ನಾಳೆಯಿಂದ ಶಿರಾಢಿಘಾಟ್ ನಲ್ಲಿ ಬಸ್ ಸೇರಿದಂತೆ ಪ್ರಯಾಣಿಕರ ಎಲ್ಲಾ ವಾಹನಗಳ ಸಂಚಾರ ಆರಂಭವಾಗಲಿದೆ.
ಅ.3ರಿಂದ ಬಸ್ ಮತ್ತು ಇತರೆ ಪ್ರಯಾಣದ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಟ್ರಕ್, ಭಾರಿ ವಾಹನ ಹಾಗೂ ಇತರೆ ಸರಕು ವಾಹನಗಳಿಗೆ ಅವಕಾಶವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಹಾಸನ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಖಾಸಗಿ ಬಸ್ ಸಂಚಾರಕ್ಕೂ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಶಿರಾಢಿ ಘಾಟಿಯಲ್ಲಿ ಕುಸಿತಗೊಂಡ 12 ಕಡೆಗಳ ಪೈಕಿ 8 ಕಡೆ ಅಪಾಯವಿಲ್ಲ. ಅಪಾಯದ ಸಾಧ್ಯತೆ ಇರುವ ನಾಲ್ಕುಕಡೆಗಳಲ್ಲಿ ಎಚ್ಚರಿಕೆ ವಹಿಸಲಾಗುತ್ತೆ ಅಂತ ತಿಳಿಸಿದ್ದಾರೆ.
ಶಿರಾಢಿಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಚಾರ್ಮುಡಿಘಾಟ್ ನಲ್ಲಿ ವಾಹನ ಸಂಚಾರ ಹೆಚ್ಚಿತ್ತು. ಇದೀಗ ಶಿರಾಢಿ ಸಂಚಾರ ಆರಂಭವಾದಮೇಲೆ ಚಾರ್ಮುಡಿ ಘಾಟಿಯ ದುರಸ್ತಿ ಕಾರ್ಯ ಕೈಗೊಳ್ಳೋದಾಗಿ ಸೆಂಥಿಲ್ ಹೇಳಿದ್ದಾರೆ.