ಶಿವಭಕ್ತೆಯೊಬ್ಬರು ನಾಲಿಗೆ ಕತ್ತರಿಸಿ ಅರ್ಪಿಸಿದ ಘಟನೆ ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ.
ಫುರ್ತುಗೊಂಡ್ ಎಂಬುವವರ ಪತ್ನಿ 28ವರ್ಷದ ಸೀಮಾಭಾಯಿ ನಾಲಿಗೆ ಕತ್ತರಿಸಿಕೊಂಡವರು. ಜಿಲ್ಲೆಯ ನುನೆರಾ ಗ್ರಾನದಲ್ಲಿರುವ ಶಿವದೇವಾಲಯದಲ್ಲಿ ಬುಧವಾರ ಈ ಘಟನೆ ನಡೆದಿದೆ.
ಶಿವರಾತ್ರಿ ಪ್ರಯುಕ್ತ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದ ಸೀಮಾಭಾಯಿ ಶಿವಲಿಂಗದ ಮುಂದೆ ಏಕಾಏಕಿ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸುಧಾರಿಸಿದೆ.