ಪದ್ಮಭೂಷಣ, ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಟ ಹಾಗೂ ನಿರ್ಮಾಪಕ ಶಶಿ ಕಪೂರ್ (79) ವಿಧಿವಶರಾಗಿದ್ದಾರೆ.
1960ರಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಶಶಿ ಕಪೂರು. ಇವರ ತಂದೆ ಪೃಥ್ವಿರಾಜ್ ಕಪೂರ್. ದಿ. ಜಿನ್ನಿಫರ್ ಕೆಂಡಲ್ ಶಶಿ ಕಪೂರ್ ಅವರ ಪತ್ನಿ. ರಾಜ್ ಕಪೂರ್ ಹಾಗೂ ಶಿಮ್ಮಿ ಕಪೂರು ತಮ್ಮಂದಿರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶಶಿಕಪೂರ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.