಪ್ರತಿಯೊಂದರಲ್ಲೂ ಒಂದೇ ತರೆನಾಗಿರಬೇಕಿತ್ತು. ಆದರೆ ಹಾಗಾಗಿರದೇ ಕೆಲವೊಮ್ಮೆ ನಿಜವಾದ ಶೇಕ್ಸ್ಪಿಯರ್ ಎಂದು ಸಂಬೋಧಿಸಿದರೆ, ಕೆಲವೊಂದು ಕಡೆ ಶೇಕ್- ಸ್ಪಿಯರ್, ಶಾಕ್-ಸ್ಪಿಯರ್ ಎಂದು ಕೈ ಬರಹದಲ್ಲಿ ಸಹಿ ಹಾಕಿರುವುದು ಗೊತ್ತಾಗುತ್ತದೆ.
ಇವರು ನಿಜವಾಗಿಯೂ ಇಲ್ಲ ಎಂದ ಮೇಲೆ ಇವರ ಹೆಸರನ್ನು ಸಂಬೋಧಿಸಿ ಅಷ್ಟೊಂದ ಸಂಖ್ಯೆಯ ಅದೂ ಒಂದೇ ಹೆಸರಿನಲ್ಲಿ ಬರೆಯುವುದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಓದುಗರಲ್ಲಿ ಕಾಡದೆ ಇರದು. ಆದರೆ ಅದಕ್ಕೂ ಆ್ಯಂಟಿ ಸ್ಟಾಫೋರ್ಡಿಯನ್ಸ್ ಉತ್ತರವನ್ನು ನೀಡಿದ್ದು, ಇವನ ಹೆಸರಿನಲ್ಲ ಇಂಗ್ಲೆಂಡಿನ ಮೊದಲನೇ ಎಲಿಜಬೆತ್ ರಾಣಿ (ಎಲಿಜಬೆತ್ ಕ್ವೀನ್ -1), 17ನೇ ಅರ್ಲ್ ಆಫ್ ಆಕ್ಸ್ ಫಾರ್ಡ್, ಎಡ್ವರ್ಡ್ ಡಿ ವಿರೆ ಹಾಗೂ ಫ್ರಾನ್ಸಿಸ್ ಬೆಕಾನ್ ಬರೆದಿರಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಆ್ಯಂಟಿ ಸ್ಟಾಫೋರ್ಡಿಯನ್ಸ್ ಈ ಮೇಲಿನ ನಾಲ್ಕು ವ್ಯಕ್ತಿಗಳನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುವುದಕ್ಕೂ ನಿರ್ದಿಷ್ಟವಾದ ಉತ್ತರವಿದ್ದು, ಅದಕ್ಕೆ ಹೋಲಿಕೆಯಾಗುವಂತಹ ಸಾಕ್ಷಿಗಳನ್ನು ಕೊಟ್ಟಿದ್ದಾರೆ. ಆದರೆ, ನೆನಪಿರಲಿ ಇಲ್ಲಿಯವರೆಗೂ ಈ ಸಾಕ್ಷಿಗಳು ನಿಜ ಎಂದು ಹೇಳುವುದಕ್ಕೆ ಯಾರಿಗೂ ಸಾಧ್ಯವಾಗಿಲ್ಲ.
ಇನ್ನು ವಿರೋಧಿಗಳು ಇದ್ದ ಮೇಲೆ ಅವನ ಬೆಂಬಲಿಗರೂ ಇರಬೇಕಲ್ವಾ? ಹೌದು ಇವರ ವಿರೋಧಿಗಳನ್ನು ವಿರೋಧಿಸುವವರೂ ಕೋಟ್ಯಾನುಗಟ್ಟಲೇ ಜನರಿದ್ದಾರೆ. ಇವರಿಗೆ ಶೇಕ್ಸ್ ಪಿಯರ್ ಒಬ್ಬ ಆರಾಧ್ಯ ಧೈವ, ಬರೆಯುವವರಿಗೆ ಸ್ಪೂರ್ತಿಗಾರ, ಪ್ರೇಮಿಗಳಿಗೆ ಹೃದಯವಂತ, ನಾಟಕಗಾರರಿಗೆ ರೋಲ್ ಮಾಡೆಲ್..
ಇಷ್ಟೆಲ್ಲಾ ವಾದ ವಿವಾದಗಳಿದ್ದರೂ ಅವನ ಹೆಸರಿನ ಬರಹಗಳು ಮಾತ್ರ ಅಜರಾಮರ. ಇವನು ಇವನಾಗಿದ್ದನೋ ಇಲ್ಲವೋ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇವನೇ ಅವನು ಅವನೇ ಇವನು ಎಂಬ ಭಾವನೆಯಿಂದ ಓದಿದರೆ ಇವನ ಬರಹಗಳು ಅದ್ಭುತವೆನಿಸುತ್ತವೆ ಎಂದು ನನ್ನ ಅನಿಸಿಕೆ. ಇದನ್ನು ಮುಗಿಸುವುದಕ್ಕೂ ಮುನ್ನ ಚಾರ್ಲಿ ಚಾಪ್ಲಿನ್ ಹೇಳಿದ ನೆನಪಾಯಿತು.
` ನಾನು ಶೇಕ್ಸ್ ಪಿಯರ್ ಬರಹಗಳನ್ನು ಯಾರು ನಿಜವಾಗಿಯೂ ಬರೆದಿದ್ದಾರೆ ಎಂಬುದರ
ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ನಾನು ಒಬ್ಬ ಸ್ಟಾರ್ಟ್ ಫಾರ್ಡ್ ನ ಸಾಮಾನ್ಯ ಬಾಲಕ ಬರೆದಿದ್ದಾನೆ ಎಂದು
ನಂಬುತ್ತೇನೆ. ಅದನ್ನು ಯಾರಾದರೂ ಬರೆದಿರಲಿ, ಆದರೆ, ಬರೆದವರು ಮಾತ್ರ ಒಬ್ಬ ನಿಜವಾದ ಮೇಧಾವಿಗಳು’

  • ವಿಶ್ವನಾಥ್ ಶೇರಿಕಾರ್.

POPULAR  STORIES :

ಹೆಚ್ ಎಂ ರೇವಣ್ಣನಿಗೆ ಹತ್ತು ಕೋಟಿ ಕೇಳ್ದಾ..!? ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿದ್ದು ಯಾರು..!?

ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?

6-5=2 ಚಿತ್ರತಂಡದಿಂದ ಮತ್ತೊಂದು ಪ್ರಯತ್ನ, ಕನ್ನಡದ ಬಹುನಿರೀಕ್ಷಿತ ಹಾರರ್ ಥ್ರಿಲ್ಲರ್ ಮೂವಿ.

ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!

ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!

ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!

ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?

ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...