ತನ್ನ ನಟನೆಯ ಮೂಲಕ, ತನ್ನ ಪಂಚಿಂಗ್ ಡೈಲಾಗ್ ಮೂಲಕ ಕಾಮಿಡಿಯಲ್ಲಿ ಕಮಾಲ್ ಮಾಡೋ ನಾಯಕ ನಟನಾಗಿ ಬೆಳೆದು ಬಿಟ್ಟಿದ್ದಾರೆ ಶರಣ್..
ಸದ್ಯಕ್ಕೆ ಈ ಹಾಸ್ಯ ಸಾಮ್ರಾಟ ನಿರ್ಮಾಪಕರ ಪಾಲಿನ ಕೊಬ್ಬರಿ ಮೀಠಾಯಿ ಆಗಿ ಬಿಟ್ಟಿದ್ದಾರೆ.. ಯಾಕಂದ್ರೆ ನಿರ್ದೇಶಕರಗಳು ಈತನಿಗೆ ಸಿನಿಮಾ ಮಾಡೋಕೆ ಮುಂದಾದ್ರೆ, ಪ್ರೊಡ್ಯುಸರ್‍ಗಳು ನಾ ಮುಂದು ಅಂತ ಹಣ ಹಾಕೋಕೆ ಸಿದ್ಧವಾಗಿದ್ದಾರೆ.. ಇದಕ್ಕೆ ಕಾರಣ ಶರಣ್ ಅನ್ನೋ ಈ ನಟಿಗಿರೋ ಫೇಸ್‍ವ್ಯಾಲ್ಯು ಹಾಗೆ ಬ್ಯಾಕ್ಸ್ ಆಫೀಸ್‍ನಲ್ಲಿ ಈತನ ಚಿತ್ರಗಳ ಅಬ್ಬರ..
ಸದ್ಯಕ್ಕೆ ಶರಣ್‍ಗೆ ಯಾರಾದ್ರು ಚಿತ್ರ ಮಾಡೋಕೆ ಹೋದ್ರೆ ಕಡಿಮೆ ಅಂದ್ರು ಒಂದುವರೆಯಿಂದ ಎರಡು ವರ್ಷ ಡೇಟ್‍ಗಳು ಸಿಗದೆ ಹೋಗಬಹುದು.. ಇದಕ್ಕೆ ಕಾರಣವಾಗಿರೋದು ಶರಣ್ ಕೈಲಿರೋ ಚಿತ್ರಗಳ ಆಫರ್.. ಹೌದು ಶರಣ್ ಸದ್ಯಕ್ಕೆ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಿಗೆ ಸೈನ್ ಮಾಡ್ತಿದ್ಧಾರೆ.. ಅರ್ಥತ್ ಸೈನ್ ಮಾಡುವಂತೆ ಮಾಡೋ ಕಥೆಗಳೆ ಈ ನಟಿಗೆ ಒಲಿದು ಬರ್ತಿವೆ..
ಸದ್ಯಕ್ಕೆ ಮೊದಲನೆಯದಾಗಿ ನಟರಾಜ್ ಸರ್ವೀಸ್ ಮೂಲಕ ಶರಣ್ ಕಮಾಲ್ ಮಾಡೋಕೆ ಬರ್ತಿರೋದು ನಿಮಗೆ ಗೊತ್ತಿದೆ.. ಇನ್ನೇನು ಸಿನಿಮಾ ಮುಂದಿನ ತಿಂಗಳಲ್ಲಿ ನಿಮಗೆ ನೋಡೋಕೆ ಸಿಗಲಿದೆ.. ಇದಾದ ಮೇಲೆ ರಾಜ್ ವಿಷ್ಣು ಕೂಡ ಚಿತ್ರೀಕರಣ ಹಂತದಲ್ಲಿದ್ದು ಈ ಚಿತ್ರ ಈ ವರ್ಷಾಂತ್ಯಕ್ಕೆ ಬಿಡುಗಡೆಗೊಳ್ಳಲಿದೆ..
ರಾಜ್‍ವಿಷ್ಣು ಸಿನಿಮವಾದ ಬಳಿಕ ಸತ್ಯ ಹರಿಶ್ಚಂದ್ರ ಆಗೋಕೆ ಹೊರಟಿದ್ದಾರೆ ಈ ಅಧ್ಯಕ್ಷ.. ಈ ಸಿನಿಮಾವನ್ನ ದಯಾಳ ನಿರ್ದೇಶನ ಮಾಡಲಿದ್ದಾರೆ ಅಂತಾ ಈ ಹಿಂದೆಯೆ ಹೇಳಿದ್ದಿವಿ.. ಇದ್ರ ಜೊತೆಗೆ ತಮಿಳಿನ ಸಿನಿಮಾವಾದ `ನಾನುಂ ರೌಡಿಧಾನ್’ ರಿಮೇಕ್‍ನಲ್ಲಿ ಶರಣ್ ಕಾಣಿಸಿಕೊಳ್ಳಲಿದ್ದಾರೆ.. ಇದು ಗಾಸಿಪ್ ಅಂತು ಅಲ್ವೆ ಅಲ್ಲ.. ಯಾಕಂದ್ರೆ ಈ ಸಿನಿಮಾವನ್ನ ಪಿ.ಸಿ ಶೇಖರ್ ಡೈರೆಕ್ಟ್ ಮಾಡಲಿದ್ಧಾರೆ..
ಇಷ್ಟಕ್ಕೆ ಮುಗಿಯೋದಿಲ್ಲ ಶರಣ್ ಮೂವೀ ಲೀಸ್ಟ್.. ಯಾಕಂದ್ರೆ ವಿಕ್ಟರಿ ಹಾಗೆ ಅಧ್ಯಕ್ಷಗಳಂತಹ ಹಿಟ್ ಸಿನಿಮಾಗಳನ್ನ ನೀಡಿರೊ ನಿರ್ದೇಶಕ ನಂದಕಿಶೋರ್ ಹಾಗೆ ಶರಣ್ ಜೊತೆಯಾಗೆ ಮತ್ತೊಂದು ಸಿನಿಮಾವನ್ನ ಮಾಡಲಿದ್ಧಾರೆ.. ಆದ್ರೆ ಇದು ರಿಮೇಕ್ ಆರ್ ಸ್ವಮೇಕ್ ಅನ್ನೋದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ..
ಇವ್ರು ಮಾತ್ರವಲ್ಲ ಆಕಾಶ್ ಹಾಗೆ ಪ್ರೇಮ್ ಅಡ್ಡಗಳಂತಹ ಸಿನಿಮಾ ನೀಡಿರೋ ನಿರ್ದೇಶಕರಾದ ಮಹೇಶ್ ರಾವ್ ಸಹ ಈ ಲೀಸ್ಟ್ ನಲ್ಲಿದ್ದಾರೆ.. ಇವ್ರು ಕೂಡ ಶರಣ್‍ಗೆ ಆಕ್ಷನ್‍ಕಟ್ ಹೇಳಲಿದ್ಧಾರೆ..
ಇನ್ನೂ ಸಿಂಪಲ್ ಸುನಿ ಕೂಡ ಇದೇ ಹಾದಿಯಲ್ಲಿರೋ ಮತ್ತೊಬ್ಬ ನಿರ್ದೇಶಕ.. ಸದ್ಯಕ್ಕೆ ಆಪರೇಷನ್ ಅಲ್ಲಮ್ಮ ಅನ್ನೋ ಸಿನಿಮಾವನ್ನ ಸಿದ್ದ ಮಾಡ್ತಿರೋ ಈ ಡೈರೆಕ್ಟರ್ ಇದಾದ ಬಳಿಕವೇ ಶರಣ್ ಜೊತೆಗೆ ಸಿಂಪಲ್ ಆದ್ರೂ ಸೂಪರ್ ಅನ್ನಿಸೋ ಚಿತ್ರವನ್ನ ಮಾಡಲಿದ್ದಾರೆ..
ಸದ್ಯಕ್ಕೆ ರಿಲೀಸ್‍ಗೆ ರೆಡಿ ಇರೋ ನಟರಾಜ್ ಸರ್ವಿಸ್ ಸಿನಿಮಾವನ್ನ ಬಿಟ್ಟು ಇನ್ನೂಳಿದಂತೆ 6 ಸಿನಿಮಾಗಳಿಗೆ ಶರಣ್ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ.. ಈ ಎಲ್ಲ ಚಿತ್ರಗಳು ಬೇರೆಯದ್ದೆ ರೀತಿಯ ಸ್ಟೋರಿಯನ್ನ ಹೊಂದಿದ್ದು, ಇವುಗಳನ್ನ ಮುಗಿಸೋಕೆ ಕಡಿಮೆ ಅಂದ್ರು ಎರಡು ವರ್ಷ ಬೇಕು ಅಲ್ವ..? ಅದಕ್ಕೆ ಹೇಳಿದ್ದು ಶರಣ್ ಫುಲ್ ಬ್ಯೂಸಿ ಅಂತ..!!
Like us on Facebook The New India Times
POPULAR STORIES :
ಕಾವೇರಿಗಾಗಿ ಮಣ್ಣು ತಿಂದು ವಿನೂತನ ಪ್ರತಿಭಟನೆ..!
ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!
ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!