ಕೇರಳ, ಕರಾವಳಿ ಭಾಗದಿಂದ ಮಲೆನಾಡಿಗೂ ಮಹಾಮಾರಿ ನಿಫಾ ವೈರಸ್ ಹೆಜ್ಜೆ ಇಟ್ಟಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಸಾಗರದ ಶಿರವಂತೆ ಗ್ರಾಮದ ಯುವಕ ಮಿಥುನ್ ಎಂಬುವವರು ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇವರಿಗೆ ನಿಫಾ ತಗುಲಿರಬಹುದು ಎಂಬ ಆತಂಕ ಮನೆಮಾಡಿತ್ತು.
ರೋಗುಯ ರಕ್ತದ ಮಾದರಿಯನ್ನು ಪುಣೆಯ ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದರು. ಇದೀಗ ಪರೀಕ್ಷೆಯ ವರದಿ ಬಂದಿದ್ದು, ನಿಫಾ ವೈರಸ್ ನೆಗಟೀವ್ ಎಂದು ಬಂದಿದೆ.
ಮಿಥುನ್ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದರು. ಆ ಭಾಗದಲ್ಲಿ ನಿಫಾ ಕಾಣಿಸಿಕೊಂಡಿದ್ದರಿಂದ ಊರಿಗೆ ಮರಳಿದ್ದರು. ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಪಗೆ ದಾಖಲಿಸಲಾಗಿತ್ತು. ಹೀಗಾಗಿ ನಿಫಾ ತಗುಲಿರಬಹುದೆಂಬ ಆತಂಕ ಮೂಡಿತ್ತು. ಇದೀಗ ನಿಫಾ ಸೋಂಕು ತಗುಲಿಲ್ಲ ಎಂಬ ವರದಿ ಬಂದಿರುವುದರಿಂದ ಆತಂಕ ದೂರವಾಗಿದೆ.