ಶರ್ಟ್ ಡ್ರೆಸ್ ಎಂಬ ನ್ಯೂ ಟ್ರೆಂಡ್

Date:

ಫ್ಯಾಷನ್ ಜಗತ್ತು ದಿನನಿತ್ಯ ಅಪಡೇಟ್ ಆಗ್ತಾನೇ ಇರುತ್ತೆ. ಇವತ್ತಿನ ಡ್ರೆಸ್ ಟ್ರೆಂಡ್ ಇನ್ನೂಂದ ವಾರಕ್ಕೆ ಹಳೆಯದಾಗುತ್ತೆ…! ಇಂದು ಹಳೆಯದಾಗಿರೋದು ಮತ್ತೆ ಮುಂದೊಂದು ದಿನ ಹೊಸ ಅಪಡೇಟ್ ಪಡೆದು, ಕೊಂಚ ಬದಲಾಗಿ ಬಂದ್ರು ಮತ್ತೆ ಹೊಸ ಫ್ಯಾಶನ್ ಸೃಷ್ಠಿಸುತ್ತೆ…!


ಈಗ ಅಂತಹ ಹೊಸ ಟ್ರೆಂಡ್‍ಗಳಲ್ಲಿ ಶರ್ಟ್ ಡ್ರೆಸ್ ಹವಾ ಜೋರಾಗಿದೆ…! ಶರ್ಟ್, ಟೀ-ಶರ್ಟ್, ಟಾಪ್ಸ್, ಹಾಕಿಕೊಂಡು ನಿಮಗೆ ಬೇಜಾರಾಗಿದ್ದಲ್ಲಿ ಶರ್ಟ್ ಡ್ರೆಸ್ ನಿಮ್ಮ ಮೂಡ್ ಚಿಲ್ ಮಾಡೋದ್ರಲ್ಲಿಒ ಸಂದೇಹವೇ ಇಲ್ಲ…!
• ಹೌದು ಹೆಸರೇ ಸೂಚಿಸೊ ರೀತಿಯಲ್ಲಿ ಶರ್ಟ್ ರೂಪವಿರೋ ಈ ಡ್ರೆಸ್ ಶರ್ಟ್‍ನಂತೆ ಕಾಲರ್ ಹೊಂದಿರುತ್ತದೆ. ಆದರೆ, ಮಿಕ್ಕ ಭಾಗ ಮಾತ್ರ ಫ್ಯಾಶನ್ ಟಚ್‍ನೊಂದಿಗೆ ವೆರೈಟಿ ಡ್ರೆಸಾಗಿ ಇದೀಗ ಹೊಸ ಟ್ರೆಂಡ್ ಸೃಷ್ಟಿಸಿದೆ.
• ಒಂದೇ ಪೀಸ್‍ನಲ್ಲಿರುವ ಶರ್ಟ್ ಡ್ರೆಸ್ ಫ್ಯಾಶನಿಷ್ಟಗಳಿಗೆ ಮೊಸ್ಟ್ ಫೇವರೇಟ್ ಆ್ಯಂಡ್ ಕಂಫರ್ಟೆಬಲ್ ಆಗಿ ಮಾರ್ಪಟ್ಟಿದೆ.
• ಕ್ಯಾಶುಯಲ್, ಔಟಿಂಗ್‍ಗೆ, ಶಾಪಿಂಗ್‍ಗೆ ಮೊಸ್ಟ್ ಫೇವರೆಟ್ ಹಾಗೂ ಟ್ರೆಂಡಿಯಾಗಿರುವ ಶರ್ಟ್ ಡ್ರೆಸ್ ಕಾಲೇಜು ಹುಡುಗಿಯರ್ ನಿತ್ಯದ ಚಾಯ್ಸ್ ಲಿಸ್ಟನಲ್ಲಿವೆ.
• ಪ್ಲೇನ್, ಪ್ರಿಂಟೆಡ್, ಜೀನ್ಸ್ ಬಟ್ಟೆಗಳಲ್ಲಿಯೂ ಲಭ್ಯ.


• ನೀಲೆಂತ್, ಲಾಂಗ್ ಶರ್ಟ್ ಡ್ರೆಸ್, ಶಾರ್ಟ್ ಡ್ರೆಸ್ಗಳನ್ನು ನಮ್ಮ ಅಭಿರುಚಿಗೆ ತಕ್ಕಂತೆ ಕೊಳ್ಳಬಹುದು.
• ಈಗಾಗಲೇ ನಿಮ್ಮ ಬಳಿ ಪ್ಲೇನ್ ಶರ್ಟ್ ಡ್ರೆಸ್ ಇದ್ದು ಬೋರಾಗಿದ್ರೆ ಆ ಉಡುಪನ್ನು ಧರಿಸಿ ಸೊಂಟಕ್ಕೊಂದು ನಿಮಗೆ ಬೇಕಾದ ಬೆಲ್ಟ್ ಹಾಗೂ ಅದಕ್ಕೆ ಮ್ಯಾಚ್ ಆಗುವ ಸ್ನಿಕರ್ಸ್/ ಬೂಟ್ಸ್ ಧರಿಸಿದ್ರೆ, ಶರ್ಟ್ ಡ್ರೆಸ್‍ನ ಹೊಸ ಲುಕ್ ನಿಮ್ಮನ್ನು ಕಂಗೊಳಿಸಬಲ್ಲದು.
• ಸ್ಲೀವ್‍ಲೆಸ್, ತ್ರಿಫೋರ್ಥ್, ಪುಲ್ ಸ್ಲೀವ್ಸ್, ಹಾಫ್ ಸ್ಲೀವ್ಸ್‍ನಲ್ಲಿ ಶರ್ಟ ಡ್ರೆಸ್ ದೊರೆಯುತ್ತದೆ.


• ಕೇವಲ ಶರ್ಟ್ ಡ್ರೆಸ್ ಹಾಕೋಕೆ ನಿಮಗೆ ಅನ್‍ಕಂಫರ್ಟ್ ಅನಿಸಿದ್ರೆ ಲೆಗ್ಗಿಂಗ್ಸ್ ಹಾಗೂ ಜೆಗ್ಗಿಂಗ್ಸ್‍ನೊಂದಿಗೆ ಜೋಡಿಸಿ ಧರಿಸಬಹುದು. ಇದೊಂದು ಎಲ್ಲ ಸೀಸನ್‍ಗೂ ಹೇಳಿ ಮಾಡಿಸಿದ ಸ್ಟೈಲ್.

  • ಸುರೇಖಾ ಪಾಟೀಲ, ಹುಬ್ಬಳ್ಳಿ

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...