ಕರಾವಳಿ ಬೆಡಗಿ ಶಾಸ್ತ್ರ ಎನ್ ಶೆಟ್ಟಿ ಮಿಸ್ ಕ್ವೀನ್ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಉಡುಪಿಯ ಶಶಿ ಶೆಟ್ಟಿ ಮತ್ತು ಶರ್ಮಿಳಾ ದಂಪತಿ ಪುತ್ರಿ ಶಾಸ್ತ್ರ ಹೈ ಹೀಲ್ಸ್ ಹಾಕಿ ವಾಕಿಂಗ್ ಫಿಟ್ ನೆಸ್ , ಪೋಸಿಂಗ್ ನಲ್ಲಿ ನಿರತರಾಗಿದ್ದಾರೆ.
ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ನಡೆದ ಮಿಸ್ ಕ್ವೀನ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. 5 ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ 22 ಸ್ಪರ್ಧಿಗಳು ಪಾಲ್ಗೊಂಡಿದ್ದರು. ತೀವ್ರ ಸ್ಪರ್ಧೆ ಎದುರಿಸಿ ಮಿಸ್ ಕ್ವೀನ್ ಕರ್ನಾಟಕ ಆಗಿ ಹೊರಹೊಮ್ಮಿದ್ದಾರೆ. ಕರಾವಳಿ ಕಲೆ ಯಕ್ಷಗಾನದ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದಿದ್ದರು.
ಕರಾವಳಿ ಐಕಾನ್, ಮಿಸ್ ಮಂಗಳೂರು ಸ್ಪರ್ಧೆ ಗೆದ್ದು 2018 ರ ಜನವರಲ್ಲಿ ನಡೆದ ಮಿಸ್ ಸೌತ್ ಇಂಡಿಯಾ ಸ್ಪರ್ಧೆಗೆ ನೇರ ಪ್ರವೇಶ ಪಡೆದಿದ್ದರು.