ಸಿನಿಮಾದಲ್ಲಿ ನಟಿಸಲು ಅವಕಾಶ ಇಲ್ಲದೆ ಊಬರ್ ಕ್ಯಾಬ್ ಓಡಿಸುತ್ತಿರುವ ಹಿರಿಯ ನಟ ಕೆ.ಎಸ್ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರ ನೆರವಿಗೆ ಮುಂದಾಗಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಶಂಕರ್ ಅವರು ಕ್ಯಾಬ್ ಅವರು ಕ್ಯಾಬ್ ಡ್ರೈವರ್ ಆಗಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡ ಸಿನಿಮಾ ರಂಗದ ಕೆಲವರು ಸಹಾಯ ಮಾಡಿದ್ದಾರೆ. ಈಗ ದರ್ಶನ್ ಪರೋಕ್ಷವಾಗಿ ಶಂಕರ್ ಅಶ್ವಥ್ ಅವರ ಸಹಾಯಕ್ಕೆ ಬಂದಿದ್ದಾರೆ.
ಹೌದು ದರ್ಶನ್ ತಮ್ಮ ಮುಂದಿನ ಚಿತ್ರ ‘ಯಜಮಾನ’ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೆ ಅವಕಾಶ ನೀಡುವಂತೆ ಚಿತ್ರತಂಡದವರಿಗೆ ಹೇಳಿದ್ದಾರೆ. ಇದೇ ಮೊಟ್ಟಮೊದಲ ಬಾರಿಗೆ ದರ್ಶನ್ ಮತ್ತು ಶಂಕರ್ ಅಶ್ವಥ್ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ.
ಯಜಮಾನ ಚಿತ್ರದಲ್ಲಿ ನನಗೆ ಅವಕಾಶ ನೀಡುವಂತೆ ದರ್ಶನ್ ಚಿತ್ರತಂಡಕ್ಕೆ ಹೇಳಿದ್ದಾರೆ ಎಂದು ಸ್ವತಃ ಶಂಕರ್ ಅಶ್ವಥ್ ಅವರು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.