ಹರಿಯುವ ಹೊಳೆ ಪಕ್ಕದಲ್ಲೆ ಶವಸಂಸ್ಕಾರ

Date:

ಜೀವದ ಹಂಗು ತೊರೆದು ಹರಿಯುವ ಹೊಳೆ ಪಕ್ಕದಲ್ಲೇ ಮೃತರ ಅಂತ್ಯ ಸಂಸ್ಕಾರ ನಡೆದಿರುವ ಘಟನೆ ಹನೂರು ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯ್ತಿಗೆ ಸೇರಿದ ಅಂಬಿಕಾಪುರ ಗ್ರಾಮದಲ್ಲಿ ನಡೆದಿದೆ. ಕಳೆದ ವಾರ ಗ್ರಾಮದ ಪಾಪಮ್ಮ ಅವರ ಮಗ ಷಣ್ಮುಖ ಎಂಬವರು ಮೃತಪಟ್ಟಿದ್ದರು. ಸ್ಮಶಾನ ಜಾಗ ಇಲ್ಲದ ಕಾರಣ ಉಡುತೊರೆ ಹಳ್ಳದ ಬಳಿ ಅಂತ್ಯಕ್ರಿಯೆ ಮಾಡಲಾಗಿತ್ತು.

ಸತತ ಮಳೆಯಿಂದಾಗಿ ಉಡುತೊರೆ ಹಳ್ಳ ತುಂಬಿ ಹರಿದ ಪರಿಣಾಮ ಹೂತು ಹಾಕಿದ್ದ ಶವವೇ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಈ ಮಧ್ಯೆ ಶನಿವಾರ ಪಳನಿಯಮ್ಮ ಎಂಬವರು ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಯನ್ನೂ ಉಡುತೊರೆ ಹಳ್ಳದಲ್ಲೇ ಮಾಡಲಾಗಿದೆ. ಹಳ್ಳ ಏನಾದ್ರೂ ಮತ್ತೆ ತುಂಬಿ ಹರಿದರೆ ಶವವೂ ನೀರಿನಲ್ಲೇ ಕೊಚ್ಚಿ ಹೋಗುವ ಆತಂಕವಿದೆ. ಗ್ರಾಮದಲ್ಲಿ ಸ್ಮಶಾನವಿಲ್ಲ. ಸತ್ತವರನ್ನ ಹಳ್ಳದಲ್ಲೇ ಅಂತ್ಯಕ್ರಿಯೆ ಮಾಡುವಂತಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಸ್ಮಶಾನವಿಲ್ಲದೆ ಶವ ಸಂಸ್ಕಾರಕ್ಕೆ ಪರದಾಡುತ್ತಿದ್ದೇವೆ. ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ನಮಗೆ ವ್ಯವಸ್ಥೆ ಮಾಡಿಲ್ಲ ಎಂದು ಅಂಬಿಕಾಪುರ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ರು..

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...