No menu items!
30.9 C
Munich
Thursday, June 18, 2026

ನಂಬಿ ಬಂದವಳ ನಡುನೀರಲ್ಲಿ ಕೈಬಿಟ್ಟ ‌….!

Must read

ಮದುವೆಯಾಗುವುದಾದರೇ ನಿನ್ನನ್ನೇ ಎಂದು‌ ಹಠ ಹಿಡಿದು ಮದುವೆಯಾದ…! ಸಂಸಾರವನ್ನೂ ನಡೆಸಿ, ನಿನ್ನ ದಾರಿ ನಿನ್ನದು, ನನ್ನ ದಾರಿ ನನ್ನದು ಎಂದು ಹೇಳಿ ದೂರಾಗಿದ್ದಾನೆ…!


ಇದು ಹಾವೇರಿಯಲ್ಲಿ ನಡೆದಿರುವ ಘಟನೆ. ಸೆಕೆಂಡ್ ಪಿಯುಸಿ ವ್ಯಾಸಂಗ ಮಾಡಿರುವ ರಾಣೆಬೆನ್ನೂರಿನ ಯುವತಿ ಬ್ಯಾಂಕ್ ಒಂದರಲ್ಲಿ ಕೆಲಸಕ್ಕೆ ಅಂತ ಸೇರಿದ್ದಳು. ಈಕೆಗೆ ಹಾವೇರಿ ನಗರದ ಆಟೋ‌ ಚಾಲಕ ಮುತ್ತುರಾಜ್ ನ ಪರಿಚಯವಾಗಿದೆ. ಇಬ್ಬರ ನಡುವೆ ಸ್ನೇಹ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದೆ. ದೇವಸ್ಥಾನದಲ್ಲಿ ಮದುವೆಯಾಗಿ ಕೆಲವು‌ ತಿಂಗಳು ಸಂಸಾರ ನಡೆಸಿ ಈಗ ಬಿಟ್ಟು ಹೋಗಿದ್ದಾನೆ.


ಈತನಿಗೆ ಮನೆಯಲ್ಲಿ ಬೇರೊಂದು‌ ಮದುವೆ ನಿಶ್ಚಯ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನೊಂದ ಯುವತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ನಿಶಾರ್ಡ ಸಂಸ್ಥೆ ಅಧ್ಯಕ್ಷೆ ರುಕ್ಷಿಣಿ ಸಾಹುಕಾರ ಹೇಳಿದ್ದಾರೆ.‌ ಈ ಸಂಸ್ಥೆ ಯುವತಿಗೆ ಬೆಂಬಲಕ್ಕೆ ನಿಂತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article