ಶೇನ್ ವಾರ್ನ್, ವಿಶ್ವಶ್ರೇಷ್ಠ ಬ್ಯಾಟ್ಸಮನ್ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ..! ಕ್ರಿಕೆಟ್ ಮತ್ತು ಕ್ರಿಕೆಟಿನಿಂದಾಚೆಗೂ ಒಂದಲ್ಲ ಒಂದು ರೀತಿಯ ವಿವಾದಿತ ಸುದ್ದಿಯಲ್ಲೇ ಇರೋ ಈ ಮಾಜಿ ಕ್ರಿಕೆಟಿಗ ಈಗ ಹಾವು ಕಚ್ಚಿಸಿಕೊಂಡು ಸುದ್ದಿಯಾಗಿದ್ದಾರೆ..! ಅವರಿಗೆ ಕಚ್ಚಿರೋದು ಅಂತಿಂತ ಹಾವಲ್ಲ `ಅನಕೊಂಡ ಹಾವು’..!
ಕ್ರಿಕೆಟ್ ನಿಂದ ನಿವೃತ್ತರಾಗಿರೋ ವಾರ್ನ್ ಹಾವಿನೊಂದಿಗೆ ಆಟ ಆಡೋಕೆ ಹೋಗಿದ್ದೇ ಈ ಘಟನೆಗೆ ಕಾರಣ..!
`ಐ ಆಮ್ ಸೆಲೆಬ್ರಿಟಿ.. ಗೆಟ್ ಮಿ ಔಟ್ ಆಫ್ ಹಿಯರ್’ ಅನ್ನೋ ರಿಯಾಲಿಟಿ ಶೋ ಸಂದರ್ಭದಲ್ಲಿ ಟಾಸ್ಕ್ ವೊಂದರಲ್ಲಿ ತನ್ನ ದೈರ್ಯ, ಎದೆಗಾರಿಕೆಯನ್ನು ತೋರಿಸೋಕೆ ಹೋದ ವಾನರ್್ ಗೆ ಈ ಅವಘಡ ಸಂಭವಿಸಿದೆ..!
ದ.ಆಫ್ರಿಕಾದ ದಟ್ಟ ಕಾಡುಗಳ ಮದ್ಯದಲ್ಲಿ ನಡೆಯುತ್ತಿರೋ ರಿಯಾಟಿ ಶೋ ನೇ ಈ `ಐ ಆಮ್ ಸೆಲಬ್ರಿಟಿ….’ಇದರಲ್ಲಿ ಒಂದು ಟಾಸ್ಕ್ ಇದೆ, `ಟಕ್ಕರ್ ಟ್ರಯಲ್’ ಅಂತ..! ಈ ಟಾಸ್ಕ್ ಹೇಗಂದ್ರೆ.. ಚೇಳುಗಳು, ಮೊನೆಯುಗುರುಳ್ಳ, ಮಡ್ಗಾಸ್ಕರ್ನ ಹೆದರಿಕೆ ಹುಟ್ಟಿಸುವಂಥಾ ಭಯಾನಕ ಜಿರಲೆಗಳು ಮತ್ತು ಇಲಿಗಳಿದ್ದ ಬಾಕ್ಸ್ ನಲ್ಲಿ ತಲೆ ಇಟ್ಟು ದೈರ್ಯ ಪ್ರದರ್ಶನ ಮಾಡುವುದು..! ಈ ಬಾಕ್ಸೊಳಗೆ ತಲೆ ಇಟ್ಟು ಅಲ್ಲಿದ್ದ ಸ್ಟಾರ್ಗಳನ್ನು ಬಾಯಿಯಿಂದ ಹೊರ ತೆಗೆಯ ಬೇಕು, ದೈರ್ಯದಿಂದ ಮುಂದೆ ಬಂದು ಅದನ್ನು ತೆಗೆದರೆ, ಎಷ್ಟು ಸ್ಟಾರ್ ಗಳನ್ನು ತೆಗೀತಾರ ಆ ಲೆಕ್ಕದಲ್ಲಿ ಜೊತೆಯ ಸ್ಪರ್ಧಿಗಳಿಗೆ ತಿನ್ನಲು ಆಹಾರ ಕೊಡ್ತಾರೆ..!
ಈ ಟಾಸ್ಕ್ ನಲ್ಲಿ ಭಾಗವಹಿಸಿದ ವಾರ್ನ್, ಇಲಿಗಳ ಪೆಟ್ಟಿಗೆಯಲ್ಲಿ ತಲೆಇಟ್ಟು ತನ್ನ ದೈರ್ಯ ಪ್ರದರ್ಶಿಸುವುದರಲ್ಲಿ ಯಶಸ್ವಿಯಾಗಿದ್ರು..! ಅದಾದ ಕೂಡಲೇ `ಅನಕೊಂಡ’ ಹಾವುಗಳಿದ್ದ ಪೆಟ್ಟಿಗೆಗೆ ತಲೆ ಇಟ್ಟಿದ್ದಾರೆ..! ಇಲಿ ವಾಸನೆಯನ್ನು ಗ್ರಹಿಸಿದ ಹಾವುಗಳು ಓಹೋ.. ತಮ್ಮ ಆಹಾರ ಬಂದಿದೆ ಅಂತ ತಿಳಿದು ವಾರ್ನ್ ತಲೆಗೆ ಕಚ್ಚಿದೆ..! ಪುಣ್ಯಕ್ಕೆ ಹಾವುಗಳ ಹಲ್ಲುಗಳನ್ನು ತೆಗದೆದಿದ್ದರಿಂದ ವಾರ್ನ್ ಪ್ರಾಣಾಪಯದಿಂದ ಪಾರಾಗಿದ್ದಾರೆ..! ತಕ್ಷಣ ಚಿಕಿತ್ಸೆ ನೀಡಲಾಗಿ, ಚಿಕಿತ್ಸೆಯ ಬಳಿಕ ಮತ್ತೆ ಟಾಸ್ಕ್ನಲ್ಲಿ ಭಾಗವಹಿಸಿದ್ದಾರಂತೆ..
https://www.youtube.com/watch?v=leqz8kfs7IE
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಸೇನೆಗೆ ಸೇರಲು ಕನ್ನಡ ಯುವಕರ ದಂಡು ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆ..!
ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!